ಶಿವಮೊಗ್ಗ (ಜು.30): ಪೊಲೀಸ್ ಕಾರ್ಯಾಚರಣೆ ವೇಳೆ ನಕಲಿ ಕೊಬ್ಬರಿ ಎಣ್ಣೆ ಮಾರಾಟ ಜಾಲವೊಂದು ಶಿವಮೊಗ್ಗದಲ್ಲಿ ಪತ್ತೆಯಾಗಿದೆ. 24 ಬಾಟಲಿ ನಕಲಿ ಕೊಬ್ಬರಿ ಎಣ್ಣೆ ಜಪ್ತಿ ಮಾಡಲಾಗಿದೆ.
ನಕಲಿ ಕೊಬ್ಬರಿ ಎಣ್ಣೆ ಮಾರಾಟ ಜಾಲದ ಮಳಿಗೆ ಮೇಲೆ ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ ಮುನ್ನೊಳಿ ಮತ್ತು ಕೋಟೆ ಠಾಣೆ ಪೊಲೀಸರ ತಂಡದ ನೇತೃತ್ವದಲ್ಲಿಂದು ದಾಳಿ ನಡೆದಿದ್ದು ಈ ವೇಳೆ ಭಾರೀ ಅಕ್ರಮ ಬೆಳಕಿಗೆ ಬಂದಿದೆ.
ಯಾದಗಿರಿ: ನಕಲಿ ಹತ್ತಿಬೀಜ ಮಾರಾಟ, ಮುಂಚೂಣಿಯಲ್ಲಿ ಗುರುಮಠಕಲ್ ?
ಶಿವಮೊಗ್ಗದ ಗಾಂಧಿಬಜಾರ್ ಕುಚಲಕ್ಕಿ ಕೇರಿ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಕಲಿ ಕೊಬ್ಬರಿ ಎಣ್ಣೆಯ 24 ಬಾಟಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರತಿಷ್ಠಿತ ಕಂಪನಿಯ ಕೊಬ್ಬರಿ ಎಣ್ಣೆ ಬಾಟಲಿಗೆ ಹೋಲಿಕೆಯಾಗುತ್ತಿರುವ ನಕಲಿ ಕೊಬ್ಬರಿ ಎಣ್ಣೆ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ.
ನಗರದ ಹಲವು ಅಂಗಡಿಗಳಿಗೆ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ನಕಲಿ ಕೊಬ್ಬರಿ ಎಣ್ಣೆ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಎಸಗುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.