ಹಾಸನ: ಏಕಾಏಕಿ ಕಾಡಾನೆ ದಾಳಿ; ರೈತನ ಸ್ಥಿತಿ ಗಂಭೀರ!

By Ravi Janekal  |  First Published Mar 30, 2024, 9:36 PM IST

ಜಮೀನಿನಿಂದ ಜಾನುವಾರುಗಳೊಂದಿಗೆ ಮನೆಗೆ ಬರುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೊಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.


ಹಾಸನ (ಮಾ.30): ಜಮೀನಿನಿಂದ ಜಾನುವಾರುಗಳೊಂದಿಗೆ ಮನೆಗೆ ಬರುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೊಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೇವರಾಜು (58) ಗಂಭೀರವಾಗಿ ಗಾಯಗೊಂಡ ರೈತ. ಏಕಾಏಕಿ ದಾಳಿಯಿಂದ ರೈತನ ಸ್ಥಿತಿ ಗಂಭೀರವಾಗಿದೆ. ಇಂದು ಜಾನುವಾರ ಸಮೇತ ಜಮೀನಿಗೆ ಹೋಗಿದ್ದ ರೈತ ದೇವರಾಜು. ಜಮೀನಿನಿಂದ ಮನೆಗೆ ಬರುವ ವೇಳೆ ದಾಳಿ ನಡೆಸಿರುವ ಕಾಡಾನೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ದೇವರಾಜು ಆದರೆ ಸೊಂಡಿಲಿನಿಂದ ರೈತನನ್ನ ಎಸೆದಿದೆ. ಕೆಳಕ್ಕೆ ಬಿದ್ದ ರೈತನನ್ನ ಕಾಲಿನಿಂದ ತುಳಿದಿದೆ. ಕಾಡಾನೆ ತುಳಿತದಿಂದ ರೈತನ ಮೈ, ಕೈಗೆ ಗಾಯವಾಗಿದ್ದು, ಕಿವಿ ಕಟ್ ಆಗಿದೆ. ಅನಂತರ ರೈತ ಹಳ್ಳಕ್ಕೆ ಬಿದ್ದ ಬಳಿಕ ತೋಟದೊಳಗೆ ಹೋದ ನರಹಂತಕ ಕಾಡಾನೆ.

Latest Videos

undefined

ಚಿಕ್ಕಮಗಳೂರು: ವಾರದಲ್ಲಿ ಇಬ್ಬರು, 8 ತಿಂಗಳಲ್ಲಿ 8 ಮಂದಿ ಕಾಡಾನೆ ದಾಳಿಗೆ ಬಲಿ!

ಸದ್ಯ ಗಾಯಾಳು ರೈತನಿಗೆ ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಿಕ್ಕೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!