ಕೆಲವು ವೈದ್ಯರು ನಗರಕ್ಕೆ ಮಾತ್ರ ಸೀಮಿತವಾದ ಹಿನ್ನೆಲೆಯಲ್ಲಿ ಈ ಆದೇಶಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಉತ್ತರಕನ್ನಡ ಜಿಲ್ಲೆಗೆ ಮಾತ್ರ ಸರ್ಕಾರದ ಈ ಆದೇಶ ಮಾರಕವಾಗುವ ಸಾಧ್ಯತೆ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ವೈದ್ಯರ ಕೊರತೆಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನ ಎದುರಿಸ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಖಾಸಗಿ ಆಸ್ಪತ್ರೆಗಳಿಲ್ಲದೇ ಇರೋದ್ರಿಂದ ಸರ್ಕಾರಿ ಆಸ್ಪತ್ರೆಯನ್ನೇ ಜನರು ಅವಲಂಭಿಸಿದ್ದಾರೆ.
ಉತ್ತರಕನ್ನಡ(ಅ.04): ರಾಜ್ಯ ಆರೋಗ್ಯ ಇಲಾಖೆಯಲ್ಲಿ ಬದಲಾವಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ವರ್ಗಾವಣೆಗೆ ಸರ್ಕಾರ ಮುಂದಾಗಿದೆ.
ಕೆಲವು ವೈದ್ಯರು ನಗರಕ್ಕೆ ಮಾತ್ರ ಸೀಮಿತವಾದ ಹಿನ್ನೆಲೆಯಲ್ಲಿ ಈ ಆದೇಶಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಉತ್ತರಕನ್ನಡ ಜಿಲ್ಲೆಗೆ ಮಾತ್ರ ಸರ್ಕಾರದ ಈ ಆದೇಶ ಮಾರಕವಾಗುವ ಸಾಧ್ಯತೆ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ವೈದ್ಯರ ಕೊರತೆಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನ ಎದುರಿಸ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಖಾಸಗಿ ಆಸ್ಪತ್ರೆಗಳಿಲ್ಲದೇ ಇರೋದ್ರಿಂದ ಸರ್ಕಾರಿ ಆಸ್ಪತ್ರೆಯನ್ನೇ ಜನರು ಅವಲಂಭಿಸಿದ್ದಾರೆ.
undefined
ಅಕ್ರಮ ಮರಳು ಸಾಗಾಟ ಮಾಡೋರಿಗೆ ದಂಡ ಹಾಕಿದ ಅಧಿಕಾರಿಗೆ ಕ್ಲಾಸ್: ಎಂಎಲ್‌ಗೆ ಮಹಿಳಾ ಆಫೀಸರ್ ತಿರುಗೇಟು
ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳಿದ್ರೂ ವೈದ್ಯರಾಗಿ ಸೇವೆ ಸಲ್ಲಿಸಲು ಬರುವವರ ಸಂಖ್ಯೆ ಸಾಕಷ್ಟು ಕಡಿಮೆ ಇದೆ. ಈ ನಡುವೆ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ವರ್ಗಾವಣೆ ಮಾಡಿದ್ರೆ ಸಂಕಷ್ಟ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ.
ಜಿಲ್ಲೆಗೆ ಹೊಸದಾಗಿ ಬಂದು ಸೇವೆ ಸಲ್ಲಿಸುತ್ತಾರೋ..ಇಲ್ವೊ...? ಉತ್ತಮ ಸೇವೆ ನೀಡ್ತಾರೋ..ಇಲ್ವೋ ಎಂಬ ಆತಂಕದಲ್ಲಿದ್ದಾರೆ ಜನರು. ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯ ಜನರಿಗೆ ಸರ್ಕಾರಿ ಆಸ್ಪತ್ರೆಗಳೇ ಆಧಾರವಾಗಿವೆ. ಜಿಲ್ಲೆಯ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರ ಕೊರತೆಯಿದ್ದು, ಕೆಲವು ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡುವ ವೈದ್ಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಸದ್ಯ ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸ್ತಿರುವ ವೈದ್ಯರ ಪಟ್ಟಿ ಪಡೆದು ವರ್ಗಾವಣೆಗೆ ಮುಂದಾಗಿದೆ ಸರಕಾರ. ಈ ಹಿನ್ನೆಲೆ ವರ್ಗಾವಣೆ ಆಗಿ ಬೇರೆ ಕಡೆ ಹೋಗಲು ಸಿದ್ಧರಾಗಿದ್ದಾರೆ ಹಲವು ವರ್ಷಗಳಿಂದ ಸೇವೆ ಸಲ್ಲಿಸ್ತಿರುವ ವೈದ್ಯರು. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಇತರ ಜಿಲ್ಲೆಯಿಂದ ಆಗಮಿಸಬೇಕಾಗಿರುವ ವೈದ್ಯರು ಹಿಂದೇಟು ಹಾಕ್ತಿದ್ದಾರೆ.
ಬಿಜೆಪಿ ನಾಯಕರ ಮಾತಿಗೆ ನೊಂದು ಸಿಎಂ ಪತ್ನಿ 14 ಸೈಟ್ ಹಿಂದಿರುಗಿಸಿದ್ದಾರೆ: ಸಚಿವ ಮಂಕಾಳು ವೈದ್ಯ
ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದ್ರೂ ಯಾವ ಸರಕಾರವೂ ಆಸ್ಪತ್ರೆ ನಿರ್ಮಿಸಿಲ್ಲ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರದಲ್ಲಿ ಚಕಾರವೂ ಎತ್ತುತ್ತಿಲ್ಲ. ಜಿಲ್ಲೆಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಜಿಲ್ಲೆಯ ವೈದ್ಯರ ವರ್ಗಾವಣೆ ಪ್ರಕ್ರಿಯೆ ಕೈ ಬಿಡಲು ಶಾಸಕರು ಸರಕಾರಕ್ಕೆ ಒತ್ತಾಯಿಸಲಿ ಎಂದು ಜನರ ಆಗ್ರಹವಾಗಿದೆ.
ಅಲ್ಲದೇ, ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸರಕಾರದ ಮುಂದೆ ಬೇಡಿಕೆಯಿಡಲಿ ಎಂದು ಜನರು ಹಾಗೂ ರಾಜಕೀಯ ಮುಖಂಡರು ಒತ್ತಾಯಿಸಿದ್ದಾರೆ.