ಹಿಂದೆ ಮಾತಾಡಿಲ್ಲ-ಮುಂದೆ ಮಾತಾಡಲ್ಲ : ಸಿಎಂಗೆ ಯೋಗೇಶ್ವರ್ ಸಂದೇಶ

By Kannadaprabha News  |  First Published Jun 7, 2021, 2:27 PM IST
  • ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರೆಬಲ್ ಆಗಿದ್ದ ಸಚಿವ ಯೋಗೆಶ್ವರ್ ಇದೀಗ ಸಾಫ್ಟ್
  • ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಅವರ  ವಿರುದ್ಧ ನಾನು ಯಾವಾಗಲೂ ಮಾತನಾಡಿಲ್ಲ
  • ಸಮರ ಇತ್ಯರ್ಥವಾಗಿರುವ ಸಂದೇಶ ರವಾನಿಸಿದ ಸಚಿವ ಸಿ.ಪಿ.ಯೋಗೇಶ್ವರ್

ಚನ್ನಪಟ್ಟಣ (ಜೂ.07): ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರೆಬಲ್ ಆಗಿದ್ದ ಸಚಿವ ಯೋಗೆಶ್ವರ್ ಇದೀಗ ಸಾಫ್ಟ್  ಆಗಿದ್ದಾರೆ. ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಅವರ  ವಿರುದ್ಧ ನಾನು ಯಾವಾಗಲೂ ಮಾತನಾಡಿಲ್ಲ. ಅವರು ನಮ್ಮ ನಾಯಕರು. ಅವರ ವಿರುದ್ಧ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ ಎಂದು ಹೇಳುವ ಮೂಲಕ ಸಮರ ಇತ್ಯರ್ಥವಾಗಿರುವ ಸಂದೇಶ ರವಾನಿಸಿದ್ದಾರೆ. 

ಭಾನುವಾರ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಮಾತನಾಡುವ ಸಮಯ ಇದಲ್ಲ. ಕೊರೋನಾ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಅವಶ್ಯಕತೆ ಇರುವ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಎಲ್ಲರೂ ಅವರಿಗೆ ಸಹಕಾರ ನಿಡುತ್ತಿದ್ದೇವೆ. ಬಿಜೆಪಿಗೆ ಅವರು ಪ್ರಶ್ನಾತೀತ ನಾಯಕ ಎಂದರು. 

Tap to resize

Latest Videos

undefined

ಈ ಸುದ್ದಿ ನೋಡಿ ಆಘಾತವಾಗಿದೆ : ಯಡಿಯೂರಪ್ಪ ಬದಲಾವಣೆ ಬೇಡ .

ಅಲ್ಲದೇ ಮುಖ್ಯಮಂತ್ರಿಗಳ ಬಗ್ಗೆ ನಾನೇಂದು ಕಟೋರವಾಗಿ ಮಾತನಾಡಿಲ್ಲ.ಯಾವಾಗಲೂ ಸಾಫ್ಟ್ ಆಗಿಯೇ ಇದ್ದೇನೆ. ಅವರ ವಿಚಾರದಲ್ಲಿ ಸುಖಾಸುಮ್ಮನೆ ನನ್ನನ್ನು ಎಳೆದು ತರಲಾಗಿದೆ. ಇದರಿಂದ ಬೇಸರವಾಗಿದೆ. ಅವರ ಬಗ್ಗೆ ಯಾವುದೇ ಮಾತು ಆಡುವುದಿಲ್ಲ ಎಂದರು.

ಮುಖ್ಯಮಂತ್ರಿ ಬಿಎಸ್‌ವೈ ಬೆನ್ನಿಗೆ ಬಿಜೆಪಿ ನಾಯಕರ ದಂಡು .

3 ಪಕ್ಷದ ಸರ್ಕಾರ ಹೇಳಿಕೆಗೆ ಸ್ಪಷ್ಟನೆ : ವಿರೋಧ ಪಕ್ಷಗಳು ವಿರೋಧ ಪಕ್ಷ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚನ್ನಾಗಿಯೇ ಇದ್ದಾರೆ.  ಹಾಗಾಗಿ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು, ಹಾಗಾಗಿ ಮೂರು ಪಕ್ಷಗಳ ಸರ್ಕಾರ ಎಮದು ಜನ ತಿಲಿದುಕೊಂಡಿದ್ದಾರೆನ್ನುವ ಹೇಳಿಕೆ ನೀಡಿದ್ದೆ. ಆದರೆ ಅದನ್ನು ತಿರುಚಲಾಗಿದೆ. ಈ ಬೆಳವಣಿಗೆಯಿಂದ ನೊಂದಿದ್ದೇನೆ ಎಂದರು. 

ಹೈ ಕಮಾಂಡ್ ಹೇಳಿದರೆ ರಾಜೀನಾಮೆ : ಬಿಜೆಪಿ ತನ್ನದೇ ಆದ ಸೈದ್ಧಾಂತಿಕ ನೆಲೆಗಟ್ಟನ್ನು ಹೊಂದಿದೆ. ಇಲ್ಲಿ ಉನ್ನತ ನಾಯಕರಿದ್ದಾರೆ. ಅವರ ತೀರ್ಮಾನದಂತೆ ನಾವು ನಡೆದುಕೊಳ್ಳಬೇಕು. ವರಿಷ್ಠರು ಹೇಳಿದರೆ ನಾನು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಯೋಗೇಶ್ವರ್  ಹೇಳಿದರು. 

click me!