ರಾಜ್ಯದ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಶಿವಮೊಗ್ಗದ ಸೊರಬದಲ್ಲಿನ ತಹಶೀಲ್ದಾರ್ ವರ್ಗಾವಣೆ!

By Suvarna NewsFirst Published Jan 23, 2023, 4:35 PM IST
Highlights

ರಾಜ್ಯ ರಾಜಕಾರಣದಲ್ಲಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ತರಹದ ರಾಜಕೀಯ ನಡೆಯುತ್ತಿರುತ್ತದೆ. ಇದೀಗ ನಾಲ್ಕು ವರ್ಷ ಒಂಬತ್ತು ತಿಂಗಳಲ್ಲಿ 14 ತಹಶೀಲ್ದಾರ್ ವರ್ಗಾವಣೆಯಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ದಾಖಲೆ ಬರೆದಿದೆ.

ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್

ಶಿವಮೊಗ್ಗ (ಜ.23): ರಾಜ್ಯ ರಾಜಕಾರಣದಲ್ಲಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ತರಹದ ರಾಜಕೀಯ ನಡೆಯುತ್ತಿರುತ್ತದೆ ಇಂತಹ ರಾಜಕೀಯಗಳಲ್ಲಿ ಕೆಲವೊಂದು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದರೆ ಮತ್ತೆ ಕೆಲವೊಂದು ರಾಜಕೀಯ ಮೇಲಾಟಕ್ಕೆ ಕಾರಣವಾಗಿರುತ್ತದೆ. ಕೆಲವೊಮ್ಮೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಸಲುವಾಗಿ ಕೂಡ ರಾಜಕೀಯ ನಡೆಯುತ್ತದೆ. 

ಆದರೆ ಸಹೋದರರ ಸವಾಲಿಗೆ ಹೆಸರುವಾಸಿಯಾಗಿರುವ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ 14 ತಹಶೀಲ್ದಾರ್ ಗಳು ವರ್ಗಾವಣೆಗೊಂಡಿದ್ದು ಇದೀಗ 15ನೇ ತಹಶೀಲ್ದಾರ್ ಆಗಮನಕ್ಕೆ ಸೊರಬ ತಾಲೂಕು ಕಚೇರಿ ಕಾಯುತ್ತಿದೆ. 

ಸದ್ಯ ಸೊರಬ ಕ್ಷೇತ್ರದ ಶಾಸಕರಾಗಿ ಬಿಜೆಪಿ ಪಕ್ಷದಿಂದ ಕುಮಾರ್ ಬಂಗಾರಪ್ಪ ಕೆಲವು ಸಾಧಿಸಿದ್ದಾರೆ. ವಿರೋಧ ಪಕ್ಷದಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಮಧು ಬಂಗಾರಪ್ಪ ಇದ್ದಾರೆ. ಆದರೆ ತಹಶೀಲ್ದಾರ್ ಗಳ ವರ್ಗಾವಣೆಯಲ್ಲಿ ವಿರೋಧ ಪಕ್ಷಗಳ ಯಾವುದೇ ಕೈವಾಡ ಇದ್ದಂತೆ ಇಲ್ಲ. ಬಿಜೆಪಿಯ ಶಾಸಕ ಕುಮಾರ್ ಬಂಗಾರಪ್ಪ ಮತ್ತು ತಹಶೀಲ್ದಾರ್ ಗಳ ನಡುವಿನ ಸಮನ್ವಯತೆಯ ಕಾರಣದಿಂದಲೇ ಒಂದು ತಿಂಗಳು ಎರಡು ತಿಂಗಳು ಮೂರು ತಿಂಗಳು ಹೆಚ್ಚೆಂದರೆ ನಾಲ್ಕು ತಿಂಗಳಗಳ ಕಾಲ ಸೊರಬದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೇವಲ 2 -  3 - 4 ತಿಂಗಳುಗಳಿಗೆ ಒಬ್ಬರಂತೆ   ತಹಶೀಲ್ದಾರ್ ಗಳ ಕಾರ್ಯ ನಿರ್ವಹಿಸಲು ಸೊರಬದಲ್ಲಿ ನಡೆಯುತ್ತಿದೆಯಾ ವರ್ಗಾವಣೆ ರಾಜಕಾರಣ...!!? . ತಹಶೀಲ್ದಾರ್ ಗಳ ವರ್ಗಾವಣೆಯಲ್ಲೂ ರಾಜಕೀಯ ಇದೆಯಾ..?! ಮೊದಲಾದ ಅನುಮಾನಗಳು ಮೂಡುತ್ತಿವೆ

ಶಾಸಕ ಕುಮಾರ ಬಂಗಾರಪ್ಪ ಅಧಿಕಾರಾವಧಿಯಲ್ಲಿ ಬದಲಾವಣೆಯಾದ ತಹಸೀಲ್ದಾರ್ ಗಳ ವಿವರ

1. ಸಿ ಪಿ ನಂದಕುಮಾರ್ 19/3/2018 ರಿಂದ 2/7/2018

2. ಎಲ್ ಜಿ ಚಂದ್ರಶೇಖರ್ 
2/7/2018 ರಿಂದ 14/8/2018

3. ಹೂ ಕೈಕಸನ್
14/8/ 2018 ರಿಂದ 31/10/2018

4. ಜೆ ಬಿ ಶ್ರೀಧರ ಮೂರ್ತಿ
31/10/2018 ರಿಂದ 9/11/2018

5. ಮಮತಾ ಹೊಸಗೌಡರ್
13/11/2018 ರಿಂದ 30/11/2018

6. ಗೋವಿಂದರಾಜ್ ಬಿ ಎಂ
1/12/2018 ರಿಂದ 21/01/2019

7. ಎಂ ಪಿ ಕವಿರಾಜ್
23/01/2019 ರಿಂದ 28/01/2019

8. ಜೆ ಬಿ ಶ್ರೀಧರ ಮೂರ್ತಿ
28/01/2019 ರಿಂದ 03/07/2019

9. ಪಟ್ಟರಾಜಗೌಡ
03//07/2019 ರಿಂದ 19/05/2020

10. ನಫೀಸಾ ಬೇಗಂ
19/05/2020 ರಿಂದ 7/9/2020

11. ಶಿವಾನಂದ ಪಿ ರಾಣೆ
7/9/2020 ರಿಂದ 

12. ಮಂಜುಳಾ ಬಿ ಹಗದಾಳ್

13. ಶೋಭಾ ಲಕ್ಷ್ಮಿ

14. ಡಾ ಮೋಹನ್ ಭಸ್ಮೆ
15. ??????

ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಪ್ರತಿನಿಧಿಸುವ ಸೊರಬ ಕ್ಷೇತ್ರದಲ್ಲಿ  ತಹಸಿಲ್ದಾರಗಳು ವರ್ಗಾವಣೆ ಎಂಬುವುದು ಐತಿಹಾಸಿಕ  ದಾಖಲೆ ನಿರ್ಮಾಣ ಮಾಡಲಾಗಿದೆ. ಇದೆ ಶನಿವಾರ ಸರ್ಕಾರ ಹೊರಡಿಸಿದ ಆದೇಶದಲ್ಲಿ ಹಾಲಿ ತಹಸೀಲ್ದಾರ್ ಡಾ. ಮೋಹನ್ ಭಸ್ಮ ಎತ್ತಂಗಡಿ ಮಾಡಿ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ. ಇದು ಈ ಅವಧಿಯ 14ನೇ ತಹಸೀಲ್ದಾರ್ ವರ್ಗಾವಣೆ ಆಗಿದ್ದು ಇದೀಗ 15ನೇ ತಹಶೀಲ್ದಾರ್ ಸೊರಬ ತಾಲೂಕ್ ಕಚೇರಿಗೆ ಬರಬೇಕಿದೆ

ಪದೇ ಪದೇ ಸೊರಬ ತಾಲೂಕು ಕಚೇರಿಯಲ್ಲಿ ತಹಸಿಲ್ದಾರಗಳ ವರ್ಗಾವಣೆಯಿಂದಾಗಿ ತಾಲೂಕು ಕಚೇರಿಯ ಆಡಳಿತ ವ್ಯವಸ್ಥೆ ಹಾಗೂ ಕಡತಗಳು ನೆನೆಗುದಿಗೆ ಬಿದ್ದಿವೆ. 

ಖಾತೆ ಬದಲಾವಣೆ, ಬಗರ್ ಹುಕುಂ ಮಂಜೂರಾತಿ, ಆಶ್ರಯ ನಿವೇಶನಗಳ ಹಂಚಿಕೆ, ಭೂಸುಧಾರಣಿ ಅರ್ಜಿ ವಿಲೇವಾರಿ, ಸಕಾಲ ದೃಢೀಕರಣ, ಭೂವ್ಯಾಜ್ಯಗಳ ಇತ್ಯರ್ಥ, ದಾರಿ ಸಮಸ್ಯೆ ವ್ಯಾಜ್ಯ, ದೇವಾಲಯಗಳ ಆಸ್ತಿ ಸಂರಕ್ಷಣೆ, ಪಡಿತರ ಚೀಟಿ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣಿ, ತತ್ಕಾಲ ಪೋಡಿ, ಹದ್ದುಬಸ್ತು, ಇ - ನಕ್ಷೆ, ನೆರೆಹಾನಿ, ಆದಾಯ ಪ್ರಮಾಣ ಪತ್ರ,ಜಾತಿ ಪ್ರಮಾಣ ಪತ್ರ, ಅನೇಕ ದೃಢೀಕರಣ ಸೇರಿದಂತೆ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿದೆ.‌ ಹೀಗೆ ಸೊರಬ ಕ್ಷೇತ್ರಗಳಲ್ಲಿ ತಹಸೀಲ್ದಾರ್ಗಳ ವರ್ಗಾವಣೆ ಎಂಬುದು ನಾನಾ ರಾಜಕೀಯ ಹಾಗೂ ಅನುಮಾನಗಳಿಗೆ ಎಡೆಮಾಡಿದೆ

click me!