Karnataka Budget 2022-23: ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಬೇಕು ಒತ್ತು

By Kannadaprabha News  |  First Published Mar 2, 2022, 4:14 AM IST

*   ಸಾಕಾರಗೊಳ್ಳದ ಜಿಂಕೆ ವನ, ಕರಡಿಧಾಮ
*  ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮಾನವನ ಅಟ್ಟಹಾಸ ನಿಲ್ಲಲಿ
*  ಮೀನುಗಾರರು ನಿಯಮಬದ್ಧವಾಗಿ ಮೀನುಗಾರಿಕೆ ನಡೆಸಬೇಕು
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.02): ಜಿಲ್ಲೆಯಲ್ಲಿ ಅಪಾರ ವನ್ಯಜೀವಿ(Wildlife) ಸಂಪತ್ತು ಇದ್ದು, ಅಪರೂಪದ ಪ್ರಾಣಿಗಳು, ವಿಶಿಷ್ಟ ಜಲಚರ, ಪಕ್ಷಿಗಳಿವೆ. ಅದಕ್ಕಿಂತ ಮಿಗಿಲಾಗಿ ರಾಷ್ಟ್ರೀಯ ಪಕ್ಷಿ ನವಿಲುಗಳು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಅವುಗಳ ಸಂರಕ್ಷಣೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ(Budjet) ಒತ್ತು ಸಿಗುವುದೇ?

Tap to resize

Latest Videos

ಬಯಲು ಸೀಮೆಯಾಗಿದ್ದರೂ ಕುರುಚಲು ಕಾಡು ಮತ್ತು ತುಂಗಭದ್ರಾ ನದಿಯುದ್ದಕ್ಕೂ(Tungabhadra River) ಕಾಡು ಇರುವುದರಿಂದ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತು ಜಿಲ್ಲೆಯಲ್ಲಿದೆ. ಅವುಗಳನ್ನು ಸಂರಕ್ಷಣೆ ಮಾಡುವುದು ತೀರಾ ಅಗತ್ಯ. ಅಳಿವಿನಂಚಿನಲ್ಲಿರುವ ಕೆಲವು ಪ್ರಾಣಿ, ಪಕ್ಷಿಗಳು ಇದ್ದು, ಅವುಗಳ ಸಂತಾನ ವೃದ್ಧಿಗೆ ಸೂಕ್ತ ವಾತಾವರಣ ನಿರ್ಮಾಣವಾಗಬೇಕಿದೆ.
ಜಿಲ್ಲೆಯಲ್ಲಿ ಜಿಂಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವು ಎಷ್ಟಿವೆ ಎನ್ನುವ ಕುರಿತು ಇತ್ತೀಚೆಗೆ ಸರ್ವೇ ಮಾಡಿಲ್ಲ. ಆದರೆ, ಜಿಂಕೆಗಳ ಹಾವಳಿಯಿಂದ ರೈತರು(Farmers) ಬೆಳೆ ಕಾಪಾಡಿಕೊಳ್ಳಲು ಆಗದೆ ಹತ್ತಾರು ಸಾವಿರ ಎಕರೆ ಭೂಮಿ ಪಾಳು ಬಿಟ್ಟಿದ್ದಾರೆ.

Harsha Murder Case: 'ಸಿದ್ದರಾಮಯ್ಯ ಅಲ್ಲ, ಸಿದ್ದರಾಮ ಮುಲ್ಲಾ...'

ಕೃಷ್ಣಮೃಗ, ಚಿಗರಿ ಸೇರಿದಂತೆ ಅದರ ಅಷ್ಟೂ ವೈವಿಧ್ಯತೆಗಳು ಜಿಲ್ಲೆಯಲ್ಲಿವೆ. ಇವುಗಳ ಸಂರಕ್ಷಣೆಗಾಗಿ ಸುಮಾರು ಹತ್ತು ವರ್ಷಗಳ ಹಿಂದೆಯೇ ಜಿಂಕೆ ವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿ ಕೇಂದ್ರಕ್ಕೂ ಪ್ರಸ್ತಾವನೆ ಕಳುಹಿಸಲಾಯಿತು. ರಾಜ್ಯ ಬಜೆಟ್‌ನಲ್ಲಿ(Karnataka Budget) .50 ಲಕ್ಷ ಮೀಸಲಿರಿಸಲಾಯಿತು. ಆದರೆ, ಅದರ ನಂತರ ಅದ್ಯಾವ ಬೆಳವಣಿಗೆಯೂ ಆಗಲಿಲ್ಲ. ಜಿಂಕೆ ವನ ಪ್ರಸ್ತಾಪಕ್ಕೆ ಕೇಂದ್ರ ಅಸ್ತು ಎನ್ನಲಿಲ್ಲ. ಇಂದಿಗೂ ನನೆಗುದಿಗೆ ಬಿದ್ದಿದೆ. ಆದರೆ, ಜಿಲ್ಲೆಯಲ್ಲಿ ಜಿಂಕೆ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ.

ಜಿಂಕೆಗಳ ಸಂರಕ್ಷಣೆಗೆ ಜಿಂಕೆ ವನ ತೀರಾ ಅಗತ್ಯವಾಗಿದೆ. ಜಿಂಕೆ ವನ ಮಾಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ. ಈ ಬಜೆಟ್‌ನಲ್ಲಿಯಾದರೂ ಸಿಕ್ಕಿತೆ ಅನುದಾನ ಎನ್ನುವುದು ಮತ್ತೆ ಹಳೆಯ ನಿರೀಕ್ಷೆ.
ಕರಡಿಗಳ ಸಂಖ್ಯೆಯೂ ಹೇರಳವಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ ಎಪಿಎಂಸಿ ಮಾರುಕಟ್ಟೆಗೆ ಕರಡಿ ನುಗ್ಗಿದ್ದೇ ಇದಕ್ಕೆ ಸಾಕ್ಷಿ. ಅದರಲ್ಲೂ ಮಂಗಳಾಪುರ ಗ್ರಾಮದಲ್ಲಿ ಕರಡಿಯಾಡಿಸುವವರ ಸಂತತಿಯೇ ಇದೆ. ಈಗ ಕರಡಿಗಳನ್ನು ಆಡಿಸುವುದಕ್ಕೆ ಬ್ರೇಕ್‌ ಬಿದ್ದಿದೆ. ಇಂತಹ ಕರಡಿಗಳ ಸಂರಕ್ಷಣೆಗೆ ಕರಡಿಧಾಮ ಸ್ಥಾಪನೆ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಯೇ ಕಳುಹಿಸಿಕೊಟ್ಟಿದೆ. ಹಿರೇಸೂಳಿಕೇರಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ ಕರಡಿ ಧಾಮ ಸ್ಥಾಪಿಸುವ ಪ್ರಸ್ತಾಪಕ್ಕೆ ಹಣಕಾಸಿನ ಕೊರತೆಯಾಗಿದೆ. ಇದುವರೆಗೂ ಸುಮಾರು 12 ಕರಡಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿವೆ.

ಜಲಚರಗಳು:

ತುಂಗಭದ್ರಾ ನದಿಯುದ್ದಕ್ಕೂ ನೀರುನಾಯಿ ಸೇರಿದಂತೆ ಅಪಾರ ಪ್ರಮಾಣದ ಜಲಚರಗಳು ಇವೆ. ಅದರಲ್ಲೂ ದೇಶದಲ್ಲಿಯೇ ವಿಶಿಷ್ಟ ಆಮೆಗಳು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮತ್ತು ನದಿಯಲ್ಲಿ ಸಿಗುತ್ತವೆ. ಇವುಗಳ ಅಂತಾರಾಷ್ಟ್ರೀಯ ಕಳ್ಳಸಾಗಣೆಯೂ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಮಾನವನ ಮುಖ ಹೋಲುವ ಫಿಶ್‌ಗಳು ಸೇರಿದಂತೆ ಜಲಚರಗಳಲ್ಲಿಯೇ ವಿಶಿಷ್ಟ ಫಿಶ್‌ಗಳಿವೆ. ಆದರೆ, ಇವುಗಳ ಸಂರಕ್ಷಣೆಯಾಗುತ್ತಿಲ್ಲ. ಮೀನುಗಾರರು ನಿಯಮಬದ್ಧವಾಗಿ ಮೀನುಗಾರಿಕೆ ನಡೆಸಬೇಕು. ಆದರೆ, ತರಬೇತಿ ಇಲ್ಲದಿರುವ ಮೀನುಗಾರರು ನದಿಯಲ್ಲಿ ಇಳಿಯುವುದರಿಂದ ಮತ್ತು ದುರಾಸೆ ನಾನಾ ರೀತಿಯ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಅವುಗಳ ಸಂತತಿಗೆ ಕುತ್ತು ಬಂದಿದೆ. ಈ ದಿಸೆಯಲ್ಲಿ ತುಂಗಭದ್ರಾ ನದಿಯನ್ನು ವಿಶೇಷ ಸಂರಕ್ಷಿತ ಪ್ರದೇಶ ಎಂದು ಗುರುತಿಸಿ, ನೀರು ಕಲ್ಮಶವಾಗದಂತೆ ತಡೆಯಬೇಕಾಗಿದೆ.

ಏನೇನು ಪ್ರಾಣಿಗಳು ಇವೆ:

ಜಿಲ್ಲೆಯಲ್ಲಿ ಜಿಂಕೆ, ಕರಡಿ, ಚಿರತೆ, ನರಿ, ನವಿಲು, ನೀರು ನಾಯಿ, ಕೃಷ್ಣಮೃಗಗಳು ಸೇರಿದಂತೆ ಪ್ರಮಾಣದ ಪ್ರಾಣಿ ಸಂಪತ್ತು ಇವೆ.

ಬಂದಾಗಲಿ:

ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಮರಳುಗಾರಿಕೆ ನಿಲ್ಲಬೇಕಿದೆ. ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಾನವನ ಅಟ್ಟಹಾಸಕ್ಕೆ ಕೊನೆ ಹೇಳಬೇಕಾಗಿದೆ. ಮಾನವನ ದುರಾಸೆಯಿಂದ ಅವುಗಳ ಸಂತತಿ ಬೆಳೆಯಲು ಅಡ್ಡಿಯಾಗಿದೆ.

Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು

ತುಂಗಭದ್ರಾ ಜಲಾಶಯ ಮತ್ತು ನದಿಯಲ್ಲಿ ದೇಶದಲ್ಲಿಯೇ ವಿಶಿಷ್ಟಬಗೆಯ ಆಮೆಗಳು, ನೀರು ನಾಯಿಗಳು ಇದ್ದು, ಅವುಗಳ ಸಂರಕ್ಷಣೆಗೆಯ ಅಗತ್ಯವಿದೆ. ಇದಕ್ಕಾಗಿ ತುಂಗಭದ್ರಾ ನದಿಯುದ್ದಕ್ಕೂ ನಡೆಯುವ ಮೀನುಗಾರಿಕೆಯನ್ನು ಷರತ್ತುಬದ್ಧವಾಗಿ ಮಾಡುವುದಕ್ಕೆ ಮಾತ್ರ ಅವಕಾಶ ನೀಡಬೇಕು. ಈ ದಿಸೆಯಲ್ಲಿ ಸರ್ಕಾರ ದಿಟ್ಟಕ್ರಮ ಕೈಗೊಳ್ಳುವ ಅಗತ್ಯವಿದೆ ಅಂತ ಕೊಟ್ಟೂರು ಪಕ್ಷಿ ಮತ್ತು ಜಲಚರ ತಜ್ಞ ಅಬ್ದುಲ್‌ ಸಮದ್‌ ತಿಳಿಸಿದ್ದಾರೆ. 

ಬಯಲು ಸೀಮೆಯಾಗಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ವನ್ಯ ಜೀವಿಸಂಪತ್ತು ಹೇರಳವಾಗಿದೆ. ಅವುಗಳ ಸಂರಕ್ಷಣೆಗೆ ರಾಜ್ಯಸರ್ಕಾರ ಮುಂದಾಗಬೇಕಾಗಿದೆ. ಅರಣ್ಯ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಳ ಮಾಡಿ, ಅಗತ್ಯ ಅನುದಾನ ನೀಡಿ, ವನ್ಯಸಂಪತ್ತು ಕಾಪಾಡಬೇಕಾಗಿದೆ ಅಂತ ವನ್ಯಪ್ರಾಣಿ ಪ್ರಿಯ ಸುಜೀತ್‌ ಶೆಟ್ಟರ್‌ ಹೇಳಿದ್ದಾರೆ.
 

click me!