ಲಾಕ್‌ಡೌನ್ ಎಫೆಕ್ಟ್ : ಕಲ್ಲಂಗಡಿ ಹಣ್ಣಲ್ಲಿ ಬೆಲ್ಲ ಆವಿಷ್ಕಾರ

By Kannadaprabha NewsFirst Published Jun 7, 2021, 3:15 PM IST
Highlights
  • ಕಲ್ಲಂಗಡಿ ಬೆಳೆಯಲ್ಲಿ ಬೆಲ್ಲವನ್ನಾವಿಷ್ಕರಿಸಿದ ರೈತ
  • ಹಣ್ಣಿನಿಂದ ಜ್ಯೂಸ್ ತೆಗೆದು ಬೇಯಿಸಿ ಬೆಲ್ಲವಾಗಿಸಿ ಸಾಧನೆ
  • ಲಾಕ್‌ಡೌನ್‌ ಸಮಯದಲ್ಲಾಯ್ತು ಹೊಸ ಸಂಶೋಧನೆ

ಶಿವಮೊಗ್ಗ (ಜೂ.07): ಲಾಕ್‌ಡೌನ್‌ ಏನೆಲ್ಲಾ ಸಮಸ್ಯೆ ಕೊಡುತ್ತಿದೆ ಎಂದು ಗೊತ್ತು. ಈ ಸಮಸ್ಯೆಗಳೊಂದಿಗೆ ಹೊಕ್ಕು ಹೊಸ ಆವಿಷ್ಕಾರ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿಯೇ  ಕಲ್ಲಂಗಡಿ ಬೆಳೆದು ಮಾರುಕಟ್ಟೆ ಇಲ್ಲದೆ ಕೊಳೆಯುವ ಸ್ಥಿತಿಯಲ್ಲಿದ್ದಾಗ ಅದರಿಂದ ಜೋನಿ ಬೆಲ್ಲ ತಯಾರಿಸಿ ಹೊಸ ಸಾಧ್ಯತೆಯೊಂದನ್ನು ರೈತ ಸಹೋದರರಿಬ್ಬರು ಅನ್ವೇಷಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಬಳಿಯ ನಾಗೋಡಿ ಗ್ರಾಮದ ಈ ರೈತ ಸಹೋದರರು ಹೊಸ ಆವಿಷ್ಕಾರವನ್ನೇನೋ ಮಾಡಿದ್ದಾರೆ. ಆದರೆ ಇದರ ಲಾಭ ನಷ್ಟ, ಮಾರುಕಟ್ಟೆ ವಿಚಾರದ ಬಗ್ಗೆ ಇನ್ನಷ್ಟು ಅನ್ವೇಷಣೆಗಳಾಗಬೇಕಿದೆ. 

Latest Videos

ಸಿಹಿ ಕಲ್ಲಂಗಡಿ ಹಣ್ಣನ್ನು ಆರಿಸ್ಕೊಳೋದು ಹೇಗೆ ? ಇದಿಷ್ಟು ಗೊತ್ತಿರಲಿ

ನಿಟ್ಟೂರು ಸಮೀಪದ ನಾಗೋಡಿ ಗ್ರಾಮದ ಶಿವರಾಮ್ ಶೆಟ್ಟಿ ಮತ್ತು ಜಯರಾಮ್ ಶೆಟ್ಟಿ ಸಹೋದರರು ಹೋಟೆಲ್ ಉದ್ಯಮದ ಜೊತೆ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಹತ್ತು ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದಾರೆ. 

ಸಿಹಿ ಕಲ್ಲಂಗಡಿಯಿಂದ ಸ್ಪೈಸಿ ಸೂಪ್..! ಇಲ್ಲಿದೆ ಸುಲಭ ರೆಸಿಪಿ ...

ಆದರೆ ಈಗ ಲಾಕ್‌ಡೌನ್‌ನಿಂದ  ಕಲ್ಲಂಗಡಿ ಮಾರಾಟದ ಸಮಸ್ಯೆ ಎದುರಾಗಿದ್ದು ಇದೀಗ  ಹೊಸ ಆವಿಷ್ಕಾರ ಮಾಡಿದ್ದಾರೆ. ಜ್ಯೂಸ್ ತಯಾರಿಸಿ  ಅದರಲ್ಲಿ ಬೆಲ್ಲ ಮಾಡಿದ್ದಾರೆ. 1 ಟನ್ ಹಣ್ಣಿನಿಂದ  80 ಕೆಜಿ ಬೆಲ್ಲ ಉತ್ಪಾದನೆಯಾಗಿದೆ. ಒಟ್ಟು  10 ಡಬ್ಬ ಜೋನಿ ಬೆಲ್ಲ ಉತ್ಪಾದನೆ ಮಾಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!