Bengaluru: ಉಲ್ಲಾಳ ವಾರ್ಡ್‌ನಲ್ಲಿ ಹೊಸ ರಸ್ತೆಯನ್ನೇ ಅಗೆದ ಟೆಲಿಕಾಂ ಕಂಪನಿ: ಆಕ್ರೋಶ

Published : Feb 02, 2023, 08:19 AM IST
Bengaluru: ಉಲ್ಲಾಳ ವಾರ್ಡ್‌ನಲ್ಲಿ ಹೊಸ ರಸ್ತೆಯನ್ನೇ ಅಗೆದ ಟೆಲಿಕಾಂ ಕಂಪನಿ: ಆಕ್ರೋಶ

ಸಾರಾಂಶ

ಉಲ್ಲಾಳ ವಾರ್ಡ್‌ನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಅಗೆಯುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ಟೆಲಿಕಾಂ ಸಂಸ್ಥೆಗಳ ಈ ಅದ್ವಾನಕ್ಕೆ ಸ್ಥಳೀಯ ಜನರು ಸಮಸ್ಯೆ ಅನುಭವಿಸಬೇಕಾಗ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೆಂಗೇರಿ (ಫೆ.02): ಉಲ್ಲಾಳ ವಾರ್ಡ್‌ನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಅಗೆಯುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ಟೆಲಿಕಾಂ ಸಂಸ್ಥೆಗಳ ಈ ಅದ್ವಾನಕ್ಕೆ ಸ್ಥಳೀಯ ಜನರು ಸಮಸ್ಯೆ ಅನುಭವಿಸಬೇಕಾಗ ಪರಿಸ್ಥಿತಿ ನಿರ್ಮಾಣವಾಗಿದೆ. ಉಲ್ಲಾಳ ವಾರ್ಡ್‌ನ ಮಾರುತಿ ನಗರದ ಸೊನ್ನೆನಹಳ್ಳಿಯ 1ನೇ ಅಡ್ಡರಸ್ತೆಯಿಂದ 34ನೇ ಅಡ್ಡ ರಸ್ತೆ ವರೆಗೂ ಇತ್ತೀಚೆಗೆ ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಲಾಗಿತ್ತು. 

ಟೆಲಿಕಾಂ ಕಂಪನಿಗಳು ಭೂಮಿ ಒಳಗೆ ಓಎಫ್‌ಸಿ ಕೇಬಲ್‌ ಅಳವಡಿಕೆ ಮಾಡುವುದಕ್ಕೆ ರಸ್ತೆಯನ್ನು ಅಗೆಯುತ್ತಿರುವುದರಿಂದ ಇಡೀ ರಸ್ತೆ ಗುಂಡಿ ಮಯವಾಗಿದೆ. ಇದರೊಂದಿಗೆ ಜಲಮಂಡಳಿಯ ಒಳ ಚರಂಡಿ ವ್ಯವಸ್ಥೆ, ಬೆಸ್ಕಾಂ ಕೇಬಲ್‌ಗಳಿಗೆ ಹಾನಿ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಕಾಮಗಾರಿ ವೇಳೆ ಜಲಮಂಡಳಿಯ ಕೊಳವೆ ಹಾಳಾಗಿ ಸುಮಾರು ನೂರಾರು ಮನೆಗಳಿಗೆ ಐದು ದಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಜನರು ಹಣಕೊಟ್ಟು ಟ್ಯಾಂಕರ್‌ ನೀರು ಖರೀದಿ ಮಾಡಿ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತ್ವರಿತವಾಗಿ ಸಮಸ್ಯೆ ಪರಿಹಾರ ಸಂಬಂಧಪಟ್ಟಮಾಡುವಂತೆ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.

ಇನ್ನು ರಸ್ತೆಯ 20 ಅಡಿಗೆ ಒಂದರೆಂತೆ ಗುಂಡಿಗಳನ್ನು ಅಗೆಯಲಾಗಿದೆ. ತೆಗೆದ ಗುಂಡಿಗಳನ್ನು ಹಾಗೇಯೇ ಬಿಡಲಾಗಿದೆ. ಇದರಿಂದ ಕೆಲವಡೆ ರಸ್ತೆ ಸಂಪೂರ್ಣವಾಗಿ ಬಂದ್‌ ಆಗಿದೆ. ಮನೆಯಿಂದ ವಾಹನಗಳನ್ನು ಹೊರ ತೆಗೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಗೆದ ಗುಂಡಿ ಪಕ್ಕದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಮಕ್ಕಳು, ಮಹಿಳೆಯರು, ಹಿರಿಯನಾಗರಿಕರು ಆತಂಕದಲ್ಲಿ ಓಡಾಡಬೇಕಾಗ ಸ್ಥಿತಿ ಇದೆ.

ಅಪ್ಪಣ್ಣ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಲು ಕ್ರಮ: ಸಿಎಂ ಬೊಮ್ಮಾಯಿ

ಈ ಬಗ್ಗೆ ಉಲ್ಲಾಳ ವಾರ್ಡ್‌ ಕಮಿಟಿ ಸಭೆಯಲ್ಲಿ ಕಂಪನಿಗಳ ವಿರುದ್ಧ ಸ್ಥಳೀಯ ನೋಡಲ್‌ ಆಫೀಸರ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅನುಮತಿ ಇಲ್ಲದೇ ರಸ್ತೆ ಅಗೆಯುವುದಕ್ಕೆ ಅವಕಾಶ ಮಾಡಿಕೊಟ್ಟರೆ ಸಂಬಂಧಪಟ್ಟ ಬಿಬಿಎಂಪಿ ಎಂಜಿನಿಯರ್‌ ಅವರ ಸಂಬಳ ಕಡಿತಗೊಳಿಸಿ ಆ ಹಣದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದರೂ ಪಾಲಿಕೆ ಎಂಜಿನಿಯರ್‌ಗಳು ಎಚ್ಚೆತ್ತುಕೊಂಡಿಲ್ಲ.

PREV
Read more Articles on
click me!

Recommended Stories

ಪುನೀತ್ ಕೆರೆಹಳ್ಳಿ ತಂಡದಿಂದ ಅಕ್ರಮ ವಲಸಿಗರ ಬೇಟೆ: ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘಟನೆಗಳು ಮಾಡಬೇಕೇ?
ಸಿದ್ದರಾಮಯ್ಯ ಮೇಲೆ ದೈವಕೃಪೆ: ಹಾಲುಮತದ ಬಗ್ಗೆ ಮಾತನಾಡಿದರೆ ಸರ್ವನಾಶ; ರಾಜಕಾರಣಿಗೆ ಕೋಡಿಶ್ರೀ ವಾರ್ನ್!