ಶಿವಮೊಗ್ಗ, ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ಕಾರಣ ರೈಲ್ವೆ ಕ್ರಶರ್ ಸ್ಫೋಟ!

By Suvarna News  |  First Published Jan 21, 2021, 11:12 PM IST

ಶಿವಮೊಗ್ಗ-ಚಿಕ್ಕಮಗಳೂರಿನಲ್ಲಿ ಭೂಕಂಪನ/ ಭಾರೀ ಶಬ್ದ ಕೇಳಿ ಮನೆಯಿಂದ ಹೊರಕ್ಕೆ ಓಡಿ  ಬಂದ ಜನ/ ಭದ್ರಾವತಿಯಲ್ಲಿಯೂ ಭೂಕಂಪನ ಶಬ್ಧ/ ಆದರೆ ಶಬ್ದದ ಮೂಲ ರೈಲ್ವೆ ಕ್ರಶರ್ ಸ್ಫೋಟ


ಶಿವಮೊಗ್ಗ(ಜ. 21) ಶಿವಮೊಗ್ಗ, ಭದ್ರಾವತಿ ಮತ್ತು ಚಿಕ್ಕಮಗಳೂರಿನಲ್ಲಿ ಗುರುವಾರ ರಾತ್ರಿ ಲಘು ಭೂಕಂಪನವಾಗಿದೆ. ದೊಡ್ಡ ಶಬ್ದ ಕೇಳಿಬಂದಿದ್ದು ಆತಂಕದಿಂದ ಜನ ಹೊರಗೆ ಓಡಿ ಬಂದಿದ್ದಾರೆ.

 5 ಸೆಂಕೆಡುಗಳ ಕಾಲ ಭಾರಿ ಶಬ್ದ ಕೇಳಿದೆ. ಮೊದಲು ಕಡಿಮೆ ಶಬ್ದ ಕೇಳಿ ಬಂದ ಬಳಿಕ ಪ್ರಮಾಣ ಹೆಚ್ಚಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಭದ್ರಾವತಿ  ನಗರಸಭೆ ವ್ಯಾಪ್ತಿಯ ಸಿದ್ದಾಪುರ ಮತ್ತು ಜನ್ನಾಪುರ  ಭಾಗದಲ್ಲಿ  ರಾತ್ರಿ ಸುಮಾರು 10.30ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.   

Tap to resize

Latest Videos

ನೋಡ ನೋಡುತ್ತಿದ್ದಂತೆ ಬಾಯಿ ತೆರೆದ ಭೂಮಿ ಎಲ್ಲವನ್ನು ನುಂಗಿತು

 ಭಯ ಭೀತರಾದ ಜನರು ಮನೆಗಳಿಂದ ಹೊರ ಬಂದು ಭೂಮಿ ಕಂಪನದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಆದರೆ ಹುಣಸೋಡು ರೈಲ್ವೆ ಕ್ರಶರ್ ನಲ್ಲಿ ಬ್ಲಾಸ್ಟ್ ನಡೆದಿದ್ದು ಐವರು  ಬಿಹಾರಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರೀ ಶಬ್ದಕ್ಕೆ ಇದೇ ಮೂಲ ಎಂದು ಹೇಳಲಾಗುತ್ತಿದ್ದು ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸ್ಟೋಟದ ಶಬ್ದ ಕೇಳಿದ್ದು ಜಿಲೆಟಿನ್ ಕಾರಣ ಇರಬಹುದು ಎಂದು  ಹೇಳಲಾಗಿದೆ. 

click me!