ಚುಡಾಯಿಸಿ ಆಪತ್ತು ತಂದುಕೊಂಡ ವಿದ್ಯಾರ್ಥಿಗಳು, ಹಾಸ್ಟೆಲ್‌ ಗೆ ನುಗ್ಗಿ ಹೊಡೆದ ಕುಡುಕರ ಗ್ಯಾಂಗ್‌!

By Gowthami K  |  First Published Jan 6, 2024, 3:28 PM IST

ಹೊಸವರ್ಷದಂದು ಕುಡುಕರನ್ನು ಚುಡಾಯಿಸಲು ಹೋಗಿ ವಿದ್ಯಾರ್ಥಿಗಳು ಅವಾಂತರ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ಈ ಘಟನೆ ನಡೆದಿದೆ. ಕೋಪಗೊಂಡ ಕುಡುಕರ ಗ್ಯಾಂಗ್‌ ಹಾಸ್ಟೆಲ್‌ ಗೆ ನುಗ್ಗಿ ದಾಂಧಲೆ ನಡೆಸಿದೆ.


ಕಾರವಾರ (ಜ.6): ಹೊಸವರ್ಷದಂದು ಕುಡುಕರನ್ನು ಚುಡಾಯಿಸಲು ಹೋಗಿ ವಿದ್ಯಾರ್ಥಿಗಳು ಅವಾಂತರ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ಈ ಘಟನೆ ನಡೆದಿದೆ. ಅಲ್ಪಸಂಖ್ಯಾತರ ಮೇಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಕುಡುಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿ ನಿಲಯಕ್ಕೆ ಕಿಡಿಗೇಡಿಗಳು ನುಗ್ಗಿ ಹಿಗ್ಗಾಮುಗ್ಗಾ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Tap to resize

Latest Videos

undefined

ತನಿಖೆಗೆ ತೆರಳಿದ್ದಾಗ ಮಾರಣಾಂತಿಕ ಹಲ್ಲೆ ಬಂಗಾಳದಲ್ಲಿ ಇಡಿ ಮೇಲೆಯೇ ದಾಳಿ!

ರಾಡ್ ಮತ್ತಿತರ ಸಾಧನಗಳಿಂದ ಮನಬಂದಂತೆ ಥಳಿಸಿ, ವಿದ್ಯಾರ್ಥಿ ನಿಲಯದ ಒಳಗಿನ ವಸ್ತುಗಳನ್ನು ಪುಡಿ ಮಾಡಿದ್ದಾರೆ. ರೂಮ್‌ ನ ಬಾಗಿಲುಗಳನ್ನು ಒಡೆದು ಹಾಕಿದ್ದಾರೆ. ಈ ಘಟನೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನವೀದ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಆತನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕುಡುಕರ ತಂಡದ ದಾಂಧಲೆ ಹಿನ್ನೆಲೆ ವಿದ್ಯಾರ್ಥಿ ನಿಲಯ ಪಾಲಕ ನಾಗೇಂದ್ರ ಎಂಬವರು ಭಟ್ಕಳ ಶಹರ ಠಾಣೆ ಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಮುಖ ಆರೋಪಿಗಳಾದ ರಾಘವೇಂದ್ರ ಯಾನೆ ಬಾಬು ನಾಯ್ಕ ಮತ್ತು ನಂದನ ಜೈನ್ ಎಂಬಿಬ್ಬರನ್ನು ಬಂಧಿಸಲಾಗಿದೆ.

ಸಿನೆಮಾ ಗೆದ್ದ ಖುಷಿಗೆ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ ನಟ-ನಟಿಯರ ಪಾರ್ಟಿ, ರೆಸ್ಟೋಬಾರ್ ವಿರುದ್ಧ ಎಫ್ಐಆರ್

ಘಟನೆ ಹಿನ್ನೆಲೆ: ಡಿಸೆಂಬರ್ 31 ನಿಲಯದ ವಿದ್ಯಾರ್ಥಿಗಳ ಗುಂಪೊಂದು ಬಾರಿನಲ್ಲಿ ಕುಡುಕರಿಗೆ ಚುಡಾಯಿಸಿದ್ದರು. ಈ ವೇಳೆ ಕುಡುಕರು ಹಾಗೂ ವಿದ್ಯಾರ್ಥಿಗಳ ನಡುವೆ ಬಾರಿನಲ್ಲೇ ಗಲಾಟೆಯಾಗಿತ್ತು. ಅಲ್ಲದೇ, ವಿದ್ಯಾರ್ಥಿ ನಿಲಯದ ಇನ್ನಷ್ಟು ವಿದ್ಯಾರ್ಥಿಗಳು ಕೂಡಾ ಇದನ್ನು ಪ್ರಶ್ನಿಸಲು ಹೋಗಿದ್ದರು. ಇದರಿಂದ ಕೋಪಗೊಂಡ ಕುಡುಕರು ತಮ್ಮ ಸ್ನೇಹಿತರನ್ನೆಲ್ಲಾ ಕರೆಯಿಸಿಕೊಂಡು ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಚುಡಾಯಿಸಿದ ಹಾಗೂ ಗಲಾಟೆ ಮಾಡಿದ ಕೋಪಕ್ಕೆ ಕುಡುಕರು ತಮ್ಮ ಸ್ನೇಹಿತರನ್ನೆಲ್ಲಾ ಕರೆಯಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. 

click me!