'ಯಾರಪ್ಪಂದು ಅಲ್ಲ ಬೆಳಗಾವಿ ನಮ್ಮದು' ಎಂದು ಶಿವಸೇನೆ ಮರಾಠಿಯಲ್ಲಿ ಹೇಳುವ ಮೂಲಕ ಶಿವಸೇನೆ ಡರ ಉದ್ಧಟತನ| ಕರ್ನಾಟಕ ರಾಜ್ಯಕ್ಕೆ ಎಂಟ್ರಿಯಾದ್ರೇ ಲಾಠಿ ಜಾರ್ಜ್ ಮಾಡುವುದಾಗಿ ಶಿವಸೇನೆ ಪುಂಡರಿಗೆ ಎಚ್ಚರಿಕೆ ನೀಡಿದ ಪೊಲೀಸರು|
ಬೆಳಗಾವಿ(ಜ.21): ಒಂದು ಕಡೆ ಗಡಿಯಲ್ಲಿ ಶಿವಸೇನೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ನಮ್ಮ ನೆಲದಲ್ಲಿಯೇ ಇದ್ದ ಎಂಇಎಸ್ ಪುಂಡರು ಕಿರಿಕ್ ತೆಗೆಯುತ್ತಿದ್ದಾರೆ. ಗಡಿ ಭಾಗದ ಶಿನ್ನೋಳ್ಳಿ ಗ್ರಾಮದಲ್ಲಿ ಕನ್ನಡ ಧ್ವಜಸ್ತಂಭ ತೆರವುಗೊಳಿಸುವಂತೆ ಒತ್ತಾಯಿಸಿದ ನಾಡದ್ರೋಹಿ ಎಂಇಎಸ್ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ.
ಡಿಸಿ ಎಂಜಿ ಹಿರೇಮಠ ಅವರನ್ನ ಭೇಟಿ ಮಾಡಿದ ಶಿನ್ನೋಳ್ಳಿ ಗ್ರಾಮದಲ್ಲಿರುವ ಧ್ವಜಸ್ತಂಭವನ್ನ ತೆರವು ಮಾಡಿ ಇಲ್ಲ ಭಗವಾನ್ ಧ್ವಜ ಸ್ಥಾಪಿಸಲು ಅನುಮತಿ ನೀಡಿ ಎಂದು ಉದ್ಧಟತನ ಪ್ರದರ್ಶನ ಮಾಡುವ ಮೂಲಕ ಕನ್ನಡಿಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
undefined
ಇನ್ನು ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡರೂ ತಮ್ಮ ಪುಂಡಾಟಿಕೆ ಮರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಶಿನ್ನೋಳ್ಳಿ ಚೆಕ್ ಪೋಸ್ಟ್ ಬಳಿ ಹೆಚ್ಚಿದ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸ್ಥಳದಲ್ಲಿ ಎರಡು ಕೆ.ಎಸ್.ಆರ್.ಪಿ ತುಕಡಿ ನಿಯೋಜನೆಯನ್ನ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಬೆಳಗಾವಿ ಪೊಲೀಸರ ಹೈ ಅಲರ್ಟ್ ಅಗಿದ್ದಾರೆ. ಗಡಿ ಭಾಗದಲ್ಲಿ ಬೆಳಗಾವಿ ಪೊಲೀಸರ ಮೇಲೆ ಶಿವಸೇನೆ ದರ್ಪ ತೋರುತ್ತಿದ್ದರೂ ಸಹ ಮಹಾರಾಷ್ಟ್ರ ಪೊಲೀಸರು ಸುಮ್ಮನೆ ನಿಂತಿದ್ದಾರೆ. ಕರ್ನಾಟಕ ಸರ್ಕಾರದ ವಿರುದ್ಧ ಶಿವಸೇನೆ ಪುಂಡರು ಧಿಕ್ಕಾರ ಕೂಗುವ ಮೂಲಕ ಉದ್ಧಟನ ಮೆರೆದಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು: ಶಿವಸೇನೆ ಬಳಿಕ ಮಹಾ ಕಾಂಗ್ರೆಸ್ ಕ್ಯಾತೆ!
ಈ ಸಂದರ್ಭದಲ್ಲಿ ತಡೆಯಲು ಬಂದ ಬೆಳಗಾವಿ ಗ್ರಾಮೀಣ ಎಸಿಪಿ ಗಣಪತಿ ಗುಡಾಜ್ ಶಿವಸೇನೆ ನಾಯಕರು ತಳ್ಳಿ ನೂಕಾಡಿದ್ದಾರೆ. ಏಕವಚನದಲ್ಲಿ ಪೊಲೀಸರಿಗೆ ಶಿವಸೇನೆ ಪುಂಡರು ನಿಂದನೆ ಮಾಡಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಎಂಟ್ರಿಯಾದ್ರೇ ಲಾಠಿ ಜಾರ್ಜ್ ಮಾಡುವುದಾಗಿ ಪುಂಡರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
'ಯಾರಪ್ಪಂದು ಅಲ್ಲ ಬೆಳಗಾವಿ ನಮ್ಮದು' ಎಂದು ಶಿವಸೇನೆ ಮರಾಠಿಯಲ್ಲಿ ಹೇಳುವ ಮೂಲಕ ಪುಂಡರು ಉದ್ಧಟತನ ಮೆರೆದಿದ್ದಾರೆ. ಪೊಲೀಸರ ಜೊತೆ ಮಾತಿನ ಚಕಮಕಿಯ ನಂತರ ಶಿವಸೇನೆ ಪುಂಡರು ರಾಜ್ಯದ ಗಡಿಯಿಂದ ಕಾಲ್ಕಿತ್ತಿದ್ದಾರೆ. ಮಹಾರಾಷ್ಟ್ರ ಪ್ರದೇಶದ ಶಿನ್ನೋಳ್ಳಿ ಗ್ರಾಮದತ್ತ ಶಿವಸೇನೆ ಪುಂಡರು ತೆರಳಿದ್ದಾರೆ. ಶಿನ್ನೋಳ್ಳಿ ಗ್ರಾಮದಲ್ಲಿ ಕುಳಿತು ಚರ್ಚೆ ಮಾಡಿ ಮುಂದಿನ ನಿರ್ಧಾರದವನ್ನ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.