ಮಲೆನಾಡಿನಲ್ಲಿ ಕೃಷಿಕರಿಗೆ ಕಾಡಾನೆ ಕಾಟದಿಂದ ಮುಕ್ತಿ ಕಾಣ್ಣುವ ಲಕ್ಷಣ ಕಾಣ್ಣುತ್ತಿಲ್ಲ. ನಿತ್ಯವೂ ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಕಾಡಾನೆ ದಾಳಿ ಮಾಡುತ್ತಿದ್ದು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದು , ಅಥವಾ ಜೀವವನ್ನು ಉಳಿಸಿಕೊಳ್ಳುವುದು ಎನ್ನುವ ಗೊಂದಲ ಜನರಲ್ಲಿ ಕಾಡತೊಡಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.23): ಮಲೆನಾಡಿನಲ್ಲಿ ಕೃಷಿಕರಿಗೆ ಕಾಡಾನೆ ಕಾಟದಿಂದ ಮುಕ್ತಿ ಕಾಣ್ಣುವ ಲಕ್ಷಣ ಕಾಣ್ಣುತ್ತಿಲ್ಲ. ನಿತ್ಯವೂ ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಕಾಡಾನೆ ದಾಳಿ ಮಾಡುತ್ತಿದ್ದು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದು , ಅಥವಾ ಜೀವವನ್ನು ಉಳಿಸಿಕೊಳ್ಳುವುದು ಎನ್ನುವ ಗೊಂದಲ ಜನರಲ್ಲಿ ಕಾಡತೊಡಗಿದೆ. ಹೌದು ಭದ್ರ ನದಿಯ ತೀರದಲ್ಲಿ ಕಾಡು ಪ್ರಾಣಿಗಳ ದಾಂಧಲೆ ದಿನದಿಂದ ದಿನಕ್ಕೆ ಹೆಚ್ಚುತ್ತೇಲೆ ಇದ್ದು ಜೀವಭಯದಿಂದ ಕೃಷಿಕರು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಆನೆ ಕಾಟದಿಂದ ಜೀವ ಉಳಿಸಿಕೊಳ್ಳುವುದೇ ಸಾವಲಾಗಿ ಪರಿಣಾಮಿಸಿದೆ.
ಕೃಷಿಕರಿಗೆ ಎದುರಾದ ಒಂಟಿ ಸಲಗ: ರಾತ್ರಿ ಎಂಟು ಗಂಟೆ ಆದ್ರೆ ಮನೆಯಂಗಳದಲ್ಲಿ ಕಾಡಾನೆಗಳ ಸಂಚಾರ ವಿಪರೀತವಾಗಿದ್ದು ಜನರಲ್ಲಿ ಭೀತಿ ಆವರಿಸಿದೆ.ಇನ್ನು ರಾತ್ರಿ ಪರಿಸ್ಥಿತಿ ಇದಾದ್ರೆ ಬೆಳಗ್ಗೆ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾಡಾನೆ ಭಯ ವಿಪರೀತವಾಗಿದೆ.ಅಡಿಕೆ, ಕಾಫಿ ತೋಟಗಳಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಕಾಡಾನೆಗಳು ಎದುರಾಗುತ್ತಿದ್ದು ಕಾಡಾನೆ ನೋಡಿ ಕಾರ್ಮಿಕರು ತೋಟದಿಂದ ಓಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಎನ್ ಆರ್ ಪುರ ತಾಲ್ಲೂಕಿನ ನೆಲಗದ್ದೆ ಗ್ರಾಮದಲ್ಲಿ ಚನ್ನಕೇಶವ ಎನ್ನುವರು ತೋಟದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಎದುರಿಗೆ ದೈತ್ಯ ಆನೆ ಕಾಣಿಸಿಕೊಂಡಿದೆ. ಆನೆಯನ್ನು ಕಂಡು ಮನೆ ಕಡೆ ಓಡಿದ್ದಾರೆ.
Chamarajanagara: ತೋಟದ ಶೆಡ್‌ಗೆ ನುಗ್ಗಿ ಕಾಡಾನೆಗಳ ದಾಳಿ, ಹಸು ಬಲಿ
ಆನೆ ಹಿಂದೆಯೇ ಅಟ್ಟಿಸಿಕೊಂಡು ಬಂದಿದೆ. ಏದುಸಿರು ಬಿಡುತ್ತಿದ್ದ ರೈತ ಮುಕ್ಕರಿಸಿ ದಂಡೆಯ ಮೇಲೆ ಬಿದ್ದಿದ್ದಾರೆ. ಆಗ ಅಡಿಕೆ ಸುಲಿಯುತ್ತಿದ್ದ ಮಹಿಳೆಯೊಬ್ಬರು ಕಿರುಚಿದ್ದಾರೆ. ಕಿರುಚಿದ ಶಬ್ದಕ್ಕೆ ಆನೆ ಹಿಂದೆ ಹೆಜ್ಜೆ ಹಾಕಿದೆ. ಪದೇ, ಪದೇ ಜಮೀನುಗಳಿಗೆ ದಾಳಿ ನಡೆಸುತ್ತೀರುವ ಆನೆಯೂ, ಮನುಷ್ಯನ ಮೇಲೆಯೂ ದಾಳಿಗೆ ಮುಂದಾಗುತ್ತಿದೆ. ಚನ್ನಕೇಶವ ರವರ ಜಮೀನಿಗೆ ಒಂದೇ ವರ್ಷದಲ್ಲಿ ಆರು ಬಾರಿ ದಾಳಿ ಇಟ್ಟಿದ್ದೆ. ಕಳೆದ ಬುಧವಾರ ನಡೆಸಿದ ದಾಳಿಯಲ್ಲಿ 45 ಅಡಿಕೆ ಮರ, 35 ಕಾಫಿ ಗಿಡ, 150ಕ್ಕೂ ಹೆಚ್ಚು ಬಾಳೆ ಗಿಡಗಳು ಆನೆ ದಾಳಿಗೆ ನೆಲಸಮಗೊಂಡಿದೆ.
Honey mission: ತೋಟಕ್ಕೆ ನುಗ್ಗುವ ಕಾಡಾನೆ ತಡೆಯಲು ‘ಹನಿ ಮಿಷನ್’
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಸ್ಥಳೀಯರಿಂದ ಆನೆಯನ್ನು ಸ್ಥಳಾಂತರ ಮಾಡಬೇಕು ಎಂಬ ಕೂಗು ಸಹ ಪ್ರಬಲವಾಗಿ ಕೇಳಿ ಬರುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.