* ನೂರಾರು ಎಕರೆ ಕಬ್ಬು ಕಟಾವಿಗೆ ತೊಡಕು
* ಮಳೆ ನೀರು ಹೊರಹಾಕಲು ಹರಸಾಹಸ
* ರಾಯರಕೆರೆ ಪ್ರದೇಶದ ಕೃಷಿ ಭೂಮಿಗಳಲ್ಲಿ ಮಳೆ ನೀರು ಸಂಗ್ರಹ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಡಿ.20): ತಾಲೂಕಿನ ಕಬ್ಬು ಬೆಳೆಗಾರರು(Sugarcane Growers) ಈಗಾಗಲೇ ತೀವ್ರ ಸಂಕಷ್ಟ ಎದುರಿಸಿದರೆ, ನಗರದ ಹೊರವಲಯದ ರಾಯರಕೆರೆ ಕೃಷಿ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ಅಕಾಲಿಕ ಮಳೆ(Untimely Rain) ಶಾಪವಾಗಿ ಪರಿಣಿಮಿಸಿದೆ. ತಾಲೂಕಿನಲ್ಲಿ ಕಬ್ಬು ಖರೀದಿಗೆ ಕಾರ್ಖಾನೆ(Factory) ಆಡಳಿತ ಮಂಡಳಿಯ ನಿರಾಸಕ್ತಿ ಒಂದಡೆಯಾದರೆ, ಕಳೆದ ತಿಂಗಳ ಭಾರಿ ಮಳೆಯ ಹಿನ್ನೆಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬನ್ನು ಕಟಾವ್ ಮಾಡಿ ಹೊರ ಸಾಗಿಸದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕಬ್ಬು ಬೆಳೆದ ರೈತರಿಗೆ(Farmers) ತೀವ್ರ ತಲೆ ನೋವಾಗಿದ್ದು, ರೈತರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
undefined
ಅಧಿಕ ಮಳೆಯಿಂದಾಗಿ ಸುತ್ತು ಗುಡ್ಡಗಾಡು ನಡುವೆ ಇರುವ ರಾಯರಕೆರೆ ಪ್ರದೇಶದ ಕೃಷಿ ಭೂಮಿಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ. ಮಳೆ ನಿಂತರೂ ಗುಡ್ಡಾಗಾಡು ಪ್ರದೇಶದ ನೀರಿನ ಸೆಲೆ ಇನ್ನೂ ಹರಿಯುತ್ತಲೇ ಇದೆ. ಭೂಮಿ ತೇವಾಂಶದಿಂದ ಸಂಪೂರ್ಣ ಕೆಸರು ತುಂಬಿಕೊಂಡಿದೆ. ಇದು ಹೊಲ-ಗದ್ದೆಗಳಲ್ಲಿ ಪ್ರವೇಶ ಮಾಡದಂತ ಪರಿಸ್ಥಿತಿ ಎದುರಾಗಿದೆ. ಕಾಲು ಇಟ್ಟರೆ ಸಾಕು ಒಂದು ಅಡಿ ಒಳಗೆ ಕಾಲು ಮಣ್ಣಿನಲ್ಲಿ ಊತು ಹೋಗಿ, ಹೊರ ಬರಲಾರದಂತಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕಬ್ಬು ಕಟಾವು ಮಾಡಿ ಹೊರ ಸಾಗಿಸುವುದು ತುಂಬ ಕಷ್ಟಸಾಧ್ಯವಾಗಲಿದೆ.
Karnataka Rains: ಜಾನುವಾರುಗಳ ಮೇವೂ ಕಿತ್ತುಕೊಂಡ ಅಕಾಲಿಕ ಮಳೆ
ಈಗಾಗಲೇ ಕಬ್ಬು ಬೆಳೆದು ನಿಂತು ತೆನೆ(ಸೂಲಂಗಿ) ಒಡೆದಿದೆ. ಇಷ್ಟೊತ್ತಿಗಾಗಲೇ ರೈತರು ಕಬ್ಬು ಕಟಾವ್ ಮಾಡಿ ಕಾರ್ಖಾನೆ ಸಾಗಿಸಬೇಕಿತ್ತು. ಆದರೆ, ಈ ಭಾಗದಲ್ಲಿ ಕಬ್ಬು ಕಟಾವ್ ಮಾಡಿ ಸಾಗಿಸುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಯವರು ಇತ್ತ ಸುಳಿಯುತ್ತಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಒಂದಡೆ ಬೆಳೆದು ನಿಂತ ಕಬ್ಬನ್ನು ಹೊರ ಸಾಗಿಸುವುದು ಕಷ್ಟಸಾಧ್ಯವಾದರೆ, ಮತ್ತೊಂದಡೆ ಕಾರ್ಖಾನೆಯವರ ನಿರಾಸಕ್ತಿಗೆ ರೈತರು ಕಬ್ಬಿನಂತೆ ಬೆಂಡಾಗಿದ್ದಾರೆ. ಮತ್ತೆ ಏನಾದರೂ ಮಳೆ ಬಂತಂದರೆ ರೈತರು ಬೆಳೆದ ಕಬ್ಬು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಅದೃಷ್ಟವಶಾತ್ ಮಳೆ ಬರದೇ ಇದ್ದರೆ, ಇನ್ನು ಕೆಲವು ದಿನದಲ್ಲಿ ಭೂಮಿ ತೇವಾಂಶ ಒಣಗಿ ಕಬ್ಬು ಕಟಾವ್ ಮಾಡಲು ಸಾಧ್ಯವಾಗಲಿದೆ. ಅದು ಸಕಾಲದಲ್ಲಿ ಕಾರ್ಖಾನೆಯವರು ಬಂದು ಕಬ್ಬು ಖರೀದಿ ಮಾಡಲು ಮುಂದಾದರೆ ಮಾತ್ರ ರೈತರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಕಬ್ಬು ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಲಿದ್ದಾರೆ.
ರಾಯರಕೆರೆ ಪ್ರದೇಶದ ರೈತರು, ಪ್ರತಿವರ್ಷ ಒಂದಲ್ಲ ಒಂದು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಬೇಸಿಗೆಯಲ್ಲಿ ಭೂಮಿಯಲ್ಲಿ ಅಂತರ್ಜಲ(Groundwater) ಕುಸಿತದಿಂದ ನೀರಿನ ಕೊರತೆಗೆ ಬೆಳೆ ಒಣಗುತ್ತವೆ. ಈ ಬಾರಿ ಮಳೆಯಿಂದ ಕಬ್ಬಿನ ಇಳುವರಿಗೆ ಹಾನಿಯಾಗಿದೆ ಅಂತ ರಾಯರಕೆರೆ ರೈತ ಸಣ್ಣಕ್ಕಿ ಹೇಮಣ್ಣ ತಿಳಿಸಿದ್ದಾರೆ.
Karnataka Rains: ರೈತರನ್ನು ಕಂಗೆಡಿಸಿದ ಅಕಾಲಿಕ ಮಳೆ..!
ರಾಯರ ಕೆರೆವ್ಯಾಪ್ತಿಯಲ್ಲಿ ಈ ಬಾರಿ 800 ಎಕರೆಯಿಂದ 1000 ಎಕರೆ ಗದ್ದೆಯಲ್ಲಿ ಕಬ್ಬು ಬೆಳೆಯಲಾಗಿದೆ. ಫಸಲು ಸಹ ಉತ್ತಮವಾಗಿ ಬಂದಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ಕಬ್ಬಿನ ಗದ್ದೆಯಲ್ಲಿ ನೀರು ನಿಂತು ಬೆಳೆಹಾನಿಯಾಗಿದೆ, ಕಬ್ಬನ್ನು ಹೊರಸಾಗಿಸಲು ಕಷ್ಟಸಾಧ್ಯವಾಗಿದೆ ಅಂತ ರಾಯರಕೆರೆ ರೈತ ಪೂಜಾರ ವೆಂಕೋಬ ನಾಯಕ ಹೇಳಿದ್ದಾರೆ.
ಅಕಾಲಿಕ ಮಳೆಗೆ ಹತ್ತಿ ಬೆಳೆಗಾರರ ಬದುಕು ಮೂರಾಬಟ್ಟೆ..!
ಬಂಗಾರದ ಬೆಳೆಯ ನಿರೀಕ್ಷೆಯಲ್ಲಿದ್ದ ಗದಗ ಜಿಲ್ಲೆಯ ನರಗುಂದತಾಲೂಕಿನ ಹತ್ತಿ(Cotton Growers) ಬೆಳೆಗಾರರರು ಅಕಾಲಿಕ ಮಳೆಯ ಹೊಡೆತದಿಂದ ಈ ಬಾರಿಯೂ ನಿರಾಸೆ ಅನುಭವಿಸುವಂತಾಗಿದೆ. ಮಲಪ್ರಭಾ ಜಲಾಶಯದ(Malaprabha Dam) ಕಾಲುವೆಗೆ(Canal) ಹೊಂದಿರುವ ತಾಲೂಕಿನ ಜಮೀನುಗಳಲ್ಲಿ(Land) ಬಹಳಷ್ಟು ರೈತರು ಬಿಟಿ ಹತ್ತಿ ಬಿತ್ತನೆ(BT Cotton Sowing) ಮಾಡಿದ್ದರು. ಅಲ್ಲದೇ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಅಕಾಲಿಕ ಮಳೆಯಿಂದ ಕನಸೆಲ್ಲ ನುಚ್ಚುನೂರಾಗಿದೆ. ಕೆಲವು ದಿನಗಳ ಹಿಂದೆ ಅಕಾಲಿಕ ಮಳೆಯಿಂದ ಹತ್ತಿ ಕಾಯಿ ಕೊಳೆತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ.
ರೈತರು ಒಂದು ಎಕರೆ ಹತ್ತಿ ಬಿತ್ತನೆಗೆ ಕನಿಷ್ಠ 20ರಿಂದ 30 ಸಾವಿರ ಖರ್ಚು ಮಾಡಿದ್ದರು. ಎಕರೆಗೆ 10ರಿಂದ 50 ಕ್ವಿಂಟಲ್‌ವರೆಗೆ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಹತ್ತಿ ಬೆಳೆ ಅಕಾಲಿಕವಾಗಿ ವಿಪರೀತ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಿ ಹತ್ತಿಕಾಯಿ ಕೊಳೆತುಹೋಗಿವೆ.