ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ: ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು

By Govindaraj S  |  First Published Feb 2, 2023, 9:24 AM IST

ಅವರು ಶಾಸಕರಾಗಲಿ‌ ಇವರು‌ ಮಂತ್ರಿಯಾಗಲಿ.. ಹೀಗೆ ರಾಜಕೀಯ ಬೆಂಬಲಿಗರು ತೇರಿಗೆ ಹರಕೆ ಹೊತ್ತು‌ ಬಾಳೆಹಣ್ಣು ಎಸೆಯೋದು ಸಾಮಾನ್ಯವಾಗಿತ್ತು. ಆದರೆ ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ರಥದ ಮೇಲೆ ಬಾಳೆಹ್ಣು ಎಸೆದಿದ್ದಾರೆ.


ವಿಜಯನಗರ (ಫೆ.02): ಅವರು ಶಾಸಕರಾಗಲಿ‌ ಇವರು‌ ಮಂತ್ರಿಯಾಗಲಿ.. ಹೀಗೆ ರಾಜಕೀಯ ಬೆಂಬಲಿಗರು ತೇರಿಗೆ ಹರಕೆ ಹೊತ್ತು‌ ಬಾಳೆ ಹಣ್ಣು ಎಸೆಯೋದು ಸಾಮಾನ್ಯವಾಗಿತ್ತು. ಆದರೆ ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ರಥದ ಮೇಲೆ ಬಾಳೆಹ್ಣು ಎಸೆದಿದ್ದಾರೆ. ಹೌದು! ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ರೈತರಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಕೊಡಲಿ ಎಂದು ಬರೆದು ರಥೋತ್ಸವಕ್ಕೆ ರೈತರು ಬಾಳೆ ಹಣ್ಣು ಎಸೆದಿದ್ದಾರೆ. 

ದೇಶದ ಬಹುದೊಡ್ಡ ಸಮಸ್ಯೆ ಅಂದ್ರೇ ರೈತರಿಗೆ ಕನ್ಯೆ ಕೊಡೊಲ್ಲ ನೌಕರರಿಗೆ ಕನ್ಯೆ ಕೊಡ್ತೀವಿ ಅನ್ನೋರ ಮನಸ್ಸು ಬದಲಾಗಲಿ. ಬಹುಸಂಖ್ಯಾ ಹೆಣ್ಣೆತ್ತವರ ಮನಸ್ಸು ಬದಲಾಗಲಿ ರೈತರಿಗೆ ಕನ್ಯಾಕೊಡಲಿ ಎಂದು ತಾಯಿ ದುರ್ಗಾ ಮಾತೆಗೆ ರೈತರು ನಮನ ಸಲ್ಲಿಸಿದ್ದಾರೆ.  ಜನರ ಮನಸ್ಸು ಬದಲಾಗಲಿ ರೈತರಿಗೆ ಕನ್ಯಾ ಕೊಡಲಿ ಎಂಬ ಬರಹದ ಬಾಳೆಹಣ್ಣನ್ನು ರೈತರ ಪರವಾಗಿ ಸಮರ್ಪಣೆ ಮಾಡಿದ ಯುವಕ, ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ ರೈತರಿಗೆ ಕನ್ಯೆ ಕೊಡುವಂತ ಮನಸ್ಥಿತಿ ಸರ್ವ ಜನಕ್ಕೂ ಕರುಣಿಸಲಿ ಎಂದು ಹಾರೈಕೆ ಮಾಡಿಕೊಂಡಿದ್ದಾನೆ.

Latest Videos

undefined

ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮಹೇಂದ್ರ ನಾಯಕ್!

ಅದ್ಧೂರಿಯಾಗಿ ಜರು​ಗಿದ ಜೋಡು ರಥೋ​ತ್ಸವ: ಬೆಟಗೇರಿ ನರಸಾಪೂರ ಮಧ್ಯದಲ್ಲಿರುವ ರಂಗಾವಧೂತರ ತಫೋ ಭೂಮಿಯಲ್ಲಿ ಮಂಗಳವಾರ ಸಂಜೆ ವೀರಪ್ಪಜ್ಜನವರ ಹಾಗೂ ರಂಗಪ್ಪಜ್ಜನವ​ರ ಗುರು- ಶಿಷ್ಯರ ಜೋಡು ರಥೋ​ತ್ಸ​ವ ಸಹ​ಸ್ರಾರು ಭಕ್ತರ ಹರ್ಷೋದ್ಘಾರಗಳ ಮಧ್ಯ ಅದ್ಧೂ​ರಿ​ಯಾಗಿ ಜರುಗಿತು. ಜಾತ್ರೆಯಲ್ಲಿ ನೆರೆದಿದ್ದ ಸಹಸ್ರಾರು ಸದ್ಭಕ್ತರು ರಥೋತ್ಸವದ ಪ್ರಾರಂಭವಾಗುತ್ತಿದ್ದಂತೆ ರಂಗಪ್ಪಜ್ಜ ಮಹಾರಾಜಕೀ ಜೈ, ವೀರಪ್ಪಜ್ಜ ಮಹಾರಾಜಕೀ ಜೈ ಹಾಗೂ ನಾಗಮ್ಮತಾಯಿ ಮಾತಾಕೀ ಜೈ, ಹರ ಹರ ಮಹಾದೇವ ಎಂಬ ಹರ್ಷೋದ್ಘಾರಗಳು ಮುಗಿಲು ಮುಟ್ಟಿ​ದ್ದ​ವು. 

ತಮ್ಮನಿಗಾಗಿ ಜೈಲು ಸೇರಿದ್ದರೂ ನನ್ನ ವಿರುದ್ಧ ಪತ್ನಿ ಕಣಕ್ಕಿಳಿಸಿದ: ಸೋಮಶೇಖರ ರೆಡ್ಡಿ

ಬೆಟಗೇರಿ ಮಂಜುನಾಥ ನಗರದ ನಾಗಲಿಂಗೇಶ್ವರ ಯುವಕ ಮಂಡಳ ಹಾಗೂ ಶಿವಾಜಿ ನಗರದ ವಿನಾಯಕ ಗೆಳೆಯರ ಬಳಗದವರು ಬೃಹತ್‌ ಗಾತ್ರದ ಹೂಮಾಲೆಯನ್ನು ಶ್ರದ್ಧಾ, ಭಕ್ತಿಯಿಂದ ಭಜನೆಯೊಂದಿಗೆ ರಂಗಪ್ಪಜ್ಜನವರ ಹಾಗೂ ವೀರಪ್ಪಜ್ಜನವರ ಗುರು- ಶಿಷ್ಯರ ತೇರುಗಳಿಗೆ ಅರ್ಪಿಸಿದ​ರು. ಈ ವೇಳೆ ನಂದಿವೇರಿ ಮಠದ ಶಿವಕುಮಾರ ಸ್ವಾಮಿಗಳು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಎಸ್‌.ಆರ್‌. ಬಸವಾ, ಗಣೇಶಸಿಂಗ್‌ ಬ್ಯಾಳಿ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರಪ್ಪ ಅರಣಿ, ರುದ್ರಪ್ಪ ಬಾದರದಿನ್ನಿ, ಭೋಜಪ್ಪ ಹೆಗ್ಗಡಿ, ಮಹದೇಹಸಾ ಮೇರವಾಡೆ, ಹೇಮಂತಗೌಡ ಬೆನಹಾಳ, ರಾಜು ಕಟಗಿ, ರಾಮಣ್ಣ ಗಡಗಿ, ಚಿದಾನಂದ ಕಾಕಿ, ಮಲ್ಲೇಶಪ್ಪ ಐಲಿ, ವಿಜಯ ಕಬಾಡಿ, ದುರ್ಗಾಸಿಂಗ್‌ ಕಾಟೇವಾಲ, ರಂಗಪ್ಪ ಹುಯಿಲಗೋಳ, ಅಶೋಕ ಮುಳಗುಂದ, ಗುರನಗೌಡ ಗೌಡ್ರ, ಕೆ.ವಿ. ಕುಂದಗೋಳ ಸೇರಿದಂತೆ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.

click me!