* ವಾದಗಳ ಬಗ್ಗೆ ನ್ಯಾಯಾಲಯ ಅಥವಾ ಸರ್ಕಾರ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ
* ಆರ್‌ಎಸ್‌ಎಸ್ ಬಗ್ಗೆ ಅವರ ಸ್ಥಾನಮಾನ ಮರೆತು ಮಾತನಾಡುತ್ತಿರುವ ಸಿದ್ದರಾಮಯ್ಯ
* ನ್ಯಾಯಾಲಯ ಅಥವಾ ಸರ್ಕಾರ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ
ಚಿಕ್ಕಮಗಳೂರು(ಜೂ.01): ಯಾವುದಾದರೂ ಒಂದು ಕಾರಣಕ್ಕೆ ಯಾವುದಾದರೂ ಒಂದು ಮಸೀದಿಯಲ್ಲಿ ದೇವಸ್ಥಾನ ನಿರ್ಮಾಣ ಆಗಿದ್ದರೆ ಸಿದ್ದರಾಮಯ್ಯ ಅವರು ಏನು ಹೇಳುತ್ತಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನವನ್ನೇ ಒಡೆದು ಮಸೀದಿ ಅಥವಾ ಇನ್ನಾವುದೋ ಧಾರ್ಮಿಕ ಕೇಂದ್ರ ಮಾಡಿದ್ದು ಹೌದಾದರೆ ಒಂದು ಧರ್ಮದವರು ನಮ್ಮ ಮನಸ್ಸಿಗೆ ನೋವಾಗಿದೆ. ನಮ್ಮ ದೇವರನ್ನು ತುಂಡರಿಸಿ ಮಸೀದಿಯನ್ನು ಮಾಡಿದ್ದಾರೆ ಎಂದು ಹೇಳಿದ್ದು ಹೌದಾದರೆ, ಅದಕ್ಕೆ ನ್ಯಾಯ ಸಮ್ಮತವಾದ ತೀರ್ಪನ್ನು ಕೊಡಬೇಕಾದುದು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಸಮಾಜದ ಜವಾಬ್ದಾರಿ. ಆ ಜವಾಬ್ದಾರಿ ಮೇಲೆ ಇಂದು ವಾದಗಳಾಗುತ್ತಿವೆ. ನ್ಯಾಯಾಲಯ ಅಥವಾ ಸರ್ಕಾರ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
undefined
Karnataka Politics: ಮುಸ್ಲಿಮರ ರಾಜಕೀಯ ನರಮೇಧಕ್ಕೆ ಸಿದ್ದು ರಣತಂತ್ರ: ಎಚ್‌ಡಿಕೆ
ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ಸಿಗರು ಸೇರಿದಂತೆ ನಮ್ಮೆಲ್ಲರಲ್ಲೂ ಮಾತಲ್ಲೂ ಸತ್ಯಕ್ಕೆ ಅಪಚಾರವಾಗದಂತೆ ವಿದ್ಯಮಾನಗಳು ನಡೆಯಬೇಕು. ಸತ್ಯವಾಗಿದ್ದರೆ ನ್ಯಾಯಕೊಡಬೇಕಾದ ಜವಾಬ್ದಾರಿ ಸಮಾಜಕ್ಕೆ, ಸರ್ಕಾರಕ್ಕೆ, ಪ್ರತಿಪಕ್ಷಗಳಿಗಿದೆ. ಅದನ್ನು ಅರಿತು ಸರಿದಾರಿಯಲ್ಲಿ ಸಾಗಬೇಕಾದ ಕೆಲಸ ಸರ್ಕಾರ ಮಾಡುತ್ತದೆ ಎಂದು ಹೇಳಿದರು.
ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಮತೀಯವಾದ ಕ್ರೌರ್ಯಕ್ಕೆ ತುತ್ತಾಗಿ ಹಿಂದೂ ದೇವಾಲಯಗಳು ಸೇರಿದಂತೆ ಅನೇಕ ದೇವಾಲಯಗಳನ್ನು ಒಡೆದು ಅದರ ಮೇಲೆ ಮಸೀದಿ ನಿರ್ಮಾಣ ಮಾಡಿದ್ದಾರೆ. ಕಾಲಘಟ್ಟದಲ್ಲಿ ಐತಿಹಾಸಿಕ ಕೆಲವು ವಿದ್ಯಾಮಾನಗಳ ನಡುವೆ ಇಂದಿನ ಪ್ರಚಲಿತ ದಿನಗಳಲ್ಲಿ ಕೆಲವು ಕುರುಹುಗಳು ಇವೆ ಎನ್ನುವ ಕಾರಣಕ್ಕೆ ಅದು ಹಿಂದೂ ದೇವಾಲಯವಾಗಿತ್ತು, ಅದನ್ನು ನಮಗೆ ಬಿಟ್ಟುಕೊಡಿ ಎನ್ನುವ ಭಾವನೆಗೆ ಸತ್ಯ ಶೋಧನೆಯನ್ನು ಸರ್ಕಾರ ಅಥವಾ ಸಂಬಂಧಪಟ್ಟ ನ್ಯಾಯಾಲಯ ಮಾಡುತ್ತದೆ. ಸತ್ಯವಾಗಿದ್ದರೆ ಹಾಗೆ ಒಡೆದವರು ತಪ್ಪು ಮಾಡಿದ್ದಾರೆ ಎಂದರ್ಥ ಎಂದರು.
ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯ ಅವರ ಸ್ಥಾನಮಾನಗಳನ್ನು ಮರೆತು ಮಾತನಾಡುತ್ತಿದ್ದಾರೆ. ಹಾಗೇ ಲಘುವಾಗಿ ಮಾತನಾಡಿದಾಗ ಪ್ರತಿಕ್ರಿಯಿಸಬೇಕಾದುದು ನಮ್ಮ ಕರ್ತವ್ಯ. ಆರ್‌ಎಸ್‌ಎಸ್‌ಗೆ ಗೌರವ ಕೊಟ್ಟವರಲ್ಲಿ ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು, ಗಣ ರಾಜ್ಯೋತ್ಸವದಲ್ಲಿ ಪಥ ಸಂಚಲನ ಮಾಡಿ ಎಂದು ಅಂದಿನ ದಿನಗಳಲ್ಲಿ ಹೇಳಿದ್ದರು. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗಪುರ ಆರ್‌ಎಸ್‌ಎಸ್ ಕಾರ್ಯಾಲಯಕ್ಕೆ ಹೋಗಿ ಬಂದವರು ಹಾಗಿರುವಾಗ ಅವರ ಹಿರಿಯರು ಆರ್‌ಎಸ್‌ಎಸ್‌ನ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಕಲ್ಪನೆಗೆ ಒತ್ತುಕೊಟ್ಟು ಗೌರವ ಕೊಡುವಾಗ ಸಿದ್ದರಾಮಯ್ಯನವರು ಒಮ್ಮೆ ಅರ್ಥೈಸಿಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಅವರು ತಿದ್ದಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ. ಅವರ ಮಾನಸಿಕತೆ ಹೇಗಿದೆ ಎಂದು ಅವರೇ ಹೇಳಬೇಕು ಎಂದರು.