ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸೋದಾಗಿ ಸರ್ಕಾರಕ್ಕೆ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ (ಮೇ.19): ರೈತರ (Farmers) ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೆದ್ದಾರಿ (Highway) ತಡೆದು ಪ್ರತಿಭಟನೆ (Protest) ನಡೆಸೋದಾಗಿ ಸರ್ಕಾರಕ್ಕೆ (Government) ರೈತ ಮುಖಂಡರು ಎಚ್ಚರಿಕೆ (Warn) ನೀಡಿದ್ದಾರೆ. ಇಂದು ಹಾವೇರಿಯಿಂದ ಸಿಎಂ ಬೊಮ್ಮಾಯಿಯವರ (CM Basavaraj Bommai) ಕ್ಷೇತ್ರ ಶಿಗ್ಗಾವಿವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತ ಸಂಘದ ಮುಖಂಡರು, ಪಟ್ಟು ಬಿಡದೇ ಹೋರಾಟ ನಡೆಸಿದರು. ಶಿಗ್ಗಾವಿಯಲ್ಲಿರುವ ಸಿಎಂ ಬೊಮ್ಮಾಯಿ ಕಚೇರಿ ಎದುರು ಪ್ರತಿಭಟನೆ ಕೂಡಾ ನಡೆಸಿದರು. ಕೇಂದ್ರ ಸರ್ಕಾರ ವಾಪಾಸ ಪಡೆದಿರೋ ಕೃಷಿ ಕಾಯಿದೆಗಳನ್ನು ರಾಜ್ಯ ಸರ್ಕಾರವೂ ವಾಪಾಸ್ ಪಡೆಯಲಿ ಹಾಗೂ ಗೋವಿನ ಜೋಳ, ರಾಗಿ ಖರೀದಿ ಕೇಂದ್ರಗಳನ್ನು ಸರ್ಕಾರ ಆರಂಭಿಸಬೇಕು.
undefined
ಹೀಗೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಿಗ್ಗಾವಿಯ ಸಿಎಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ರೈತ ಮುಖಂಡರ ಮನವೊಲಿಕೆಗೆ ಆಗಮಿಸಿದ ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ ಹಾಗೂ ಎಸ್ ಪಿ ಹನುಮಂತರಾಯ ಮೇ 27 ರ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿಯವರ ಭೇಟಿಗೆ ಅವಕಾಶ ಮಾಡಿಕೊಡುತ್ತೇವೆ. ಸಿಎಂ ಬೊಮ್ಮಾಯಿಯವರ ಜೊತೆ ಚರ್ಚೆಗೆ ಅವಕಾಶ ಕೊಡಿಸೋದಾಗಿ ಭರವಸೆ ನೀಡಿದರು. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಕಾರಣ ಸಿಎಂ ಯಾವುದೇ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ.
Haveri: ಈ ಬಾರಿ ಸಚಿವ ಸಂಪುಟದಲ್ಲಿ ನನಗೂ ಒಂದು ಅವಕಾಶ ಸಿಗುತ್ತೆ: ಶಾಸಕ ನೆಹರೂ ಓಲೆಕಾರ್
ಮೇ 27 ರ ಬಳಿಕ ಬೆಂಗಳೂರಿನಲ್ಲಿ ಸಿಎಂ ಭೇಟಿಯಾಗಿ ಚರ್ಚೆ ಮಾಡಬಹುದು. ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಸಿಎಂ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ಪ್ರತಿಭಟನೆ ಅಂತ್ಯಗೊಳಿಸಿ ಎಂದು ಡಿ.ಸಿ ಸಂಜಯ್ ಶೆಟ್ಟೆಣ್ಣವರ ಭರವಸೆ ನೀಡಿದರು. ಡಿ.ಸಿ ಭರವಸೆ ಬಳಿಕ ಪ್ರತಿಭಟನೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದರು. ಮುಂದೆ ಬೇಡಿಕೆಗಳು ಈಡೇರದಿದ್ದರೆ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿ ರೈತ ಮುಖಂಡರು ಪ್ರತಿಭಟನೆ ಅಂತ್ಯಗೊಳಿಸಿದರು. ಹಾವೇರಿ ಜಿಲ್ಲಾದ್ಯಕ್ಷ ರಾಮಣ್ಣ ಕೆಂಚೆಳ್ಳೆರ, ಮಲ್ಲಿಕಾರ್ಜುನ ಬಳ್ಳಾರಿ, ಎಮ್.ಎಸ್.ನಾಯಕ್ ಸೇರಿದಂತೆ ಹಲವು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Haveri: ಶಿಗ್ಗಾವಿಯ ಟಾಕೀಸ್‌ನಲ್ಲಿ ಫೈರಿಂಗ್ ಪ್ರಕರಣ: ಆರೋಪಿಯನ್ನು ಬಂಧಿಸದಿದ್ದರೆ ಬೀದಿಗಿಳಿದು ಹೋರಾಟ
ದಾಖಲೆ ಇಲ್ಲದ 58 ಲಕ್ಷ ರೂ. ಹಣ ಪತ್ತೆ: ಹಾವೇರಿ ನಗರದ ಶಿವಶಕ್ತಿ ಪ್ಯಾಲೆಸ್ ಲಾಡ್ಜ್‌ನಲ್ಲಿ ದಾಖಲೆ ಇಲ್ಲದ 58 ಲಕ್ಷ ರೂ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪೊಲೀಸರು ದಾಖಲೆ ಇಲ್ಲದ ಹಣ ಇಟ್ಟುಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ. ಯಾವುದೋ ಅಕ್ರಮ ಎಸಗುವ ಉದ್ದೇಶದಿಂದ ಆರೋಪಿಗಳು ಸೂಕ್ತ ದಾಖಲೆಗಳಿಲ್ಲದ ಹಣ ಇಟ್ಟುಕೊಂಡಿದ್ರು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಅರೋಪಿಗಳನ್ನ ರವಿ, ಗಣಪತಿ, ಅನಿಲ್, ಚನ್ನಪ್ಪ ಅಂತ ಗುರುತಿಸಲಾಗಿದೆ. ಮೂವರು ಆರೋಪಿಗಳು ಬೆಳಗಾವಿ ಮೂಲದವರು, ಒಬ್ಬ ಬೆಂಗಳೂರಿನ ಕೆಂಗೇರಿಯವನು ಅಂತ ತಿಳಿದು ಬಂದಿದೆ. 58 ಲಕ್ಷ ರೂ. ಹಣ, ಹಣ ಎಣಿಸುವ ಎಲೆಕ್ಟ್ರಾನಿಕ್ ಯಂತ್ರ ವಶಕ್ಕೆ ಪಡೆದಿರೋ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರೋ ಪೊಲೀಸರು ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ.