ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಓರ್ವನನ್ನ ಬಂಧಿಸಿದ ಪೊಲೀಸರು| ಬಂಧಿತನಿಂದ 100, 500 ಮುಖಬೆಲೆಯ 38,500 ರೂ. ಮೌಲ್ಯದ ನಕಲಿ ನೋಟು ವಶ| ಬಂಧಿತ ಆರೋಪಿ ಕುಂಕುಮ ಭಂಡಾರ ವ್ಯಾಪಾರಿಗೆ ನಕಲಿ ನೋಟು ನೀಡಿ ವಂಚಿಸುತ್ತಿದ್ದ|
ಬೆಳಗಾವಿ(ಜ.12): ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ನಿವಾಸಿ ಈರಣ್ಣ ಮೂಲಿನಮನಿ ಎಂದು ಗುರುತಿಸಲಾಗಿದೆ.
ಈರಣ್ಣ ಮೂಲಿನಮನಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ. ವ್ಯಾಪಾರಿಯ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ ಈರಣ್ಣ ಮೂಲಿನಮನಿಯನ್ನು ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 100, 500 ಮುಖಬೆಲೆಯ 38,500 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಂಧಿತ ಆರೋಪಿ ಈರಣ್ಣ ಮೂಲಿನಮನಿ ಕುಂಕುಮ ಭಂಡಾರ ವ್ಯಾಪಾರಿಗೆ ನಕಲಿ ನೋಟು ನೀಡಿ ವಂಚಿಸಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ವ್ಯಾಪಾರಿಯೊಬ್ಬರು ಸವದತ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವ್ಯಾಪಾರಿಯ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.