ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.1): ಪ್ರತಿ ವರ್ಷದಂತೆ ವರ್ಷವೂ ಚಲವಾದಿ ಸಮುದಾಯದ (Chalawadi community) ಸ್ವಾಮೀಜಿಗಳು ತಮ್ಮ ಗುರುಪೀಠದಲ್ಲಿ ಸಮಾಜದ ಜನರ ಸಭೆ ಕರೆದಿದ್ದರು. ಇಡೀ ರಾಜ್ಯದ 31 ಜಿಲ್ಲೆಗಳಿಂದಲೂ ಸಮಾಜದ ಬಂಧುಗಳು ಭಾಗವಹಿಸಿದ್ದರು. ಮಠದ ಅಭಿವೃದ್ಧಿ ಹಾಗೂ ಟ್ರಸ್ಟ್ ನಲ್ಲಿರುವ ಕೆಲ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಶಮನ ಮಾಡಲು ಸಮುದಾಯದ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ಸಭೆಯು ಚಿತ್ರದುರ್ಗದ (Chitradurga) ಹೊರವಲಯದಲ್ಲಿ ಶ್ರೀ ಚಲವಾದಿ ಗುರುಪೀಠದಲ್ಲಿ (Chalawadi guru peeta) ಶ್ರೀ ಬಸವನಾಗಿದೇವ ಶ್ರೀಗಳ (Sri Basavanagideva swamiji) ಸಾನಿಧ್ಯದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಎಸ್ಪಿ, ಎಸ್ಟಿ ಆಯೋಗದ ಅಧ್ಯಕ್ಷರು ಹಾಗೂ ಹಾಲಿ ಶಾಸಕರಾದ ಸಮಾಜದ ಹಿರಿಯ ಮುಖಂಡರಾದ ನೆಹರೂ ಓಲೇಕಾರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಲವಾದಿ ಮಠದ ಅಭಿವೃದ್ಧಿ ಕುರಿತು ಹಾಗೂ ಸಮಾಜದ ಆಗು ಹೋಗುಗಳ ಕುರಿತು ಅನೇಕ ವಿಷಯಗಳು ಚರ್ಚೆ ಆದವು.
ANANTH RAJU SUICIDE CASE ; ಅನಂತು ಜೊತೆ ರಿಲೇಷನಶಿಪ್ ಇದ್ದಿದ್ದು ನಿಜವೆಂದ ಗೆಳತಿ ರೇಖಾ
ಈ ವೇಳೆ ಸಮಾಜದ ಸಭೆಯಲ್ಲಿಯೇ ಕೆಲ ಮುಖಂಡರು ಚಲವಾದಿ ಸಮಾಜದ ಟ್ರಸ್ಟ್ ವಿರುದ್ದ ತಾರತಮ್ಯ ಮಾಡಲಾಗ್ತಿದೆ ಎಂದು ಆರೋಪ ಮಾಡಿದರು. ಸಭೆ ನಡೆಯುವ ಸಂದರ್ಭದಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಮಾಹಿತಿ, ಸಲಹೆ ಪಡೆಯಲಾಗ್ತಿದೆ. ಅದನ್ನ ಹೊರತುಪಡಿಸಿ ನಮ್ಮ ಕೆಲ ಸಮಾಜದವರನ್ನು ಕಡೆಗಣಿಸಿಲಾಗ್ತಿದೆ ಎಂದು ಗಲಾಟೆ ಶುರುಮಾಡಿದರು.
ಇದ್ರಲ್ಲಿ ಮೊದಲಿಗರಾದ ಸಮಾಜದ ಮುಖಂಡ ತಿಪ್ಪೇಸ್ವಾಮಿ ಬಸವನಾಗಿದೇವ ಶ್ರೀ ಗಳ ಮುಂದೆಯೇ ಅನೇಕ ಮುಖಂಡರೊಂದಿಗೆ ವಾಗ್ವಾದಕ್ಕೆ ಇಳಿದರು. ನಮ್ಮನ್ನು ಕಡೆಗಣಿಸ್ತಿದ್ದೀರ ನಮಗೆ ಸಲಹೆ ನೀಡೋದಕ್ಕೆ ನೀವು ಯಾಕೆ ಬಿಡ್ತಿಲ್ಲ ಎಂದು ಮಾತಿನ ಚಕಮಕಿ ನಡೆಸಿದರು.
UPSC Shivangi Goyal; ಅತ್ತೆಯ ಕಿರುಕುಳವೇ UPSC ಟಾಪರ್ ಆಗಲು ಸ್ಪೂರ್ತಿ
ಇನ್ನೂ ಈ ವೇಳೆ ಮಧ್ಯ ಪ್ರವೇಶಿಸಿದ ಚಲವಾದಿ ಗುರುಗಳಾದ ಬಸವನಾಗಿದೇವ ಸ್ವಾಮೀಜಿ ಕೂಡ ಸಮಾಜದ ಮುಖಂಡರಿಗೆ ಬುದ್ದಿ ಮಾತು ಹೇಳಲು ಮುಂದಾದ್ರು ಯಾರೂ ಕೇಳಿವ ಸ್ಥಿತಿಯಲ್ಲಿ ಇರಲಿಲ್ಲ. ಮಠದ ಅಭಿವೃದ್ಧಿ ಹಾಗೂ ಸಮಾಜದ ಚಿಂತನೆ ಬಗ್ಗೆ ಮಾತನಾಡುವ ಬದಲು ಬರೀ ಗಲಭೆಯೇ ಆಯ್ತಲ್ಲ ಎಂದು ಬೇಸರದಿಂದ ಕೂತಲ್ಲಿಯೇ ಕುಳಿತರು.
ಈ ವೇಳೆ ಮಾತನಾಡಿದ ಎಸ್ಪಿ, ಎಸ್ಟಿ ಆಯೋಗದ ಅಧ್ಯಕ್ಷರಾದ ನೆಹರೂ ಓಲೇಕರ್ ಚಲವಾದಿ ಟ್ರಸ್ಟ್ ಹಾಗೂ ಬಸವನಾಗಿದೇವ ಶ್ರೀ ನಡುವಿನ ಸಂಘರ್ಷಕ್ಕೆ ಇಂದು ಇತಿ ಶ್ರೀ ಆಡಲಾಗಿದೆ. ಸಭೆಯಲ್ಲಿ ರಾಜ್ಯದ ಎಲ್ಲಾ ಮುಖಂಡ ಜೊತೆ ಚರ್ಚಿಸಿ ಚಲವಾದಿ ಮಠದ ಅಭಿವೃದ್ಧಿಗಾಗಿ ನೂತನ ಮಠ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ
ಇದಕ್ಕೆ ಒಪ್ಪಿರೋ ಶ್ರೀಗಳು ಟ್ರಸ್ ಗೆ ಜಾಗ ನೀಡಲು ಮುಂದಾಗಿದ್ದಾರೆ. ಸದ್ಯ ಟ್ರಸ್ಟ್ ಅವರಿಗೂ ಹಾಗೂ ಸ್ವಾಮೀಜಿಯವರ ಬೆಂಬಲಿಗರ ಮಧ್ಯೆ ಇದ್ದಂತಹ ಭಿನ್ನಾಭಿಪ್ರಾಯಗಳು ಬಗೆ ಹರಿದಿದ್ದು ನೂತನ ಮಠದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.