ದಾವಣಗೆರೆ ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ್ ಫಾರಂ ಹೌಸ್ ನಲ್ಲಿ ಅಕ್ರಮ ವನ್ಯಮೃಗ ಸಾಕಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿದ್ದ ವನ್ಯ ಪ್ರಾಣಿಗಳನ್ನು ಆನಗೋಡು ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಕೃಷ್ಣಮೃಗ ಹಾಗು ಕಾಡು ಹಂದಿ ಒಟ್ಟು ಎರಡು ಪ್ರಾಣಿಗಳು ಸಾವನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜ.23): ದಾವಣಗೆರೆ ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ್ ಫಾರಂ ಹೌಸ್ ನಲ್ಲಿ ಅಕ್ರಮ ವನ್ಯಮೃಗ ಸಾಕಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿದ್ದ ವನ್ಯ ಪ್ರಾಣಿಗಳನ್ನು ಆನಗೋಡು ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯಕ್ಕೆ ಎಲ್ಲಾ ಪ್ರಾಣಿಗಳನ್ನು ಬಿಡಲಾಗಿತ್ತು. ದುರದೃಷ್ಟ ಅಂದ್ರೇ ಅದರಲ್ಲಿ ಒಂದು ಕೃಷ್ಣಮೃಗ ಹಾಗು ಒಂದು ಕಾಡು ಹಂದಿ ಒಟ್ಟು ಎರಡು ಪ್ರಾಣಿಗಳು ಸಾವನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿ 21 ಕ್ಕೆ ಕಲ್ಲೇಶ್ವರ ಮಿಲ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೋಲಿಸರು ದಾಳಿ ನಡೆಸಿ ಒಟ್ಟು 30 ಜೀವಿಗಳನ್ನು ವಶಕ್ಕೆ ಪಡೆದು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿ ಹಸ್ತಾಂತರ ಮಾಡಿದ್ದರು, ಇದರ ಸಂಬಂಧ ಸಂಪಣ್ಣ ಹಾಗು ಕರಿಬಸವಯ್ಯ, ಸೆಂಥಿಲ್ ಹಾಗು ಮಿಲ್ ನ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಪ್ರಾಣಿಗಳು ವಶಕ್ಕೆ ಪಡೆದು ಆನಗೋಡು ಕಿರು ಮೃಗಾಲಯದಲ್ಲಿ ಹೊಸ ಆವಾಸ ಸ್ಥಾನ ಸೃಷ್ಟಿಸಿ ಅಲ್ಲಿಗೆ ಎಲ್ಲಾ ಪ್ರಾಣಿಗಳನ್ನು ಹಂತ ಹಂತವಾಗಿ ಸಾಗಿಸಲಾಗಿತ್ತು.
ಮಿಲ್‌ನಲ್ಲಿ ಪತ್ತೆಯಾದ ಆರು ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಇನ್ನುಳಿದ 22 ಕಾಡು ಪ್ರಾಣಿಗಳು ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಸೇಫಾಗಿವೆ. ಒಟ್ಟು 30 ವನ್ಯಜೀವಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಅರಣ್ಯ ಇಲಾಖೆ ಕಲ್ಲೇಶರ ಮಿಲ್ ಹಿಂಭಾಗದ ಫಾರ್ಮ್‌ಹೌಸ್‌ನಿಂದ ವಶಕ್ಕೆ ಪಡೆದು, ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. 11 ಕೃಷ್ಣಮೃಗ, 07 ಜಿಂಕೆ, 02 ನರಿ, 03 ಮುಂಗುಸಿ, 07 ಕಾಡು ಹಂದಿಗಳನ್ನು ಅರಣ್ಯ ಇಲಾಖೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ವಶಕ್ಕೆ ಪಡೆದಿತ್ತು.
Davanagere : ಕಾಂಗ್ರೆಸ್ ಮುಖಂಡ ಎಸ್.ಎಸ್. ಮಲ್ಲಿಕಾರ್ಜುನರನ್ನು ಬಂಧಿಸಿ-ಅಮಾಯಕರನ್ನು ಬಿಡಿ: ಬಿಜೆಪಿ ಆಗ್ರಹ
ಈ ಪೈಕಿ ಈಗಾಗಲೇ ಮೃತಪಟ್ಟಿದ್ದ ಕಾಡು ಹಂದಿಯ ಕಳೇಬರವನ್ನು ಕೋರ್ಟ್ ಅದೇಶದಂತೆ ವಿಲೇವಾರಿ ಮಾಡಲಾಗಿದೆ. ಅಲ್ಲದೆ, ಸೋಮವಾರ ಒಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಅದರ ದೇಹ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದ್ರು.
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಮಾನ ಆರೋಪ, ರಾಜ್ಯಾಧ್ಯಕ್ಷ ಜೋಷಿ ರಾಜೀನಾಮೆಗೆ ಒತ್ತಾಯ
ಕೋರ್ಟ್ ಅನುಮತಿ ಸಿಕ್ರೇ ಪ್ರಾಣಿಗಳನ್ನು ಬಿಡ್ತೇವೆ: ಡಿಎಪ್ ಓ
ಇನ್ನುಳಿದಂತೆ ಇದೀಗ ಮೃತಪಟ್ಟಿರುವ ಒಂದು ಕೃಷ್ಣಮೃಗ ಹೊರತುಪಡಿಸಿ, ಹತ್ತು ಕೃಷ್ಣಮೃಗ ಹಾಗೂ ಏಳು ಜಿಂಕೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ, ಕೋರ್ಟ್ ಅನುಮತಿ ದೊರೆತರೆ, ಅವುಗಳನ್ನು ಸಹ ಕಾಡಿಗೆ ಬಿಡಲಾಗುವುದು ಎಂದು ಡಿಎಪ್‌ಓ ಜಗನ್ನಾಥ್ ಮಾಹಿತಿ ನೀಡಿದ್ದಾರೆ.