Dharwadದಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ, ಶಾಸಕ ಬೆಲ್ಲದ ಮನೆಗೆ ಮುತ್ತಿಗೆ

By Suvarna News  |  First Published Jun 1, 2022, 3:54 PM IST

ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಅನ್ನದಾತರು ಕಂಗಾಲಾಗಿ ಧಾರವಾಡದಲ್ಲಿರುವ ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.


ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜೂ.1) : ಧಾರವಾಡ (Dharwad) ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭಗೊಂಡಿದೆ. ಸದ್ಯ ಜೂನ್ ಮೊದಲನೇಯ ವಾರದಲ್ಲಿ ಧಾರವಾಡಕ್ಕೆ ಮಳೆ (Rain) ಆಗಮಿಸುತ್ತೆ ಎಂಬ ನೀರಿಕ್ಷೆಯಲ್ಲಿ ಅನ್ನದಾತರು, ಬಿತ್ತನೆ ಕಾರ್ಯವನ್ನ ಆರಂಭ ಮಾಡಿದ್ದಾರೆ‌. ಇನ್ನೊಂದಡೆ ರೈತರಿಗೆ (Farmers) ಸಮರ್ಪಕವಾದ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ರೈತರು ಪರದಾಡುವಂತಾಗಿದೆ. 

Tap to resize

Latest Videos

ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ (Fertilizer) ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ರಸಗೊಬ್ಬರಕ್ಕಾಗಿ ಅಲೆದಾಡುತ್ತಿರುವ ಅನ್ನದಾತರು ಕಂಗಾಲಾಗಿ ಧಾರವಾಡದಲ್ಲಿರುವ ಶಾಸಕ ಅರವಿಂದ ಬೆಲ್ಲದ (MLA Arvind Bellad) ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. 

ಸೊಸೈಟಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರವೇ ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬರೀ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದ್ದು, ಬಿತ್ತನೆಗೆ ಪೂರಕವಾದ ಡಿ ಎ ಪಿ ಗೊಬ್ಬರವೇ ಧಾರವಾಡದಲ್ಲಿ ಸಿಗುತ್ತಿಲ್ಲ. ಶಾಸಕ ಅರವಿಂದ ಬೆಲ್ಲದ ಅವರು ಸರ್ಕಾರದಲ್ಲಿದ್ದು, ಅವರು ಈ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Ananth Raju Suicide Case ; ಅನಂತು ಜೊತೆ ರಿಲೇಷನಶಿಪ್ ಇದ್ದಿದ್ದು ನಿಜವೆಂದ ಗೆಳತಿ ರೇಖಾ

ಬಿತ್ತನೆ ಸಮಯದಲ್ಲಿ ರಸಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನವಾಗುತ್ತದೆ. ಬಿತ್ತುವ ಸಮಯ ಮುಗಿದು ಹೋದ ಮೇಲೆ ಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಧಾರವಾಡದಲ್ಲಿ ರಸಗೊಬ್ಬರದ ಅಭಾವ ಸೃಷ್ಠಿಯಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ.

ಇನ್ನು ಕೃಷಿ ಅಧಿಕಾರಿಗಳು ಗೊಬ್ಬರವನ್ನ ತರಸಿ ರೈತರಿಗೆ ಕೋಡಲು ಒಂದು ಕಡೆ ಮುಂದಾದ್ರೆ ಸೋಸೈಟಿ ಅವರು ಗೊಬ್ಬರವನ್ನು ಸಂಗ್ರಹಣ ಮಾಡಿ ಡಬಲ್ ದರಕ್ಕೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಅಂತವರನ್ನ ಕೃಷಿ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ. ಇನ್ನು ಕಡಿಮೆ ದರದಲ್ಲಿ ಸಿಗಬೇಕಾದ ದರ ಸದ್ಯ ಹೆಚ್ಚಿನ ದರಕ್ಕೆ‌ ಮಾರಾಟ ಮಾಡುವವರ ಹಡೆಮೂರಿ ಕಟ್ಟಬೇಕಿದೆ. ಮತ್ತೊಂದೆಡೆ ಗೊಬ್ಬರ ಎಷ್ಟು ಬಂದಿದೆ ಅನ್ನುವುದರ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿಯನ್ನ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ರೈತರು ಒತ್ತಾಯ ಮಾಡಿದ್ದಾರೆ. 

Chitradurga; ಚಲವಾದಿ ಗುರುಪೀಠದಲ್ಲಿ ಸಮಾಜದ ಸಭೆ, ಎರಡು ಗುಂಪುಗಳ ವಾಗ್ವಾದ

ಯೂರಿಯಾ ಡಿಎಪಿ ಅವಶ್ಯಕತೆ ಇದೆ. 11,000 ಟನ್ ಗೊಬ್ಬರ ಸ್ಟಾಕ್ ಇದೆ. ಸದ್ಯ ಡಿ ಎ ಪಿ 12,710 ಟನ್ ಬೇಕಿತ್ತು. ಆದರೆ 13,500 ಟನ್ ಬಂದಿದೆ. ಆದರೆ ರೈತರು ಡಿಎಪಿ ಗೊಬ್ಬರ ವನ್ನ ಕೇಳುತ್ತಿದ್ದಾರೆ. ಡಿಎಪಿ ಗೊಬ್ಬರ ದಲ್ಲಿ ಎರಡು ಟೈಪ್ ಇರುತ್ತೆ ಆದರೆ ರೈತರು ಕೊಟ್ಟ ದೂರನ್ನ ನಾವು ಪರಿಶಿಲನೆ ಮಾಡಿ ಅಧಿಕಾರಿಗಳಿಗೆ ಸ್ಪಂದನೆ ಕೊಡುವಂತೆ ಹೇಳಲಾಗಿದೆ. ರೈತರು ನೇರವಾಗಿ ನಮಗೆ ಕಾಲ್ ಮಾಡಿ ನಾವು ಆ ಸಮಸ್ಯೆಯನ್ನು ಬಗೆಹರಿಸುತ್ತೆವೆ. ನಾನು ಪ್ರತಿ ಆರ್ ಎಸ್ ಕೆ ಮೆಲೆ ನಿಗಾ ಇಟ್ಟಿದ್ದೇನೆ. ಗೊಬ್ಬರ ಸಿಗುವ ಹಾಗೆ ನಾನು ಜಿಲ್ಲೆಯಲ್ಲಿ ನೋಡಿಕ್ಕೊಳ್ಳುತ್ತೇನೆ. ಯಾರಾದ್ರೂ ಪರ್ಟಿಲೈಸರ್ ಹೊರತುಪಡಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರೆ ಅವರ ಲೈಸನ್ಸ್ ರದ್ದು ಮಾಡುತ್ತೇವೆ ಎಂದು ಕೃಷಿ ಜಂಟಿ ನಿರ್ದೆಶಕರು ಖಡಕ್ ಆಗಿ ಸೊಸೈಟಿ ಅವರಿಗೆ ವಾರ್ನಿಂಗ್ ಮಾಡಿದ್ದಾರೆ.  ಇನ್ನು ಜಿಲ್ಲೆಯಲ್ಲಿ ಯೂರಿಯಾ 15,000 ಸ್ಟಾಕ್ ಇದೆ. ಇನ್ನು ಡಿಎಪಿ 10,000 ಟನ್ ಗೊಬ್ಬರ ಸ್ಟಾಕ್ ಇದೆ. ಸದ್ಯ ರೈತರಿಗೆ ಯಾವುದೇ ತೊಂದರೆ ಇಲ್ಲ ಅಂತಾರೆ. ಧಾರವಾಡ ಕೃಷಿ ಜಂಟಿ ನಿರ್ದೆಶಕರಾದ ರಾಜಶೇಖರ  ಬಿಜಾಪೂರ. 

ಧಾರವಾಡದಲ್ಲಿರುವ ಶಾಸಕ ಬೆಲ್ಲದ ಅವರ ನಿವಾಸಕ್ಕೆ ರೈತರು ಹಾಕುತ್ತಿದ್ದಂತೆ ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿಗಳು ರೈತರ ಮನವೊಲಿಕೆ ಮಾಡಿದರು. ಇವತ್ತು ಅಥವಾ ನಾಳೆ ಗೊಬ್ಬರ ಬರಲಿದ್ದು, ರೈತರಿಗೆ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಬಟನೆಯನ್ನ ವಾಪಸ್ಸು ಪಡೆದುಕೊಂಡರು.

click me!