Koppal: ಸರ್ಕಾರದಲ್ಲಿ ರಾಗಿಗೆ ಇರುವ ಕಿಮ್ಮತ್ತು ಭತ್ತಕ್ಕಿಲ್ಲ..!

By Girish Goudar  |  First Published May 14, 2022, 6:43 AM IST

*  ರೈತರ ಹೋರಾಟಕ್ಕೆ ಕಿವಿಗೊಡದ ಸರ್ಕಾರ
*  ಜನಪ್ರತಿನಿಧಿಗಳ ಮನವಿಗೂ ಓಗೊಡದ ಸಿಎಂ
*  ಭತ್ತ ಬೆಂಬಲ ಬೆಲೆ ಕೇಂದ್ರ ಯಾಕೆ ತೆರೆಯುತ್ತಿಲ್ಲ?
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.14):  ರಾಗಿಗೆ ನೀಡುವ ಆದ್ಯತೆಯನ್ನು ರಾಜ್ಯ ಸರ್ಕಾರ(Government of Karnataka) ಭತ್ತಕ್ಕೆ ನೀಡಿದಂತೆ ಕಾಣುತ್ತಿಲ್ಲ. ರಾಗಿ(Millet) ದರ ಕುಸಿತವಾಗುತ್ತಿದ್ದಂತೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆದರು. ಆದರೆ, ರೈತರು ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಭತ್ತದ ಬೆಂಬಲ ಬೆಲೆ ಕೇಂದ್ರ ತೆರೆಯುತ್ತಿಲ್ಲ.

Tap to resize

Latest Videos

ಸಂಸದ ಸಂಗಣ್ಣ ಕರಡಿ(Sanganna Karadi ಸೇರಿದಂತೆ ಜಿಲ್ಲೆಯ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಮಾಡಿದರೂ ಇದುವರೆಗೂ ಭತ್ತದ(Paddy) ಬೆಂಬಲ ಬೆಲೆ ಕೇಂದ್ರ ತೆರೆಯುತ್ತಿಲ್ಲ. ಜಿಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಕುರಿತು ಸುದೀರ್ಘ ಚರ್ಚೆಯಾಗಿ ಸರ್ಕಾರವನ್ನು ಒತ್ತಾಯಿಸಲು ಗೊತ್ತುವಳಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಲಾಯಿತು.

Koppal: ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ಆಡಳಿತ, ಪ್ರತಿಪಕ್ಷದ ಶಾಸಕರು, ಸಚಿವರಾದ ಆನಂದ ಸಿಂಗ್‌(Anand Singh) ಮತ್ತು ಹಾಲಪ್ಪ ಆಚಾರ್‌(Halappa Achar) ಉಪಸ್ಥಿತಿಯಲ್ಲಿಯೇ ಪಕ್ಷಾತೀತವಾಗಿ ಗೊತ್ತುವಳಿ ಮಂಡಿಸಿ ಕಳುಹಿಸಲಾಯಿತು. ಆದರೂ ಇದುವರೆಗೂ ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ಮುಂದಾಗುತ್ತಿಲ್ಲ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಸ್ಯೆ ಬಿಗಡಾಯಿಸಿದೆ:

ಮಾರುಕಟ್ಟೆಯಲ್ಲಿ ಭತ್ತವನ್ನು ಕೇಳುವವರೇ ಇಲ್ಲದಂತಾಗಿದೆ. ಮನೆಯಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳುವುದು ಅಸಾಧ್ಯವಾಗಿದೆ. ಹೀಗಾಗಿ ರೈತರು(Farmers) ಹೊಲದಲ್ಲಿಯೇ ಭತ್ತವನ್ನು ಕಾಪಾಡಿಕೊಳ್ಳಲು ಪಡುತ್ತಿರುವ ಯಾತನೆ ಅಷ್ಟಿಷ್ಟಲ್ಲ.
ಪೂರ್ವ ಮುಂಗಾರು ಮಳೆ(Monsson Rain) ಅಬ್ಬರಿಸಿ ಸುರಿಯುತ್ತಿರುವುದರಿಂದ ಭತ್ತ ನೀರುಪಾಲಾಗುತ್ತಿದೆ. ರಾಶಿಯಲ್ಲಿಯೇ ಕುದಿ ಬರುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ವಿಧಿಯಿಲ್ಲದೆ ಅನೇಕ ರೈತರು ಮಾಡಿದ ಸಾಲ ತೀರಿಸಲು ಅಗ್ಗದ ಬೆಲೆಗೆ ಭತ್ತ ಮಾರಾಟ ಮಾಡುತ್ತಿದ್ದಾರೆ.

ಕೇಳುವವರೇ ಇಲ್ಲ:

ಮಾರುಕಟ್ಟೆಯಲ್ಲಿ ದರ ಕುಸಿತ ಅಷ್ಟೇ ಅಲ್ಲ, ಅಗ್ಗದ ಬೆಲೆಗೂ ಕೇಳುವವರೇ ಇಲ್ಲ ಎನ್ನುವುದು ಇನ್ನೂ ಗಂಭೀರ ಸಮಸ್ಯೆ. ಕೇಂದ್ರ ಸರ್ಕಾರ ಭತ್ತದ ಬೆಂಬಲ ಬೆಲೆ ದರವನ್ನು ಕ್ವಿಂಟಲ್‌ಗೆ .1,950 ನಿಗದಿ ಮಾಡಿದೆ. ಮಾರುಕಟ್ಟೆಯಲ್ಲಿ .1400-1500 ಇದೆ. ಮಾರುಕಟ್ಟೆಯಲ್ಲಿ 75 ಕೆಜಿ ಚೀಲಕ್ಕೆ .1100-1250 ದರವಿದೆ. ಈ ದರಕ್ಕೂ ರೈತರು ಮಾರಾಟ ಮಾಡುವುದಕ್ಕೆ ಸಿದ್ಧರಿದ್ದಾರೆ. ಆದದ್ದೂ ಆಗಲಿ, ಭತ್ತವನ್ನು ಕೊಟ್ಟು ಕೈತೊಳೆದುಕೊಂಡರಾಯಿತು ಎಂದರೂ ಸಾಧ್ಯವಾಗುತ್ತಿಲ್ಲ. ಈ ದರಕ್ಕೆ ಮಾರಾಟ ಮಾಡಿದರೆ ಮಾಡಿದ ಖರ್ಚು ಬರುವುದಿಲ್ಲ ಎನ್ನುತ್ತಾರೆ ರೈತರು.

ಪ್ರತಿವರ್ಷವೂ ಇದೇ ಗೋಳು:

ಮಾರುಕಟ್ಟೆಯಲ್ಲಿ ದರ ಕುಸಿತವಾಗಿ ರೈತರು ತೀವ್ರ ಸಮಸ್ಯೆ ಎದುರಿಸುತ್ತಾರೆ. ವಿಧಿಯಿಲ್ಲದ ಕೊನೆಗೆ ಮಾರಾಟ ಮಾಡುತ್ತಾರೆ. ಇದಾದ ಮೇಲೆ ಬೆಂಬಲ ಬೆಲೆ ಕೇಂದ್ರ ತೆರೆಯುತ್ತಾರೆ. ರೈತರ ಹೆಸರಿನಲ್ಲಿ ಮಧ್ಯವರ್ತಿಗಳು ಅನಾಯಾಸವಾಗಿ ಲಾಭ ಮಾಡಿಕೊಳ್ಳುತ್ತಾರೆ. ಬೇಗನೆ ಬೆಂಬಲ ಬೆಲೆ ಕೇಂದ್ರ ತೆರೆದರೆ ಮಾರುಕಟ್ಟೆಯಲ್ಲಿ ದರ ಕುಸಿತವಾಗುವುದೇ ಇಲ್ಲ ಎನ್ನುವುದು ರೈತರ ಅಳಲು. ಮಾರುಕಟ್ಟೆಯಲ್ಲಿ ಅಕ್ಕಿಯ ದರ ಕುಸಿತವಾಗಿಲ್ಲ. ಆದರೆ, ಭತ್ತ ಕಟಾವು ಮಾಡುತ್ತಿದ್ದಂತೆ ದರ ಕುಸಿಯುತ್ತದೆ. ಇದಕ್ಕಾಗಿ ಬೆಂಬಲ ಬೆಲೆ ಕೇಂದ್ರವನ್ನು ಬೇಗನೆ ಪ್ರಾರಂಭ ಮಾಡಿದರೆ ಮಾರುಕಟ್ಟೆಯಲ್ಲಿ ದರ ಕುಸಿತವೇ ಆಗುವುದಿಲ್ಲ. ಆದರೆ, ಸರ್ಕಾರ ಈ ರೀತಿ ಮಾಡುತ್ತಿಲ್ಲ.

ಪ್ರಧಾನಿ ಮೋದಿ ಹೆಸರಲ್ಲೇ ಚುನಾವಣೆ ಗೆಲ್ತೇವೆ ಅನ್ನೋದು ಮೂರ್ಖತನ: ಬಿಜೆಪಿ ಸಂಸದ

ರೈತರ ಭತ್ತದ ದರ ಕುಸಿತದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಆಡಳಿತಗಳು ಗೊತ್ತುವಳಿ ಮಾಡಿ, ಸರ್ಕಾರಕ್ಕೆ ಕಳುಹಿಸಬೇಕು ಅಂತ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ತಿಳಿಸಿದ್ದಾರೆ. 

ಭತ್ತದ ದರ ಕುಸಿತದ ಸಮಸ್ಯೆ ಪ್ರತಿವರ್ಷವೂ ಆಗುತ್ತದೆ. ಆದರೂ ಬೆಂಬಲ ಬೆಲೆ ಕೇಂದ್ರ ತೆರೆಯಲು ಸರ್ಕಾರವೇಕೆ ಮೀನಮೇಷ ಮಾಡುತ್ತಿದೆ? ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಲಿ ಅಂತ ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹೇಳಿದ್ದಾರೆ. 

ಭತ್ತದ ಬೆಂಬಲ ಬೆಲೆ ಕೇಂದ್ರವನ್ನು ತೆರೆಯುವಂತೆ ಈಗಾಗಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಅಷ್ಟೇ ಅಲ್ಲ, ಜಿಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೇ ಗೊತ್ತುವಳಿ ಮಾಡಿ, ಸರ್ಕಾರಕ್ಕೆ ಕಳುಹಿಸಲಾಗಿದೆನ ಅಂತ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. 
 

click me!