ಕೊಪ್ಪಳ (ಮೇ.20): ಸೆಮಿಲಾಕ್‌ಡೌನ್ ವೇಳೆ ಯಾರಿಗೂ ಅನುಮಾನ ಬಾರದ ಹಾಗೆ ಸರ್ಕಾರಿ ವಾಹನದಲ್ಲಿ ಮಾವನ ಮನಗೆ ಹೋಗಬೇಕೆಂಬ ನವ ವಿವಾಹಿತರ ಪ್ರಯತ್ನಕ್ಕೆ ಪೊಲೀಸರು ತಣ್ಣೀರೆರಚಿರುವ ಘಟನೆ ಕೊಪ್ಪಳ ಜಿಲ್ಲೆಯಿಂದ ವರದಿಯಾಗಿದೆ.
ಮೇ 14ರಂದು ವಿವಾಹವಾಗಿದ್ದ ಹನಕುಂಟಿ ಗ್ರಾಮದ ಬಸವರಾಜ ಹಾಗೂ ಮಾರುತಿ ಎಂಬವರು ಬುಧವಾರ ತಮ್ಮ ಪತ್ನಿಯರೊಂದಿಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪುರಕ್ಕೆ ಮಾವನ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಕಾರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೃಷಿ ಇಲಾಖೆಗೆ ಬಾಡಿಗೆ ಪಡೆದಿದ್ದ ವಾಹನವಾಗಿತ್ತು.
'ಲಾಕ್ ಡೌನ್ ಇನ್ನೊಂದು ವಾರ ಮುಂದುರೆಸಬೇಕಿದೆ' .
ಆದರೆ ಕಾರಿನಲ್ಲಿ ಎರಡು ಜೋಡಿ ಜೊತೆ ಏಳು ಮಂದಿ ಪ್ರಯಾಣ ಮಾಡುತ್ತಿರುವುದನ್ನು ನೋಡಿ ಅನುಮಾನಗೊಂಡ ಪೊಲೀಸರು ಇಲ್ಲಿನ ಗಡಿಯಾರ ಕಂಬದ ಬಳಿ ನಿಲ್ಲಿಸಿ, ವಿಚಾರಣೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ತಕ್ಷಣ ಕಾರು ಸೀಜ್ ಮಾಡಿ, ಮಾವನ ಮನೆಗೆ ಹೋಗುತ್ತಿದ್ದವರನ್ನು ಮರಳಿ ಮನೆಗೆ ಕಳುಹಿಸಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.