ಕಾಫಿನಾಡಿನಲ್ಲಿ‌ ಮಳೆ‌ ಅಬ್ಬರ: ಮಲೆನಾಡು ಮಾತ್ರವಲ್ಲ, ಜಿಲ್ಲೆಯ ಬಯಲು ಸೀಮೆಯಲ್ಲೂ ಮಳೆ

By Govindaraj S  |  First Published May 19, 2022, 1:16 AM IST

ಸತತ ನಾಲ್ಕು ದಿನ ಮಳೆ ಎದುರಿಸಿದ್ದ ಕಾಫಿ ನಾಡು ಇದೀಗ ಮೇಲ್ಮೈ ಸುಳಿಗಾಳಿಯಿಂದ ಎದುರಾಗಿರುವ ವರುಣನ ಅಬ್ಬರ ಜೋರಾಗಿದೆ. ಮಲೆನಾಡು ಮಾತ್ರವಲ್ಲ, ಜಿಲ್ಲೆಯ ಬಯಲು ಸೀಮೆಯಲ್ಲೂ ನಿರೀಕ್ಷೆಗೂ ಮೀರಿ ಮಳೆ ಹಗಲು ರಾತ್ರಿ ಒಂದೇ ಸಮನೆ ಸುರಿಯುತ್ತಿದೆ. ಕೆರೆ ಕಟ್ಟೆಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಮೇ.19): ಸತತ ನಾಲ್ಕು ದಿನ ಮಳೆ ಎದುರಿಸಿದ್ದ ಕಾಫಿ ನಾಡು (Chikkamagaluru) ಇದೀಗ ಮೇಲ್ಮೈ ಸುಳಿಗಾಳಿಯಿಂದ ಎದುರಾಗಿರುವ ವರುಣನ ಅಬ್ಬರ ಜೋರಾಗಿದೆ. ಮಲೆನಾಡು ಮಾತ್ರವಲ್ಲ, ಜಿಲ್ಲೆಯ ಬಯಲು ಸೀಮೆಯಲ್ಲೂ ನಿರೀಕ್ಷೆಗೂ ಮೀರಿ ಮಳೆ (Rain) ಹಗಲು ರಾತ್ರಿ ಒಂದೇ ಸಮನೆ ಸುರಿಯುತ್ತಿದೆ. ಕೆರೆ ಕಟ್ಟೆಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

Latest Videos

undefined

ಮನೆಯಿಂದ ಹೊರಬರಲಾರದ ಪರಿಸ್ಥಿತಿ ಸೃಷ್ಟಿಸಿದ ಮಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ, ಆಗಾಗ ಬರುತ್ತಿರುವ ಮಳೆಯ ತೀವ್ರತೆ ನಿನ್ನೆ ತಡ ರಾತ್ರಿಯಿಂದ ಜೋರಾಗಿದ್ದು, ಇಂದು ಕೂಡ ಬಿಡುವಿಲ್ಲದೆ ಸುರಿಯಿತು. ಜನರು ಮನೆಯಿಂದ ಹೊರಗೆ ಹೋಗಲಾರದಷ್ಟು ಒಂದೇ ಸಮನೆ ಮಳೆ ಬರುತ್ತಿತ್ತು. ನಿರಂತರವಾಗಿ ಮಳೆ ಬರುತ್ತಿರುವುದರಿಂದ ತಣ್ಣನೆಗಾಳಿ ಬೀಸುತ್ತಿದ್ದು, ಮಲೆನಾಡಿನ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. 

Chikkamagaluru ನಗರಸಭೆ ಕಿರುಕುಳಕ್ಕೆ ಬೇಸತ್ತು ತನ್ನ ಗಾಡಿಗೆ ಬೆಂಕಿ ಇಟ್ಟ ವ್ಯಾಪಾರಿ!

ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾದ್ರೆ ಅನಾಹುತ ಸೃಷ್ಠಿ: ಜಿಲ್ಲೆಯ ಮಲೆನಾಡಿನಲ್ಲಿ ಪ್ರತಿಕೂಲ ಹವಮಾನ ಇದೆ. ಹೀಗೆಯೇ ಮಳೆ ಮುಂದುವರೆದರೆ ಸಾರ್ವಜನಿಕ ಆಸ್ತಿ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಭಾರತೀಯ ಹವಮಾನ ಇಲಾಖೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮಲೆನಾಡು ಭಾಗದಲ್ಲಿ 3 ದಿನಗಳ ಕಾಲ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 19 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಸಾರ್ವಜನಿಕರು ನದಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯಬಾರದು ಹಾಗೂ ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ, ಕೆಳಗೆ ನಿಲ್ಲದಂತೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ.

ಮಲೆನಾಡಲ್ಲಿ ಗಾಂಜಾ ಗಮ್ಮತ್ತು: ಮೂಡಿಗೆರೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ, ಮೂವರ ಬಂಧನ

ಎಲ್ಲಿ ಎಷ್ಟು ಮಳೆ: ಜಿಲ್ಲೆಯ ವಿವಿಧೆಡೆ ಕಳೆದ ಕಳೆದ 24 ಗಂಟೆಗಳಲ್ಲಿ ಬಿದ್ದಿರುವ ಮಳೆಯ ವಿವರ ಈ ರೀತಿ ಇದೆ. ಅಜ್ಜಂಪುರ 12ಮಿ.ಮೀ., ಶಿವನಿ- 10.1 ಬುಕ್ಕಾಂಬೂದಿ 11.3 ಕೊಪ್ಪ 16.5, ಹರಿಹರಪುರ- 10 ಜಯಪುರ- 19.8 ಬಸರೀಕಟ್ಟೆ 15.6. ಕಮ್ಮರಡಿ- 10.2. ಮೂಡಿಗೆರೆ- 21.1 ಕೊಟ್ಟಿಗೆಹಾರ- 16.8, ಗೋಣಿಬೀಡು- 27 ಜಾವಳಿ-20, ಕಳಸ-27, ಹಿರೇಬೈಲು- 14, ಶೃಂಗೇರಿ 12.6, ಕಿಗ್ಗ- 11.6, ಕೆರೆಕಟ್ಟೆ- 10.4ಕಡೂರು 15, ಬೀರೂರು- 13. ಸಿಂಗಟಗೆರೆ- 22 ಸಖರಾಯಪಟ್ಟಣ- 24, ಯಗಟಿ 6.6. ಚಿಕ್ಕಮಗಳೂರು- 21, ವಸ್ತಾರೆ- 24.6, ಜೋಳ್ದಾಳ್- 22 ಆಲ್ದೂರು- 23, ಕೆ.ಆರ್.ಪೇಟೆ- 22, ಅತ್ತಿಗುಂಡಿ 24.5  ಮಿ.ಮೀ. ಮಳೆಯಾಗಿದೆ.

click me!