ಮಂಗಳೂರಿನ ಬಸ್ಸಲ್ಲಿ ಎಲ್ಲರೆದುರೇ ಯುವತಿ ಜೊತೆ ಕಾಮುಕನ ಅಸಭ್ಯ ನಡೆ

Suvarna News   | Asianet News
Published : Jan 21, 2021, 03:51 PM ISTUpdated : Jan 21, 2021, 04:35 PM IST
ಮಂಗಳೂರಿನ  ಬಸ್ಸಲ್ಲಿ ಎಲ್ಲರೆದುರೇ ಯುವತಿ ಜೊತೆ ಕಾಮುಕನ ಅಸಭ್ಯ ನಡೆ

ಸಾರಾಂಶ

ಬಸ್ಸಿನಲ್ಲಿ ಎಲ್ಲರೆದುರೇ ಕಾಮುಕನೋರ್ವ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈತನ ಕೃತ್ಯ ವೈರಲ್ ಆಗಿದೆ. 

ಮಂಗಳೂರು (ಜ.21): ಬಸ್ ನಲ್ಲಿ ಹಾಡಹಗಲೇ ವ್ಯಕ್ತಿಯೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.  

ದೇರಳಕಟ್ಟೆ-ಮಂಗಳೂರು ಖಾಸಗಿ ಬಸ್ ನಲ್ಲಿ ಕಿರುಕುಳ ನೀಡಲಾಗಿದ್ದು,  ಮಂಗಳೂರು ಪೊಲೀಸರು ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. 

ಯುವತಿ ಕಿರುಚಾಡಿದರೂ ಯಾರೂ ಕೂಡ ಆಕೆಯ ಸಹಾಯಕ್ಕೆ ಬಾರದೆ ಇದ್ದಾಗ ಆಕೆ ಆತನ ಫೋಟೊ ತೆಗೆದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ.  ಕಾಸರಗೋಡಿನ ಕುಂಬ್ಳೆ ನಿವಾಸಿ ಹುಸೈನ್ (41) ಎಂಬಾತ ಯುವತಿಗೆ ಕಿರುಕುಳ ನೀಡಿದ್ದು, ಬಸ್‌ನಲ್ಲಿಯೇ ಆತನ ಫೋಟೊ ವೈರಲ್ ಮಾಡಿದ್ದಾಳೆ. 

ಬೆತ್ತಲೆ ಫೋಟೋ ವೈರಲ್‌ ಬೆದರಿಕೆ: ಸ್ನೇಹಿತರ ಕಾಟಕ್ಕೆ ಕಂಗಾಲಾದ ಯುವತಿ..! .

ಬಳಿಕ ಈ ಬಗ್ಗೆ ಮಂಗಳೂರು ಮಹಿಳಾ ಠಾಣೆ ಪೊಲೀಸರು ದೂರು ಪಡೆದುಕೊಂಡಿದ್ದು, ಮಂಗಳೂರು ಕಮಿಷನರ್ ಸುದ್ದಿಗೋಷ್ಠೀ ನಡೆಸಿದರು. ಸಂತ್ರಸ್ತೆ ಜೊತೆ ಸುದ್ದಿಗೋಷ್ಠಿ ನಡೆಸಿದ್ದು ಇದೇ ವೇಳೆ ಕಮಿಷನರ್ ಶಶಿಕುಮಾರ್ ಎದುರೇ ಕಿರುಕುಳ ನೀಡಿದವಗೆ ಯುವತಿ ಕಪಾಳ ಮೋಕ್ಷ ಮಾಡಿದ್ದಾಳೆ.  

"

ಇದೀಗ ಆತನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. 

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!