ಚುನಾವಣೆಗೆ ಬಿಎಸ್‌ಪಿ ಮುಖಂಡರ ಸಿದ್ಧತೆ : ರಾಜ್ಯಾದ್ಯಂತ ಸ್ಪರ್ಧೆಗೆ ಚಿಂತನೆ

By Kannadaprabha NewsFirst Published Jul 30, 2021, 10:43 AM IST
Highlights
  • ಮುಂಬರುವ ಜಿಪಂ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ
  • ಕೆ.ಆರ್‌ ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಜಿಪಂ ಮತ್ತು 8 ತಾಪಂ  ಕ್ಷೇತ್ರಗಳಲ್ಲಿ ಬಹುಜನ ಸಮಾಜದ  ಪಕ್ಷ ತನ್ನ ಅಭ್ಯರ್ಥಿ ಕಣಕ್ಕೆ

 ಕೆ.ಆರ್‌.ಪೇಟೆ (ಜು.30): ಮುಂಬರುವ ಜಿಪಂ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕೆ.ಆರ್‌ ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಜಿಪಂ ಮತ್ತು 8 ತಾಪಂ  ಕ್ಷೇತ್ರಗಳಲ್ಲಿ ಬಹುಜನ ಸಮಾಜದ  ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕೆ  ಇಳಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಪ್ರಕಟಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಹುಜನ ಸಮಾಜ ಪಕ್ಷ ತಳಮಟ್ಟದಿಂದ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ರಾಜ್ಯ ರಾಜಕಾರಣದಲ್ಲಿ ಹೊಸ ಬದಲಾವಣೆ ತರುವ  ಹುಮ್ಮಸ್ಸಿನಲ್ಲಿ  ನಮ್ಮ ಕಾರ್ಯಕರ್ತರಿದ್ದು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ.

ಬಿಎಸ್‌ವೈ ಭೇಟಿ ಬಳಿಕ ಬಿಜೆಪಿ ಸೇರ್ಪಡೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಶಾಸಕ

ಯಾವ್ಯಾವ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸಂಘಟಿತ ಹೋರಾಟದ ಮೂಲಕ ಗೆಲುವುದು ಸಾಧಿಸಬಹುದೆನ್ನುವುದನ್ನು ಲೆಕ್ಕಾಚಾರ ಮಾಡಲಾಗಿದ್ದು,  ಕೆ.ಆರ್‌ ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕ್ಷೇತ್ರಗಳಿಂದ ಕಣಕ್ಕೆ ಇಳಿಯಲಿದ್ದಾರೆ. 

ಉತ್ತಮ ಅಭ್ಯರ್ಥಿ ದೊರಕಿದರೆ ತಾಲೂಕಿನ ಎಲ್ಲಾ ಕ್ಷೇತ್ರಗಳಿಂದ  ಸ್ಪರ್ಧಿಸುತ್ತದೆ. 

ಹಣ ಹೆಂಡ, ಬಾಡೂಟ ಮತ್ತು ಮಾಧ್ಯಮಗಳನ್ನು ಬಳಸಿ ಗೆಲುವಿಗೆ  ಯತ್ನಿಸುತ್ತಿರುವರನ್ನು ಜನ ತಿರಸ್ಕರಿಸಬೇಕು ಎಂದು ಹೇಳಿದರು. 

click me!