ಬೀಳಗಿ: ಮದ್ಯದ ಅಮಲಿನಲ್ಲಿ ಟವರ್‌ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಕುಡುಕ..!

By Kannadaprabha News  |  First Published Jun 5, 2021, 3:42 PM IST

* ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಡೆದ ಘಟನೆ
* ಟವರ್‌ ಹತ್ತಿದ್ದ ವ್ಯಕ್ತಿಯನ್ನ ಕೆಳಗೆ ತರುವಲ್ಲಿ ಹರಸಾಹಸ ಪಟ್ಟ ಗ್ರಾಮಸ್ಥರು 
* 165 ಅಡಿ ಎತ್ತರ ಟವರ್‌ ಏರಿ ವ್ಯಕ್ತಿ ಕುಳಿತಿದ್ದ ವ್ಯಕ್ತಿ
 


ಬೀಳಗಿ(ಜೂ.05):  ಕಳೆದ ಹಲವಾರು ದಿನಗಳಿಂದ ದುಡಿಮೆ ಇಲ್ಲದೇ ಹಣಕಾಸಿನ ತೊಂದರೆಗೆ ಬೇಸತ್ತು ಕುಡಿದ ವ್ಯಕ್ತಿಯೊರ್ವ ಗ್ರಾಮದ ಮೊಬೈಲ್‌ ಟವರ್‌ ಏರಿ ನಾನು ಸಾಯುತ್ತೇನೆ ಎಂದು ಹೇಳಿ ಕೆಲವು ಗಂಟೆಗಳ ಕಾಲ ಆತಂಕ ಸೃಷ್ಟಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಹಣಮಂತ ಹೊಟ್ಟೆನವರ ಆತ್ಮಹತ್ಯೆಗೆ ಯತ್ನಿಸಿದವ. ಶುಕ್ರವಾರ ಮಧ್ಯಾಹ್ನ ಗ್ರಾಮದ ನೀಲಕಂಠೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಟವರ್‌ ಮೇಲೆ ಹತ್ತಿ ಗ್ರಾಮಸ್ಥರನ್ನು ಕೆಲ ಕಾಲ ಚಿಂತಾಗ್ರಸ್ಥರನ್ನಾಗಿ ಮಾಡಿದ್ದಾನೆ. ಇದೇ ಸಮಯದಲ್ಲಿ ಕೆಲ ಗ್ರಾಮಸ್ಥರು ಅಗ್ನಿಶಾಮಕದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಲ್ಲದೇ ಗ್ರಾಮದ ಇಬ್ಬರ ಯುವಕರಾದ ಸೈಯದ್‌ ನಧಾಪ್‌, ಮಲ್ಲಿಕಾರ್ಜುನ ಬಿಲಕೇರಿ ಎಂಬುವವರು ಟವರ್‌ ಹತ್ತಿ ಆತನನ್ನು ಕೆಳಗೆ ತರುವಲ್ಲಿ ಹರಸಾಹಸಪಟ್ಟಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗದೆ ಇದ್ದಾಗ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ವ್ಯಕ್ತಿಯ ಮನವೊಲಿಸಿ ಹಗ್ಗದ ಸಹಾಯದಿಂದ ಟವರ್‌ ಏರಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕೆಳಗೆ ತಂದಿದ್ದಾರೆ.

Latest Videos

undefined

ಬಾಗಲಕೋಟೆ: ಏಷ್ಯಾನೆಟ್ ಸುವರ್ಣನ್ಯೂಸ್ ಇಂಪ್ಯಾಕ್ಟ್‌, ಬಡ ಕುಟುಂಬಕ್ಕೆ ಸಿಕ್ತು ಸರ್ಕಾರದ ನೆರವು

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅಗ್ನಿ ಶಾಮಕ ದಳ ಅಧಿಕಾರಿ, ಈ ಕುರಿತು ಗ್ರಾಮಸ್ಥರು ಕರೆ ಮಾಡಿದ್ದಾರೆ. ನಾವು ಸ್ಥಳಕ್ಕೆ ಬಂದು ನೋಡಿದಾಗ 165 ಅಡಿ ಎತ್ತರ ಟವರ್‌ ಏರಿ ವ್ಯಕ್ತಿ ಕುಳಿತಿದ್ದ. ಹಗ್ಗದ ಸಹಾಯದಿಂದ ಕೆಳಗೆ ತರಲಾಯಿತು. ಆತ ಸಾರಾಯಿ ಕುಡಿದಿದ್ದು ಕಂಡು ಬಂದಿದೆ. ಸದ್ಯಆತನ ಆರೋಗ್ಯ ಸ್ಥಿರವಾಗಿದೆ. ಯಾವುದೆ ಅಪಾಯವಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಗ್ನಿ ಶಾಮಕದಳ ಡಿಎಫ್‌ಒ ಮಲ್ಲಿಕಾರ್ಜುನಪ್ಪ, ಸಿಬ್ಬಂದಿ ಎಚ್‌ ಸಿ ನಿಂಗಾಪೂರ, ಜಿ ಎಚ್‌ ಮಾಗಿ, ರವಿ ಚವ್ಹಾಣ, ಆನಂದ ಗುಂಜಿ, ಸಿಕಂದರ್‌ ಸಾಬ, ಬಿ ಎಸ್‌ ರೊಳ್ಳಿ, ಬೀಳಗಿ ಪೊಲೀಶ್‌ ಅಧಿಕಾರಿ ಹುಡೇದ, ಗ್ರಾಪಂ ಸದಸ್ಯರಾದ ಪ್ರಕಾಶ ಹೆಗ್ಗೂರ, ಗುಂಡಪ್ಪ ಬಾಡಗಂಡಿ, ಪಿಡಿಒ ವಿಮಲಾ ಕಲ್ಮಣಿ, ಆಡಳಿತಾಧಿಕಾರಿ ಎಂ ನಾಗರಾಜ, ಗ್ರಾಮಸ್ಥರಾದ ಶರಣಪ್ಪ ಅಗ್ನಿ ಸೇರಿದಂತೆ ಇತರರು ಇದ್ದರು.
 

click me!