ಗುತ್ತಿಗೆ ಅವಧಿ ಮುಕ್ತಾಯವಾದರೂ ಸಹ ಮೈಸೂರು ಮಿನರಲ್ಸ್ ಕಂಪನಿಯವರು ರೈತರ ಭೂಮಿಯನ್ನು ಬಿಟ್ಟುಕೊಡದೆ ತಕರಾರು ಮಾಡುತ್ತಿದ್ದು, ನಮ್ಮ ಜಮೀನನ್ನು ನಮಗೆ ಬಿಡಿಸಿಕೊಡುವಂತೆ ಒತ್ತಾಯಿಸಿ ತಾಲೂಕು ಹುಲ್ಲಹಳ್ಳಿ ಹೋಬಳಿ ಕಾರ್ಯ ಗ್ರಾಮದ ರೈತರು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ನಂಜನಗೂಡು : ಗುತ್ತಿಗೆ ಅವಧಿ ಮುಕ್ತಾಯವಾದರೂ ಸಹ ಮೈಸೂರು ಮಿನರಲ್ಸ್ ಕಂಪನಿಯವರು ರೈತರ ಭೂಮಿಯನ್ನು ಬಿಟ್ಟುಕೊಡದೆ ತಕರಾರು ಮಾಡುತ್ತಿದ್ದು, ನಮ್ಮ ಜಮೀನನ್ನು ನಮಗೆ ಬಿಡಿಸಿಕೊಡುವಂತೆ ಒತ್ತಾಯಿಸಿ ತಾಲೂಕು ಹುಲ್ಲಹಳ್ಳಿ ಹೋಬಳಿ ಕಾರ್ಯ ಗ್ರಾಮದ ರೈತರು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ ಕಾರ್ಯ ಗ್ರಾಮದ ರೈತರಿಗೆ ಸೇರಿದ 80 ಎಕರೆ ಕೃಷಿ ಭೂಮಿಯನ್ನು ಮೈಸೂರು ಮಿನರಲ್ಸ್ ಕಂಪನಿಯವರು ಗಣಿಗಾರಿಕೆಗಾಗಿ 20 ವರ್ಷ ಗುತ್ತಿಗೆ ಪಡೆದಿದ್ದರು. ಆದರೆ ಗುತ್ತಿಗೆ ಅವಧಿ ಮುಗಿದು 20 ವರ್ಷಗಳು ಕಳೆದರೂ ಸಹ ರೈತರ ಭೂಮಿಯನ್ನು ರೈತರಿಗೆ ಹಿಂತಿರುಗಿಸದೆ ಇಲ್ಲ ಸಲ್ಲದ ಸಬೂಬು ಹೇಳುತ್ತಾ ರೈತರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಮಿನರಲ್ಸ್ ಕಂಪನಿ ವಿರುದ್ದ ಪ್ರತಿಭಟನೆ ನಡೆಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳು ಸಹ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನೀವು ಮಧ್ಯೆ ಪ್ರವೇಶಿಸಿ ರೈತರ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.
undefined
ರೈತರ ಮನವಿಗೆ ಸ್ಪಂದಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ರೈತರಿಗೆ ಕೃಷಿ ಭೂಮಿಯನ್ನು ವಾಪಸ್ಸು ಕೊಡಿಸಿಕೊಡಲು ಕ್ರಮವಹಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ರೈತ ದೇಶಕ್ಕೆ ಅನ್ನ ನೀಡುವ ಅನ್ನದಾತ ಇಂತಹ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು, ರೈತರಿಗೆ ಮೋಸ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಖಡಕ್ ನಿರ್ದೇಶನ ನೀಡಿದರು. ಅಧಿಕಾರಿಗಳ ಜೊತೆ ಮತ್ತೊಂದು ಸಭೆ ನಡೆಸಿ ರೈತರ ಭೂಮಿಯನ್ನು ವಾಪಸ್ಸು ಕೊಡಿಸಲು ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದರು.
ಹುಬ್ಬಳ್ಳಿ ತಾಳಗುಪ್ಪ ಮಾರ್ಗಕ್ಕೆ ಗಡಿ ಗುರುತು
ಮುಂಡಗೋಡ (ಅ.13): ಜನರ ಬಹು ನಿರೀಕ್ಷಿತ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯ ಸರ್ವೇ ಕಾರ್ಯ ಚುರುಕುಗೊಂಡಿದ್ದು, ಈಗ ಅಲ್ಲಲ್ಲಿ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ಇದು ಜನರಲ್ಲಿ ಹರ್ಷವನ್ನುಂಟು ಮಾಡಿದರೆ, ರೈತರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಸೃಷ್ಟಿಸಿದೆ.
ಹಲವು ವರ್ಷಗಳ ಬೇಡಿಕೆಯಾದ ತಾಳಗುಪ್ಪ(ಸಾಗರ)-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಸಂಚರಿಸುವ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಸರ್ವೇ ಕೂಡ ಪ್ರಾರಂಭವಾಗಿದೆ. ಅದು ಈಗ ಮುಂಡಗೋಡ ತಾಲೂಕು ಪ್ರವೇಶಿಸಿದೆ. ಗಡಿ ಗುರುತಿಸಿ ಕಲ್ಲು ನಿಲ್ಲಿಸುವ ಕೆಲಸ ಬರದಿಂದ ಸಾಗಿದ್ದು ರೈಲು ಮಾರ್ಗದ ನಿರೀಕ್ಷೆಯಲ್ಲಿದ್ದ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಸದ್ಯ ಮುಂಡಗೋಡ ತಾಲೂಕಿನ ಮಳಗಿ ಭಾಗದ ಕ್ಯಾಗದಿಕೊಪ್ಪ, ಕಲ್ಲಹಕ್ಕಲ, ಧರ್ಮಾ ಕಾಲನಿ, ಮಳಲಗಾಂವ, ಗೊಟಗೊಡಿಕೊಪ್ಪ ಮುಂತಾದ ಭಾಗದಲ್ಲಿ ಈಗಾಗಲೇ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ಪಾಳಾ-ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗಲಿರುವ ರೈಲು ಮಾರ್ಗ ಇದಾಗಿದೆ. ಒಟ್ಟು ಮೂರು ಜಿಲ್ಲೆಗಳಲ್ಲಿ ಅಂದರೆ ಉತ್ತರ ಕನ್ನಡ , ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿ ಈ ರೈಲು ಹಾದುಹೋಗಲಿದೆ.
ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕ ವೃದ್ಧ ದಂಪತಿ ಮೇಲೆ ಯುವಕನಿಂದ ಮೂತ್ರ ವಿಸರ್ಜನೆ
ಬೆಂಗಳೂರ, ಮುಂಬೈ, ಮೈಸೂರು ಅಥವಾ ಮುಂತಾದ ಕಡೆಗೆ ತೆರಳಲು ರೈಲು ಹತ್ತಬೇಕಾದರೆ ಹುಬ್ಬಳ್ಳಿ ಅಥವಾ ಹಾವೇರಿಗೆ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ಇಲ್ಲಿಯ ಜನರಿಗೆ ರೈಲಿನ ಪರಿಚಯವೇ ಇಲ್ಲದಂತಾಗಿದೆ. ಹಾಗಾಗಿ ಈ ಭಾಗದ ಜನರು ಬಸ್ ಹಾಗೂ ಖಾಸಗಿ ವಾಹನ ಅವಲಂಬಿತರಾಗಿದ್ದಾರೆ. ಆದರೆ ಈಗ ಇಲ್ಲಿಯು ರೈಲು ಸಂಚಾರವಾಗಲಿದೆ ಎಂಬ ಕುರುಹುಗಳು ಸಿಗುತ್ತಿದ್ದಂತೆ ಹಲವು ದಿನಗಳ ಕನಸು ನನಸಾಗುವುದು ಸನ್ನಿಹಿತವಾದಂತೆ ಭಾಸವಾಗುತ್ತಿದೆ.
ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾದ ರೈಲ್ವೆ ಯೋಜನೆಗೆ ಪರಿಸರವಾದಿಗಳ ವಿರೋಧದಿಂದ ವಿಳಂಬವಾಗಿದ್ದು, ಹಿಂದಿನ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಯೋಜನೆ ಬಗ್ಗೆ ಇದ್ದ ಕಳಕಳಿ ಹಾಗೂ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿ ಹಣ ಮೀಸಲಿರಿಸಿ ಸರ್ವೇ ಕಾರ್ಯಕ್ಕೂ ಚಾಲನೆ ನೀಡಿದೆ.
ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್!
ರೈಲು ಮಾರ್ಗ ಸರ್ವೇ ಪ್ರಕಾರ ಬಹುತೇಕ ತೋಟ-ಗದ್ದೆಗಳಲ್ಲಿ ಹಾದು ಹೋಗಿದ್ದು ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ಇದರಿಂದ ಭೂಮಿ ಕಳೆದುಕೊಳ್ಳುವ ಭೀತಿ ರೈತರಿಗೆ ಎದುರಾಗಿದೆ. ರೈತರ ಗಮನಕ್ಕೆ ತಾರದೆ ಗಡಿ ಕಲ್ಲು ಅಳವಡಿಸಿದ್ದರಿಂದ ತಮ್ಮ ಗದ್ದೆಯಲ್ಲಿ ಕಲ್ಲು ಹಾಕಲಾಗಿದೆ. ನಿಮ್ಮ ಗದ್ದೆಯಲ್ಲಿ ಕಲ್ಲು ನಿಲ್ಲಿಸಲಾಗಿದೆಯೇ ಎಂಬ ಚರ್ಚೆ ಪ್ರಾರಂಭವಾಗಿದೆ. ಮುಂದೆ ಹೇಗೊ? ಏನೋ ಎಂಬ ಚಿಂತೆ ರೈತರಲ್ಲಿ ಮನೆ ಮಾಡಿದೆ. ರೈಲ್ವೆ ಮಾರ್ಗ ಹಾದು ಹೋಗುವ ಭೂಮಿಯ ಮಾಲೀಕರಿಗೂ ಈ ಬಗ್ಗೆ ಮಾಹಿತಿ ನೀಡಿ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ತಿಳಿಸಿ ಧೈರ್ಯ ತುಂಬುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.