ಅಫ್ಘಾನಿಸ್ತಾನ ಬಳಿಕ ಹಾಸನದಲ್ಲೂ ಭೂಕಂಪನ: ಬೆಚ್ಚಿಬಿದ್ದ ಜನತೆ

By Girish Goudar  |  First Published Jun 23, 2022, 7:58 AM IST

*  ಜನರಲ್ಲಿ ತೀವ್ರ ಆತಂಕ ಮೂಡಿಸಿದ ಭೂಕಂಪನ
*  ಭೂ ಕಂಪನದ ಅನುಭವ ಆಗುತ್ತಲೇ‌ ಮನೆಯಿಂದ ಹೊರಗೆ ಓಡಿ ಬಂದ ಜನರು 
*  ಗಾಢ ನಿದ್ರೆಯಲ್ಲಿದ್ದವರಿಗೆ ಶಾಕ್ ನೀಡಿದ ಲಘು ಕಂಪನ 
 


ಹಾಸನ(ಜೂ.23):  ಜಿಲ್ಲೆಯ ಅರಕಲಗೂಡು ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು(ಗುರುವಾರ) ಭೂಮಿ ಕಂಪಿಸಿದ ಅನುಭವವಾಗಿದೆ. ಗಾಢ ನಿದ್ರೆಯಲ್ಲಿದ್ದವರಿಗೆ ಲಘು ಕಂಪನ ಶಾಕ್ ನೀಡಿದೆ. ದೊಡ್ಡ ರೀತಿಯ ಶಬ್ಧ ಬಂದು ಬಳಿಕ 4.38 ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.

ಅರಕಲಗೂಡು ತಾಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ, ಕಾರಳ್ಳಿ ಗ್ರಾಮಗಳು ಹಾಗೂ ಹೊಳೆನರಸೀಪುರ ತಾಲೂಕಿನಲ್ಲೂ ಭೂಮಿ ಕಂಪಿಸಿದೆ. ಅರಕಲಗೂಡು ಪಟ್ಟಣದ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ, ಹೊಳೆನರಸೀಪುರದ ಅರಕಲಗೂಡು ರಸ್ತೆಯ ಬಡಾವಣೆಯಲ್ಲಿ ಭೂಮಿ ನಡುಗಿದೆ.

Tap to resize

Latest Videos

ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ, 950 ಜನರ ಸಾವು, ಸರ್ಕಾರದ ಹೇಳಿಕೆ!

ಭೂ ಕಂಪನದ ಅನುಭವ ಆಗುತ್ತಲೇ‌ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಿನ್ನೆಯಷ್ಟೇ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪನದ ಬಳಿಕ ಇದೀಗ ಹಾಸನ ಜಿಲ್ಲೆಯಲ್ಲೂ ಭೂಕಂಪನದ ಭೀತಿ ಹುಟ್ಟಿಸಿದೆ.

click me!