ಮಂಗಳೂರು ಗೋಲಿಬಾರ್: ಘಟನೆ ನೋಡಿದ್ರೆ ನೀವೂ ಸಾಕ್ಷಿ ಹೇಳಬಹುದು..!

By Suvarna News  |  First Published Jan 7, 2020, 10:41 AM IST

ಮಂಗಳೂರು ಗೋಲಿಬಾರ್ ಗಲಭೆ ಬಗ್ಗೆ ಪ್ರತ್ಯಕ್ಷದರ್ಶಿಗಳಿಗೆ ಸಾಕ್ಷಿ ಹೇಳುವ ಅವಕಾಶವನ್ನು ನೀಡಲಾಗಿದೆ. ಘಟನೆಯನ್ನು ನೋಡಿದ್ದವರು, ಆ ಬಗ್ಗೆ ಮಾಹಿತಿ ಉಳ್ಳವರು ಸಾಕ್ಷಿ ನೀಡಬಹುದಾಗಿದೆ.


ಮಂಗಳೂರು(ಜ.07): ಮಂಗಳೂರು ಗೋಲಿಬಾರ್ ಗಲಭೆ ಬಗ್ಗೆ ಪ್ರತ್ಯಕ್ಷದರ್ಶಿಗಳಿಗೆ ಸಾಕ್ಷಿ ಹೇಳುವ ಅವಕಾಶವನ್ನು ನೀಡಲಾಗಿದೆ. ಘಟನೆಯನ್ನು ನೋಡಿದ್ದವರು, ಆ ಬಗ್ಗೆ ಮಾಹಿತಿ ಉಳ್ಳವರು ಸಾಕ್ಷಿ ನೀಡಬಹುದಾಗಿದೆ.

ಮಂಗಳೂರು ಗೋಲಿಬಾರ್ ಪ್ರಕರಣ ಮ್ಯಾಜಿಸ್ಟ್ರೇಟ್ ತನಿಖೆ ಹಿನ್ನೆಲೆ ಮಂಗಳವಾರ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ಎದುರು ಸಾಕ್ಷ್ಯ ನೀಡಲು ಅವಕಾಶ ನೀಡಲಾಗಿದೆ. ಘಟನೆ ಬಗ್ಗೆ ಮಾಹಿತಿಯುಳ್ಳವರು ಮತ್ತು ಪ್ರತ್ಯಕ್ಷ ನೋಡಿದವರು ಸಾಕ್ಷ್ಯ ನೀಡಲು ಅವಕಾಶ ನೀಡಲಾಗಿದ್ದು, ಮ್ಯಾಜಿಸ್ಟ್ರೀಯಲ್ ವಿಚಾರಣೆ ನಡೆಸುತ್ತಿರುವ ಉಡುಪಿ ಡಿಸಿ ಜಗದೀಶ್ ಎದುರು ಸಾಕ್ಷ್ಯ ಹೇಳಬಹುದು.

Tap to resize

Latest Videos

ಮಂಗಳೂರಲ್ಲಿ ಶಾಂತಿ ಕದಡಿದ್ದೇ ಐವನ್ ಡಿಸೋಜ: ನಳಿನ್

ಸಾಕ್ಷಿ ಹೇಳುವವರು ಮಂಗಳೂರು ಮಿನಿ ವಿಧಾನಸೌಧದ ಎಸಿ ಕಚೇರಿ ಸಭಾಂಗಣದಲ್ಲಿ ಹಾಜರಿರಲು ಸೂಚನೆ ನೀಡಲಾಗಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ಸಾಕ್ಷ್ಯ ಹೇಳಿಕೆಗೆ ಅವಕಾಶ ನೀಡಲಾಗಿದೆ.

ಕಮಿಷನರ್‌ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ

click me!