ಸಚಿವರ ಆಗಮನದ ವಿಚಾರವಾಗಿ ಬಿಜೆಪಿ ಮುಖಂಡರಿಬ್ಬರ ನಡುವೆ ತೀವ್ರ ಜಟಾಪಟಿ ನಡೆದಿದೆ. ಮುಖಂಡರ ನಡುವಿನ ಗುಂಪುಗಾರಿಗೆ ಬಯಲಾಗಿದೆ.
ಹರಿಹರ (ಆ.17): ಅರಣ್ಯ ಸಚಿವ ಆನಂದ್ ಸಿಂಗ್ ರಾಜನಹಳ್ಳಿ ವಾಲ್ಮೀಕಿ ಪೀಠಕ್ಕೆ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಬಿ.ಪಿ.ಹರೀಶ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಧ್ಯೆ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಗಳು, ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲೇ ಮಾತಿನ ಜಟಾಪಟಿ ನಡೆದಿದೆ ಎನ್ನಲಾಗಿದೆ.
ವಾಲ್ಮೀಕಿ ಪೀಠಕ್ಕೆ ಸಚಿವ ಆನಂದ್ ಸಿಂಗ್ ಬರುವ ವಿಚಾರ ನನಗೇಕೆ ತಿಳಿಸಿಲ್ಲವೆಂದು ಮಾಜಿ ಶಾಸಕ ಬಿ.ಪಿ.ಹರೀಶ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್‌ಗೆ ಏರುಧ್ವನಿಯಲ್ಲಿ ಪ್ರಶ್ನಿಸಿದ್ದು, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.
undefined
ಅಖಂಡಗೇ ಟಿಕೆಟ್, ಅನ್ಯರಿಗೆ ಇಲ್ಲ: ಡಿಕೆಶಿ ಸ್ಪಷ್ಟನೆ...
ತಕ್ಷಣವೇ ಮಧ್ಯ ಪ್ರವೇಶಿಸಿದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವ ಆನಂದ್ ಸಿಂಗ್ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಒಟ್ಟಾರೆ, ದಾವಣಗೆರೆ ಜಿಲ್ಲೆಯಲ್ಲಷ್ಟೇ ಅಲ್ಲ, ಹರಿಹರ ತಾಲೂಕು ಬಿಜೆಪಿ ಘಟಕದಲ್ಲೂ ತೆರೆಮರೆಯಲ್ಲಿಯೇ ಇದ್ದ ಗುಂಪುಗಾರಿಕೆ ಶ್ರೀಪೀಠದಲ್ಲೂ ಬಯಲಾಗಿದೆ.
ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಹಠಾತ್ ದೆಹಲಿಗೆ..
ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷರ ಮಧ್ಯೆ ಸಮನ್ವಯತೆ ಕೊರತೆಯೇ ಎಂಬ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ.