ಜನವರಿ 8 ರಂದು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಭಾರತ್ ಬಂದ್‌ಗೆ ಹಲವು ಬಾಗಲಕೋಟೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತವಾಗುತ್ತಿದೆ.
ಬಾಗಲಕೋಟೆ [ಜ.07]: ಕೇಂದ್ರ ಸರ್ಕಾರದ ಕಾರ್ಮಿಕ ಕಾನೂನುಗಳ ವಿರುದ್ಧ ವಿವಿಧ ಸಂಘಟನೆಗಳು ಜನವರಿ 8 ರಂದು ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತವಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಬುಧವಾರ [ಜ.8] ನಡೆಯಲಿರುವ ಭಾರತ್ ಬಂದ್ ಗೆ ಬೆಂಬಲ ನೀಡುವುದಾಗಿ ಘೋಷಿಸಿವೆ.
ಬಾಗಲಕೋಟೆ ಜಿಲ್ಲೆಯ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳಾದ ಸಿಐಟಿಯುಸಿ, ಎಐಟಿಯುಸಿ,ಕೆಎಸ್ ಆರ್ ಟಿಸಿ ಸ್ಟಾಪ್ , ವರ್ಕರ್ ಯೂನಿಯನ್, ದಲಿತ, ಅಲ್ಪಸಂಖ್ಯಾತರ ಸಹೋದರತ್ವ ಸಮಿತಿ, ಗ್ರಾಮ ಪಂಚಾಯಿತಿ ನೌಕರರ ಸಂಘ ಬೆಂಬಲ ನೀಡುತ್ತಿವೆ.
ಜ.8 ಭಾರತ್ ಬಂದ್: ಏನಿದೆ-ಏನಿಲ್ಲ? ಶಾಲೆಗಳಿಗೆ ರಜೆ ಇರುತ್ತಾ?...
ಆದರೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. ಅಲ್ಲದೇ ಆಟೋ, ಟ್ಯಾಕ್ಸಿ, ಹೋಟೆಲ್ ಸೇವೆಗಳು ಇರಲಿದ್ದು, ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.
ಇನ್ನು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜು ರಜೆ ಬಗ್ಗೆ ಇನ್ನೂ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಪ್ರತಿಭಟನೆಯ ಬಿಸಿ ಯಾವ ರೀತಿ ಇರಲಿದೆ ಎಂದು ನೋಡಿಕೊಂಡು ರಜೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.