
ಧಾರವಾಡ(ಏ.18): ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಆನೆಯೊಂದು ಕಾಣಿಸಿಕೊಂಡಿದೆ. ವಿವಿಯ ಹಿಂಭಾಗದಲ್ಲಿರುವ ಗೆಸ್ಟ್ ಹೌಸ್ ಬಳಿ ಆನೆಯೊಂದು ಓಡಾಡುತ್ತಿದೆ. ಇಂದು(ಭಾನುವಾರ) ಬೆಳಿಗ್ಗೆಯಿಂದ ಆನೆ ನೋಡಿದ ಜನರು ಆತಂಕಗೊಂಡಿದ್ದಾರೆ.
ಆನೆ ಕಾಡಿನಿಂದ ನಾಡಿಗೆ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಆನೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್
ವಿಶ್ವವಿದ್ಯಾಲಯದ ಆವರಣದಲ್ಲಿ ಆನೆ ಬಂದಿರುವ ಸುದ್ದಿ ಕೇಳಿ ಕ್ವಾಟರ್ಸ್‌ನಿಂದ ಜನರು ಹೊರಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.