ತಾನು ಹೆತ್ತ ಮಗಳನ್ನೇ ಪಾಪಿ ತಂದೆಯೋರ್ವ ಕೊಂದು ಸಮಾಧಿ ಮಾಡಿದ ಹೇಯ ಕೃತ್ಯ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ (ಅ.13): ತಾನು ಹೆತ್ತ ಮಗಳನ್ನೇ ಕೊಂದು ಪಾಪಿ ತಂದೆಯೋರ್ವ ಸಮಾಧಿ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗಗುತ್ತಿದುರ್ಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿಂಗಪ್ಪ ಎನ್ನುವಾತ ಈ ಕೃತ್ಯ ಎಸಗಿದ್ದಾನೆ.
ಗುತ್ತಿದುರ್ಗದ ಮಹಿಳೆ ಶಶಿಕಲಾಳನ್ನ ಎರಡನೇ ವಿವಾಹವಾಗಿದ್ದ ನಿಂಗಪ್ಪ ಮೊದಲ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳಿದ್ದರೂ ಎರಡನೇ ವಿವಾಹವಾಗಿದ್ದ.
ಬೆಂಗಳೂರು; ಮನೆಗೆ ಬಂದ ಪ್ರಿಯಕರ ಪಿಪಿಇ ಕಿಟ್ ಧರಿಸಿದ್ದ.. ಗಂಡನೆದುರೆ ಟೆಕ್ಕಿ ಹೆಂಡತಿ ಪರಾರಿ! ..
ಒಂದು ತಿಂಗಳ ಹಿಂದೆ ಎರಡನೇ ಹೆಂಡತಿಯ ಹೆಣ್ಣು ಮಗು ಸಿರಿಶಾ(03)ಳನ್ನು ಕೊಂದು ಹಾಕಿದ್ದಾನೆ. ಬಳಿಕ ಶವವನ್ನು ಹೂತಿಟ್ಟಿದ್ದಾನೆ.
ಇಪ್ಪತ್ತು ದಿನಗಳ ಹಿಂದೆ ಈ ಸಂಬಂಧ ಪತ್ನಿ ಶಶಿಕಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಗುತ್ತಿದುರ್ಗ ಗ್ರಾಮಸ್ಥರಿಂದ ಮಗು ಸಮಾಧಿ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಮತ್ತು ದಾವಣಗೆರೆ ಪೊಲೀಸ್ ಅಧಿಕಾರಿಗಳು ಇಂದು ಗುತ್ತಿದುರ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.