ಅದು ಅಮೃತ ಸರೋವರ ಎನ್ನುವುದು ಪ್ರಧಾನಿ ಮೋದಿ ಕನಸಿನ ಯೋಜನೆ. ಈ ಯೋಜನೆಯ ಭಾಗ್ಯ ನಮ್ಮ ರಾಜ್ಯದ ಬರಪೀಡಿತ ಜಿಲ್ಲೆಯೊಂದಕ್ಕೆ ಸಿಕ್ಕಿದೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಮೇ.13): ಅದು ಅಮೃತ ಸರೋವರ (Amrita Sarovar) ಎನ್ನುವುದು ಪ್ರಧಾನಿ ಮೋದಿ (PM Narendra Modi) ಕನಸಿನ ಯೋಜನೆ. ಈ ಯೋಜನೆಯ ಭಾಗ್ಯ ನಮ್ಮ ರಾಜ್ಯದ ಬರಪೀಡಿತ ಜಿಲ್ಲೆಯೊಂದಕ್ಕೆ ಸಿಕ್ಕಿದೆ. ದೇಶದ ಹಣಕಾಸು ಸಚಿವರ ಅನುದಾನದ ಜೊತೆಗೆ ಜಿಲ್ಲೆಯಲ್ಲಿ ಸರಿ ಸುಮಾರು 75 ಕೆರೆಗಳನ್ನು ಅಭಿವೃದ್ದಿ (Lakes Development) ಮಾಡುವ ಕೆಲಸ ಭರದಿಂದ ಸಾಗಿದೆ. ಅಷ್ಟಕ್ಕೂ ಯಾವುದು ಆ ಜಿಲ್ಲೆ ಎಂದುಕೊಂಡ್ರ ಈ ಸ್ಟೋರಿ ನೋಡಿ. ತಮ್ಮ ನಿಜ ಸ್ವರೂಪವನ್ನೇ ಕಳೆದುಕೊಂಡಿರುವ ಕೆರೆಗಳು, ಆ ಕೆರೆಯಲ್ಲಿ ಭರದಿಂದ ಸಾಗುತ್ತಿರುವ ಹೂಳೆತ್ತುತ್ತಿರುವ ಕಾಮಗಾರಿ, ಈ ರೀತಿ ದೃಶ್ಯಗಳು ಕಂಡು ಬಂದಿದ್ದು ಬಯಲು ಸೀಮೆ ಕೆರೆಗಳ ನಾಡು ಕೋಲಾರ (Kolar) ಜಿಲ್ಲೆಯಲ್ಲಿ.
ಹೌದು! ಹೇಳಿ ಕೇಳಿ ಕೋಲಾರ ಜಿಲ್ಲೆಯನ್ನು ಕೆರೆಗಳ ನಾಡು ಎಂದು ಕೆರೆಯಲಾಗುತ್ತದೆ. ಯಾಕಂದರೆ ಕೋಲಾರದಲ್ಲಿ ಸರಿ ಸುಮಾರು 2500ಕ್ಕೂ ಹೆಚ್ಚು ಕೆರೆಗಳಿವೆ ಹಾಗಾಗಿ ಇಲ್ಲಿನ ಕೆರೆಗಳನ್ನು ಅಭಿವೃದ್ದಿಪಡಿಸಿ ಕೆರೆಗಳಲ್ಲಿ ನೀರು ನಿಂತರೆ ಸಾಕು ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಸದ್ಯ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಮೃತ ಸರೋವರ ಯೋಜನೆಯಡಿಯಲ್ಲಿ ಕೋಲಾರ ಜಿಲ್ಲೆಯ 75 ಕೆರೆಗಳಲ್ಲಿ ಹೂಳು ತೆಗೆದು ಅದಕ್ಕೆ ಬೇಕಾದ ಪೋಷಕ ಕಾಲುವೆಗಳು ಸೇರಿದಂತೆ ಒತ್ತುವರಿ ತೆರವು ಮಾಡಲು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕಾಗಿ ತಮ್ಮ ವೈಯಕ್ತಿಯ ಸಂಸದರ ಅನುದಾನದಿಂದ 1.80 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕು!
ಇದಷ್ಟೆ ಅಲ್ಲದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 75 ಕೆರೆಗಳನ್ನು ಅಭಿವೃದ್ದಿ ಪಡಿಸಲು ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಇನ್ನು ಎರಡು ತಿಂಗಳಲ್ಲಿ 75 ಕೆರೆಗಳನ್ನು ಹೂಳು ತೆಗೆಯಬೇಕು. ಅಗತ್ಯ ಬಿದ್ದರೆ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲೂ ಕೆರೆಗಳನ್ನು ಅಭಿವೃದ್ದಿ ಪಡಿಸಲು ತಿಳಿಸಿದ್ದಾರೆ. ಮುಂದಿನ ತಿಂಗಳು ಜಿಲ್ಲೆಗೆ ತಾವು ಖುದ್ದು ಬೇಟಿ ನೀಡಿ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರ ಮೊದಲ ಭಾಗವಾಗಿ ಈಗಾಗಲೇ ಕೇಂದ್ರದಿಂದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಅಮೃತ ಸರೋವರ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದಾರೆ.
ಕೋಲಾರ ಬಿಜೆಪಿಯಲ್ಲಿ ಕೋಲಾಹಲ, MP ಮುನಿಸ್ವಾಮಿ ನಡೆಗೆ ಸಿಡಿದೆದ್ದ ಮೂಲ ಬಿಜೆಪಿಗರು
ಇನ್ನು ಜಿಲ್ಲೆಯ ಅಧಿಕಾರಿಗಳು ಹಣಕಾಸು ಸಚಿವರ ಅನುಧಾನವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಅನುದಾನದ ಹಣವನ್ನು ಕೆಲವು ಆಯ್ದ ಕೆರೆಗಳನ್ನು ಸುಂದರೀಕರಣ ಮಾಡಲು ಬಳಸಿಕೊಳ್ಳುವುದಾಗಿ ನಿರ್ಧಾರಿಸಿದ್ದು ಅದರ ಕೆಲಸ ಕೂಡಾ ಆರಂಭಿಸಿದ್ದಾರೆ. ಸದ್ಯ ನದಿ ನಾಲೆಗಳೇ ಇಲ್ಲದ ಕೋಲಾರ ಮೇಲೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವರು ವಿಶೇಷ ಕಾಳಜಿ ತೋರಿದ್ದಾರೆ. ಈ ಮೂಲಕ ಬರದ ನಾಡು ಕೋಲಾರದ ಕೆರೆಗಳನ್ನು ಅಭಿವೃದ್ದಿ ಪಡಿಸುವ ಕೆಲಸ ಶುರುಮಾಡಿದ್ದಾರೆ. ಅಂದುಕೊಂಡಂತೆ ನಡೆದರೆ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಯ ಆರಂಭ ಪಡೆದುಕೊಳ್ಳಬಹುದು.