ಚುನಾವಣೆಗೆ ಮೊದಲೇ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ಭಿನ್ನಮತ, ಕಲಹಗಳು ಇರಬಾರದು ಎಲ್ಲರೂ ಒಗ್ಗಟ್ಟಿನಿಂದ ಹೈಕಮಾಂಡ್‌ಗೆ ಬದ್ಧರಾಗಿರಬೇಕು ಹಾಗೂ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ನಮ್ಮ ಮುಂದಿನ ಗುರಿಯಾಗಿರಬೇಕೆಂದು ರಾಜ್ಯ ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೋಲಾರ: ಚುನಾವಣೆಗೆ ಮೊದಲೇ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ಭಿನ್ನಮತ, ಕಲಹಗಳು ಇರಬಾರದು ಎಲ್ಲರೂ ಒಗ್ಗಟ್ಟಿನಿಂದ ಹೈಕಮಾಂಡ್‌ಗೆ ಬದ್ಧರಾಗಿರಬೇಕು ಹಾಗೂ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ನಮ್ಮ ಮುಂದಿನ ಗುರಿಯಾಗಿರಬೇಕೆಂದು ರಾಜ್ಯ ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಹಾರೋಹಳ್ಳಿಯ ಅವರ ನಿವಾಸದಲ್ಲಿ ಹೋಗುವ ಮಾರ್ಗ ಮಧ್ಯೆ ಸುದ್ಧಿಗಾರರೊಂದಿಗೆ ಮಾತನಾಡಿ, ಮೊದಲಿದ್ದ ವೈಯಕ್ತಿಕ ಅಭಿಪ್ರಾಯಗಳನ್ನು ಮರೆತು ದ ತೀರ್ಮಾನಿಸಿದಂತೆ ಎಲ್ಲರೂ ಮುಂದುವರೆದಾಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ ಎಂದು ಕಿವಿಮಾತು ತಿಳಿಸಿದರು.
ಸಮಿತಿಯಿಂದ ಹೊರಬಂದ ಸಿಪಿಐಎಂ
ನವದೆಹಲಿ(ಸೆ.19) ಇಂಡಿಯಾ ಮೈತ್ರಿ ಕೂಟದ ಸಭೆ, ಚುನಾವಣಾ ರಣತಂತ್ರಗಳ ಚರ್ಚೆ ಅಂತಿಮ ಹಂತದಲ್ಲಿದೆ. ಇದರ ನಡುವೆ ಇಂಡಿಯಾ ಮೈತ್ರಿಗೆ ಶಾಕ್ ಎದುರಾಗಿದೆ. ಒಂದೆಡೆ ಆಯ್ಕೆ ಕಲ ಪತ್ರಕರ್ತರ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ತೆಗೆದುಕೊಂಡ ನಿರ್ಧಾರಕ್ಕೆ ಇಂಡಿಯಾ ಮೈತ್ರಿಕೂಟದ ಕೆಲ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಸಿಪಿಐ(ಎಂ) ಪಕ್ಷ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿ ಹೋರಾಟ ಮಾಡುತ್ತೇವೆ ಎಂದಿದೆ. ಈ ಘೋಷಣೆ ಬೆನ್ನಲ್ಲೇ ಸಿಪಿಐ(ಎಂ) ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಇಂಡಿಯಾ ಮೈತ್ರಿ ಒಕ್ಕೂಟದ ಸಮನ್ವಯ ಸಮಿತಿ ಸಭೆಯಿಂದ ಹೊರಗುಳಿಯಲು ನಿರ್ಧರಿಸಿದೆ.
ಇಂಡಿಯಾ ಮೈತ್ರಿ ಒಕ್ಕೂಟದಲ್ಲಿರುವ 26ಕ್ಕೂ ಹೆಚ್ಚು ಪಕ್ಷಗಳ ಜೊತೆ ಸಮನ್ವಯ ಸಾಧಿಸಲು ಸಮನ್ವಯ ಸಮಿತಿ ರಚಿಸಲಾಗಿದೆ. ಆದರೆ ಈ ಸಮಿತಿಯಲ್ಲೇ ಭಿನ್ನಾಭಿಪ್ರಾಯ ಹೆಚ್ಚಿದೆ. ಕಾರಣ ಸೀಟು ಹಂಚಿಕೆ ವಿಚಾರದಲ್ಲಿ ಕೆಲ ರಾಜ್ಯದಲ್ಲಿ ಪ್ರಾಬಲ್ಯದ ಪಕ್ಷಗಳು ಯಾವುದೇ ಮೈತ್ರಿಗೆ ಒಪ್ಪಿಕೊಳ್ಳುತ್ತಿಲ್ಲ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಸಿಪಿಐ(ಎಂ) ಪಕ್ಷ ಬಲಿಷ್ಠವಾಗಿದೆ. ಏಕಾಂಗಿಯಾಗಿ ಹೋರಾಡಿ ಗೆಲುವು ಸಾಧಿಸಬಲ್ಲ ಶಕ್ತಿ ಇದೆ. ಇನ್ನು ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಬಲಿಷ್ಠವಾಗಿದೆ. ಹೀಗೆ ಕೆಲ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಈ ಪಕ್ಷಗಳು ಮೈತ್ರಿಗೆ ಜಗ್ಗುತ್ತಿಲ್ಲ. ಖುದ್ದು ಸಿಪಿಐ(ಎಂ) ಕೂಡ ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸಮನ್ವಯ ಸಮಿತಿಯಿಂದಲೇ ಹೊರಬಂದಿದೆ.
I.N.D.I.A ಒಕ್ಕೂಟಕ್ಕೆ ಬಿಗ್ ಶಾಕ್: ಬಂಗಾಳ, ಕೇರಳದಲ್ಲಿ ಮೈತ್ರಿಕೂಟಕ್ಕೆ ಬೆಂಬಲವಿಲ್ಲವೆಂದ ಈ ಪಕ್ಷ!
ಕೇರಳದಲ್ಲಿ ಸಿಪಿಐ(ಎಂ) ಅಧಿಕಾರದಲ್ಲಿದೆ. ಮೈತ್ರಿ ಮಾಡಿಕೊಂಡರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದಲ್ಲಿ ಇರುವ ಒಂದು ರಾಜ್ಯವನ್ನೂ ಕಳೆದುಕೊಳ್ಳುವ ಭೀತಿ ಸಿಪಿಐ(ಎಂ) ಎದುರಾಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ವಿರುದ್ದ ಹೋರಾಡುತ್ತಿರುವ ಸಿಪಿಐ(ಎಂ) ಮುಂಬುರವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಹೀಗಾಗಿ ಲೋಕಸಭೆ ಚುನಾವಣೆಗಾಗಿ ಮಾಡಿಕೊಳ್ಳುವ ಮೈತ್ರಿಯಿಂದ ಸಿಪಿಐ(ಎಂ) ಕುರುಹು ಉಳಿದಿರುವ ಕೇರಳ ಹಾಗೂ ಬಂಗಾಳದಲ್ಲಿ ಹೆಸರೇ ಇಲ್ಲದಾಗಲಿದೆ ಅನ್ನೋ ಆತಂಕ ಸಿಪಿಐ(ಎಂ) ಕಾಡುತ್ತಿದೆ.
ಅಣ್ಣಾಮಲೈಯಿಂದ ಪಕ್ಷಕ್ಕೆ ಅವಮಾನ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮೈತ್ರಿ ಮುರಿದ ಎಐಎಡಿಎಂಕೆ!
ಸೀಟು ಹಂಚಿಕೆ ಇನ್ನು ಅಂತಿಮವಾಗಿಲ್ಲ. ಕಾಂಗ್ರೆಸ್ ಮೈತ್ರಿಗೆ ಹೆಚ್ಚು ಒಲವು ತೋರಿಸುತ್ತಿದೆ. ಸದ್ಯ ಇಂಡಿಯಾ ಮೈತ್ರಿಯಲ್ಲಿರುವ ಅತೀ ದೊಡ್ಡ ಪಕ್ಷಗಳಲ್ಲಿ ಕಾಂಗ್ರೆಸ್‌ಗೆ ಮೊದಲ ಸ್ಥಾನ. ಅತೀ ಹೆಚ್ಚಿನ ಸಂಸದರು ಹಾಗೂ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹೀಗಾಗಿ ಲೋಕಸಭೆಯಲ್ಲಿ ಮೈತ್ರಿ ಕೂಡ ಗೆಲುವು ಸಾಧಿಸಿದರೆ ಅಧಿಕಾರದಲ್ಲಿ ಪ್ರಮುಖ ಪಾತ್ರನಿರ್ವಹಣೆ ಕಾಂಗ್ರೆಸ್ ಹೆಗೆಲೇರಲಿದೆ. ಹೀಗಾಗಿ ಕಾಂಗ್ರೆಸ್ ಶತಾಯಗತಾಯ ಮೈತ್ರಿ ಮೂಲಕವೇ ಚುನಾವಣೆ ಎದುರಿಸಲು ಹೆಣಗಾಡುತ್ತಿದೆ. ಆದರೆ ಕೆಲ ಪಕ್ಷಗಳು ಮೈತ್ರಿಗೆ ಒಪ್ಪಿಕೊಂಡಿದೆ. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನ ಅಭಿಪ್ರಾಯ ತಳೆದಿದಿದೆ.