ನಕಲಿ ಗನ್ ಜೊತೆಗೆ ಐಸಿಐಸಿಐ ಬ್ಯಾಂಕ್‌ಗೆ ನುಗ್ಗಿದ ಪಾನಮತ್ತ ಯುವಕ| ಕಲಬುರಗಿ ನಗರದಲ್ಲಿ ನಡೆದ ಘಟನೆ| ನಶೆಯಲ್ಲಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಚೇಂಬರ್ ಹೊಕ್ಕಿದ್ದ ಆರೋಪಿ| ಯುವಕನ ವರ್ತನೆಗೆ ಬೆಚ್ಚಿಬಿದ್ದ ಮ್ಯಾನೇಜರ್|
ಕಲಬುರಗಿ(ಆ.17): ನಕಲಿ ಗನ್ ಜೊತೆಗೆ ನಗರದ ನೆಹರು ಗಂಜ್‌ನಲ್ಲಿರುವ ಐಸಿಐಸಿಐ ಬ್ಯಾಂಕ್‌ಗೆ ನುಗ್ಗಿದ ಪಾನಮತ್ತ ಯುವಕನೊಬ್ಬ ಪೊಲೀಸ್ ಅತಿಥಿಯಾಗಿರುವ ಪ್ರಸಂಗ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಮುಜಗುರಿ ಬಡಾವಣೆ ನಿವಾಸಿ ಸುಲ್ತಾನ್ ಎಂಬ ಯುವಕನೇ ಈ ಅವಾಂತರ ಹುಟ್ಟು ಹಾಕಿದ್ದಾನೆಂದು ಗೊತ್ತಾಗಿದೆ. ಈತ ಪಾನಮತ್ತನಾಗಿದ್ದ, ಅದೇ ನಶೆಯಲ್ಲಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಚೇಂಬರ್ ಹೊಕ್ಕಿದ್ದ ಆರೋಪಿ, ಚೆಂಬರ್ ಪ್ರವೇಶದ ನಂತರ ಕುರ್ಚಿ ರಿಪೇರಿ ಮಾಡುವವನೆಂದು ಹೇಳುತ್ತ ಶಂಕೆಯಿಂದ ಅಲ್ಲೇ ಠಲಾಯಿಸಿದಾಗ ತಕ್ಷಣ ಈ ಯುವಕನ ವರ್ತನೆಯಿಂದ ಬೆಚ್ಚಿಬಿದ್ದಿದ್ದ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ದಾವಿಸಿದ ಪೊಲೀಸರು ಪಾನಮತ್ತ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
undefined
ದೇಶದ ಅಖಂಡತೆಗೆ ಬದ್ಧರಾಗಿರಬೇಕು, ವೋಟ್ ಬ್ಯಾಂಕ್ ರಾಜಕಾರಣಕ್ಕಲ್ಲ: ಡಿಕೆಶಿಗೆ ಕಾರಜೋಳ ತಿರುಗೇಟು
ಬ್ಯಾಂಕಿನ ಯಾವುದೇ ಕುರ್ಚಿ ರಿಪೇರಿಗೆ ತಾವು ಸೂಚಿಸಿಲ್ಲ, ಯಾರನ್ನು ಕೆರದಿಲ್ಲ, ಈ ಯುವಕ ಆಗಂತುಕನೆಂದು ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿಗೆ ಧಾವಿಸಿ ಬಂದ ಪೊಲೀಸರು ಸ್ಥಳದಲ್ಲಿ ನಶೆಯಲ್ಲಿದ್ದ ಯುವಕನಿಗೆ ಲಾಠಿ ರುಚಿ ತೋರಿಸಿದಾಗ ಆತ ತಾನು ನಶೆಯಲ್ಲಿ ಬ್ಯಾಂಕ್‌ಗೆ ನುಗ್ಗಿದ್ದಾಗಿ ಹೇಳಿದ್ದಾನಲ್ಲದೆ ಕುಡಿದ ಅಮಲು ಹೆಚ್ಚಾಗಿದ್ದರಿಂದ ಈ ಅವಾಂತರ ಸಂಭವಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಚೌಕ್ ಪೊಲೀಸ್ ಠಾಣೆ ಪೊಲೀಸರು ಈ ಯುವಕನಿಂದ ತಪ್ಪಾಗಿರುವ ಮುಚ್ಚಳಿಗೆ ಪತ್ರ ಬರೆಯಿಸಿಕೊಂಡು ಬಿಡುಗಡೆ ಮಾಡಿದ್ದಾರೆ.