ಹುಬ್ಬಳ್ಳಿಯಲ್ಲಿ ಮತ್ತೆ ಈದ್ಗಾ ವಿವಾದ: ಗಣೇಶೋತ್ಸವಕ್ಕೆ ಅವಕಾಶ ಕೋರಿ ಮನವಿ

By Govindaraj S  |  First Published Aug 11, 2022, 9:48 PM IST

ಇಷ್ಟು ದಿನ ತಣ್ಣಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ  ಮುನ್ನಲೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.‌ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ‌ ಬಳಿಕ  ಹುಬ್ಬಳ್ಳಿಯಲ್ಲೂ ವಿವಾದ ಹುಟ್ಟಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕೊರಿ ಗಜಾನನ ಮಂಡಳಿಯೊಂದು ಮನವಿ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ‌. 


ಹುಬ್ಬಳ್ಳಿ (ಆ.11): ಇಷ್ಟು ದಿನ ತಣ್ಣಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ  ಮುನ್ನಲೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.‌ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ‌ ಬಳಿಕ  ಹುಬ್ಬಳ್ಳಿಯಲ್ಲೂ ವಿವಾದ ಹುಟ್ಟಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕೊರಿ ಗಜಾನನ ಮಂಡಳಿಯೊಂದು ಮನವಿ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ‌. 

ಹೌದು! ದಶಕಗಳ‌ ಕಾಲ‌ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು ಹುಬ್ಬಳ್ಳಿಯ ಈದ್ಗಾ ವಿವಾದ. ಹುಬ್ಬಳ್ಳಿಯ ಈದ್ಗಾ ಮೈದಾನದಕ್ಕಾಗಿ 90ರ ದಶಕದಲ್ಲಿ ನಡೆದ ಹೋರಾಟದಿಂದ ಘಟಾನುಘಟಿ ನಾಯಕರಗಳು ಅಧಿಕಾರದ ಗದ್ದುಗೆ ಏರಿದರೆ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿ, ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಂಡರು. ಹುಬ್ಬಳ್ಳಿಯ ಈದ್ಗಾ ಮೈದಾನದ‌ ಹೋರಾಟ ಅಷ್ಟೊಂದು ರಣ ರೋಚಕ ಇತಿಹಾಸವನ್ನು ಹೊಂದಿದೆ. ಆದರೆ ದಶಕದ ಹಿಂದೆಯೇ  ಹುಬ್ಬಳ್ಳಿಯ ಈದ್ಗಾ ವಿವಾದಕ್ಕೆ ಅಂತ್ಯ ಹಾಡಲಾಗಿದೆ. 

Tap to resize

Latest Videos

ಬಿಜೆಪಿಗರ ಢೋಂಗಿತನದ ರಾಷ್ಟ್ರಭಕ್ತಿ ಬೇಡ: ಸಿದ್ದರಾಮಯ್ಯ

ಈಗ ಎಲ್ಲರೂ ಶಾಂತಿ‌‌ ಸಹಬಾಳ್ವೆಯಿಂದ ದಿನ ದೂಡುತ್ತಿದ್ದಾರೆ. ಆದರೆ ಇತ್ತೀಚೆಗೆ ನಡೆದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಳಿಕ, ಮತ್ತೆ ಹುಬ್ಬಳ್ಳಿಯ ಈದ್ಗಾ ವಿವಾದ ಮತ್ತೆ ಮುನ್ನೆಲೆಗೆ ಬರುವ ಲಕ್ಷಣಗಳು ಸ್ಪಷ್ಟವಾಗಿವೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ವೇಳೆ ಗಣೇಶೋತ್ಸವ  ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ರಾಣಿ ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ,ಇದು ಹೊಸದೊಂದು ವಿವಾದ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗಿದೆ. 

ಇನ್ನೂ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿಯೇ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಹೋರಾಟ ನಡೆಸಿರುವ ಹಿಂದೂಗಳು,ಹೊಸದಾಗಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ, ಸಾಲದಕ್ಕೆ ಇದೇ ಆಗಸ್ಟ್ 15ರಂದು ಹುಬ್ಬಳ್ಳಿಯ ಐತಿಹಾಸಿಕ ಮೂರು ಸಾವಿರ ಮಠದಲ್ಲಿ ಸಮಿತಿ ಸಭೆ ಸಹ ಕರೆಯಲಾಗಿದೆ. ನಗರದ ಹಿಂದೂ ಸಮಾಜದ ಗಣ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ‌. 

ಧಾರವಾಡ: ಮೊಹರಂ ಹಬ್ಬದಲ್ಲಿ ಕಾಂಗ್ರೆಸ್ ಮುಖಂಡನ ಸಮ್ಮುಖದಲ್ಲೇ ಹಣ ತೂರಾಟ..!

ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅದರ ಪೂರ್ವ ಸಿದ್ದತೆ, ರೂಪರೇಷೆಗಳನ್ನು ಚೆರ್ಚಿಸಲು ಸಭೆ ಕರೆಯಲಾಗಿದೆ ಅಂತ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ‌ಯ ಸಂಚಾಲಕ ಹನುಮಂತಸಾ ನಿರಂಜನ ಹೇಳಿದ್ದಾರೆ. ಇದು ಸಾಕಷ್ಟು ಪರ ವಿರೋಧ ಚರ್ಚೆಗಳಿಗೆ ಕಾಣರವಾಗುವ ಸಾದ್ಯತೆ ಇದೆ. ಒಟ್ಟಿನಲ್ಲಿ ಇಂತಹದೊಂದು ಚರ್ಚೆ ಮುನ್ನೆಲೆಗೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

click me!