
ಕಲಬುರಗಿ(ಆ.17): ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯ ಹಿಂದೆ ಯಾವುದೇ ರಾಜಕೀಯ ಪಿತೂರಿ ಇಲ್ಲ. ಒಂದು ದೊಡ್ಡ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರು ಸುಳ್ಳು ಆರೋಪ ಮಾಡಬಾರದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅಖಂಡತೆ, ಏಕತೆ, ಭದ್ರತೆಗೆ ಧಕ್ಕೆ ತರುವವರನ್ನು ಮಟ್ಟ ಹಾಕುವವರೆಗೂ ಬಿಡಲ್ಲ. ಬೆಂಗಳೂರಿನ ಗಲಭೆ ಘಟನೆಯನ್ನು ಪೊಲೀಸ್ ಇಲಾಖೆ ಸಮರ್ಥವಾಗಿ ನಿಭಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿಕೆಶಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
'ಬೆಂಗಳೂರು ಗಲಭೆಯನ್ನೇಕೆ ರಾಹುಲ್ ಗಾಂಧಿ ಖಂಡಿಸಿಲ್ಲ? ಧೈರ್ಯವಿಲ್ಲವೇ?'
ದೇಶದ ಅಖಂಡತೆ, ಏಕೆತೆಗೆ ಡಿಕೆಶಿ ಬದ್ಧರಾಗಿರಬೇಕು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬದ್ಧರಾಗಬೇಡಿ. ಡಿಜೆ ಹಳ್ಳಿ ಪ್ರಕರಣದಲ್ಲಿ ಬಿಜೆಪಿ ಯಾವುದೇ ತರಹದ ರಾಜಕೀಯ ಮಾಡುವ ಪ್ರಶ್ನೆಯೆ ಇಲ್ಲ. ಯಾರು ದೇಶ ದ್ರೋಹಿಗಳು ಇದ್ದಾರೋ, ದೇಶದ ಅಖಂಡತೆ ಸಮಗ್ರತೆಗೆ ಧಕ್ಕೆ ತರುತ್ತಾರೋ ಅವರನ್ನು ಮಟ್ಟಹಾಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಡಿಕೆಶಿಗೆ ಕಾರಜೋಳ ತಿರುಗೇಟು
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯ ಹಿಂದೆ ಯಾವುದೇ ರಾಜಕೀಯ ಪಿತೂರಿ ಇಲ್ಲ. ಒಂದು ದೊಡ್ಡ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರು ಸುಳ್ಳು ಆರೋಪ ಮಾಡಬಾರದು. ಗಲಭೆ ಘಟನೆಯನ್ನು ಪೊಲೀಸ್ ಇಲಾಖೆ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
"