ಹಾಸನ (ಮೇ.20): ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಸಮೀಪ ಮಂಗಳವಾರ ರಾತ್ರಿ ಒಂಟಿಸಲಗವೊಂದು ಬೆಂಗಳೂರು-ಕಾರವಾರ ರೈಲಿಗೆ ಸಿಲುಕಿ ಸಾವನ್ನಪ್ಪಿದೆ.
ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದು, ಸುಮಾರು 5 ಮೀ.ನಷ್ಟುದೂರ ಕಾಡಾನೆಯನ್ನು ಹಳಿ ಮೇಲೆ ಎಳೆದುಕೊಂಡು ಹೋಗಿದೆ. ತೀವ್ರವಾಗಿ ಗಾಯಗೊಂಡ ಒಂಟಿಸಲಗ ಮೃತಪಟ್ಟಿದೆ.
ಆನೆ ದಾಳಿ: ಅರಣ್ಯ ರಕ್ಷಕ ಸೇರಿ ಇಬ್ಬರ ಸಾವು
ಘಟನೆ ನಂತರ ಸುಮಾರು ಎರಡು ಗಂಟೆಗಳ ಕಾಲ ರೈಲು ಘಟನಾ ಸ್ಥಳದಲ್ಲೇ ನಿಂತಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಜೆಸಿಬಿ ಮೂಲಕ ಕಾಡಾನೆಯನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್ .
ಪ್ರಾಣಿಗಳು ವಾಹನಗಳಿಗೆ ಸಿಲುಕಿ ಮೃತಪಡುವ ಘಟನೆಗಳು ಅನೇಕ ನಡೆಯುತ್ತಲೇ ಇದ್ದು, ರಾತ್ರಿ ಸಂಚಾರದ ವೇಳೆಯೇ ಹೆಚ್ಚು ಇಂತಹ ದುರಂತಗಳಾಗುತ್ತಿದೆ.