Maha Shivratri: ನಂದಿ ಬೆಟ್ಟದ ಶಿವರಾತ್ರಿ ಸಂಭ್ರಮದಲ್ಲಿ ಬೊಮ್ಮಾಯಿ ಕೊಟ್ಟ ಗುಡ್ ನ್ಯೂಸ್!

Published : Mar 02, 2022, 03:52 AM ISTUpdated : Mar 02, 2022, 05:46 AM IST
Maha Shivratri: ನಂದಿ ಬೆಟ್ಟದ ಶಿವರಾತ್ರಿ ಸಂಭ್ರಮದಲ್ಲಿ ಬೊಮ್ಮಾಯಿ ಕೊಟ್ಟ ಗುಡ್ ನ್ಯೂಸ್!

ಸಾರಾಂಶ

* ನಂದಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ * ನಂದಿಯಲ್ಲಿ ಶಿವೋತ್ಸವಕ್ಕೆ ಸಿಎಂ ಬೊಮ್ಮಾಯಿ ಶಂಖ ಊದಿ ಚಾಲನೆ * ಶಂಕರ್ ನಾಗ್ ಕನಸಿನ ರೋಪ್ ವೇ * ಕರ್ನಾಕದ ಜಲಯೋಜನೆಗಳಿಗೆ ವೇಗ

ಚಿಕ್ಕಬಳ್ಳಾಪುರ(ಮೇ. 02)  ಪ್ರಸಿದ್ಧ ಗಿರಿಧಾಮವಾದ ನಂದಿಬೆಟ್ಟಕ್ಕೆ (Nandi Hills) 93 ಕೋಟಿ ವೆಚ್ಚದಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜೊತೆಗೆ ನಂದಿ ದೇವಾಲಯದ ಸಮಗ್ರ ಅಭಿವೃದ್ಧಿಗೂ ರಾಜ್ಯ ಸರ್ಕಾರ ಬದ್ದವಾಗಿದೆಯೆಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭರವಸೆ ನೀಡಿದ್ದಾರೆ.

ತಾಲೂಕಿನ ನಂದಿಯಲ್ಲಿ ಮಂಗಳವಾರ ಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವೋತ್ಸವ (Maha Shivratri) ಕಾರ್ಯಕ್ರಮಕ್ಕೆ ಶಂಖ ಊದಿ ಚಾಲನೆ ನೀಡಿ ಮಾತನಾಡಿದ ಅವರು, ನಂದಿ ಬೆಟ್ಟದ ರೀತಿಯಲ್ಲೇ ಹನುಮ ಜನ್ಮಸ್ಥಳವಾದ ಆಂಜನಾದ್ರಿ ಬೆಟ್ಟಕ್ಕೂ ರೋಪ್‌ ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

Maha shivratri 2022: ಶಿವರಾತ್ರಿ ಆಚರಣೆ ಸಂಭ್ರಮ ಎಲ್ಲೆಲ್ಲಿ ಹೇಗೆಲ್ಲ ನಡೆಯುತ್ತೆ ಕಣ್ತುಂಬಿಕೊಳ್ಳೋಣ ಬನ್ನಿ.

ಇದೇವೇಳ ಎತ್ತಿನಹೊಳೆ ಯೋಜನೆ ಅನುಷ್ಟಾನಕ್ಕೆ ಬೇಕಾದ ಭೂ ಸ್ವಾಧೀನಕ್ಕೆ ಅನುದಾನ ಸೇರಿದಂತೆ ಇರುವ ಎಲ್ಲಾ ಅಡೆತಡೆಗಳನ್ನು ನಿಭಾರಿಸಿ ಎತ್ತಿನಹೊಳೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆಯೆಂದು ಮುಖ್ಯಮಂತ್ರಿ ತಿಳಿಸಿದರು. 2010ರಲ್ಲಿ ಎತ್ತಿನಹೊಳೆ ಎಲ್ಲಿದೆ ಎಂಬುದೇ ಬಹಳಷ್ಟುಜನರಿಗೆ ಗೊತ್ತಿರಲಿಲ್ಲ. ನಾನು ಕೋಲಾರಕ್ಕೆ ಒಮ್ಮೆ ಭೇಟಿ ಕೊಟ್ಟಾಗ ಅಲ್ಲಿನ ಜನರು ಪ್ಲೋರೈಡ್‌ನಿಂದ ಸಂಕಷ್ಟಕ್ಕೀಡಾಗಿದ್ದನ್ನು ನೋಡಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಮುಂದಾದೆವು ಎಂದರು.

ಮೂರು ವರ್ಷಗಳ ಹಿಂದೆಯೆ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡ ಈ ಭಾಗಕ್ಕೆ ನೀರು ಹರಿಯಬೇಕಿತ್ತು. ಆದರೆ ಇಚ್ಚಾಶಕ್ತಿ ಕೊರತೆಯ ಕಾರಣಕ್ಕೆ ಯೋಜನೆ ವಿಳಂಬ ಆಗಿರಬಹುದು. ಆದರೆ ನಾನೇ ಯೋಜನೆಗೆ ಅಡ್ಡಿ ಇರುವ ಎಲ್ಲಾವನ್ನು ನಿವಾರಿಸಿ ಯೋಜನೆ ಅನುಷ್ಟಾನಕ್ಕೆ ಬೇಕಾದ ಭೂ ಸ್ವಾಧೀನಕ್ಕೂ ಬೇಕಾದ ಹಣ ಕೊಟ್ಟು ಈ ಭಾಗಕ್ಕೆ ಶೀಘ್ರದಲ್ಲಿ ಯೋಜನೆ ಜಾರಿಗೊಳಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಆ ಮೂಲಕ ಜಿಲ್ಲೆಯಲ್ಲಿ ಹರಿಯುವ ಪಂಚ ನದಿಗಳಾದ ಆರ್ಕಾವತಿ, ಪೆನ್ನಾರ್‌, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಪಾಲಾರ್‌ ನದಿಗಳನ್ನು ಪುನಶ್ಚೇತನಗೊಳಿಸಲಾಗುವುದೆಂದರು.

ಸಿರಿಗೆರೆ ಮಠದ ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ, ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಆಶ್ರಮದ ಸದ್ಗುರು ಶ್ರೀ ಮಧುಸೂದನ್‌ ಸಾಯಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಪಾಲ ಗೆಹ್ಲೋಟ್‌, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಸಚಿವರಾದ ಡಾ.ಸುಧಾಕರ್‌, ಎಂಟಿಬಿ ನಗರಾಜ…, ಭೈರತಿ ಬಸವರಾಜ… ಇದ್ದರು.

ಮೊಳಗಿದ ಶಂಖನಾದ, ರುದ್ರ ಮಂತ್ರ ಪಠಣ:  ಶಿವೋತ್ಸವ ಉದ್ಘಾಟನೆ ವೇಳೆ ನೆರೆದಿದ್ದ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಸಚಿವರು ಶಂಖ ಊದಿ ಶಿವೋತ್ಸವಕ್ಕೆ ಆದ್ದೂರಿ ಚಾಲನೆ ನೀಡಿದರು. ಈ ವೇಳೆ ಮುಖ್ಯ ವೇದಿಕೆಯಲ್ಲಿ ನೆರದಿದ್ದ ವೇದ ಪಂಡಿತರು ಶಿವರಾತ್ರಿ ದಿನ ಲೋಕ ಕಲ್ಯಾಣಾರ್ಥವಾಗಿ ರುದ್ರ ಮಂತ್ರಗಳನ್ನು ಪಠಿಸಿದರು. ಅಲ್ಲದೇ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಲಾಯಿತು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ