ದೇವರು ವರ ಕೊಟ್ಟರೆ ಪೂಜಾರಿ ವರ ಕೊಡಲ್ಲ ಅನ್ನೊಂದಕ್ಕೆ ಒಂದು ಸಾಕ್ಷಾತ್ ಉದಾಹರಣೆ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಂಡುಬಂದಿದೆ. ರಾಜ್ಯದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಹೊರತು ಪಡಿಸಿದರೆ ಧಾರವಾಡ ಮಹಾನಗರ ಪಾಲಿಕೆ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದು ಹೆಸರು ವಾಸಿಯಾಗಿದೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಆ.24): ದೇವರು ವರ ಕೊಟ್ಟರೆ ಪೂಜಾರಿ ವರ ಕೊಡಲ್ಲ ಅನ್ನೊಂದಕ್ಕೆ ಒಂದು ಸಾಕ್ಷಾತ್ ಉದಾಹರಣೆ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಂಡುಬಂದಿದೆ. ರಾಜ್ಯದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಹೊರತು ಪಡಿಸಿದರೆ ಧಾರವಾಡ ಮಹಾನಗರ ಪಾಲಿಕೆ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದು ಹೆಸರು ವಾಸಿಯಾಗಿದೆ.
ಹುಬ್ಬಳ್ಳಿ _ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬರೊಬ್ಬರಿ 84 ವಾರ್ಡಗಳು ಇವೆ. ಆದರೆ ಈ ಅವಳಿ ನಗರ ವ್ಯಾಪ್ತಿಯಲ್ಲಿ ಯಾರಾದರೂ ಬಡವರು ತೀರಿ ಹೋದರೆ ಅವರ ಮೃತ ದೇಹವನ್ನ ಸ್ಮಶಾನದವರೆಗೆ ಸಾಗಿಸಲು ಆಗುತ್ತಿಲ್ಲ. ಆದರೆ ಇನ್ನು ಕೆಲವರು ಶ್ರಿಮಂತರ ದುಡ್ಡು ಇರೋರು ಬೇರೆ ವ್ಯವಸ್ಥೆ ಮಾಡಿಕ್ಕೊಳ್ಳುತ್ತಾರೆ ಆದರೆ ಬಡವರಿಗೆ ಎಂದು ದಾನಿಗಳಿಬ್ಬರು ತಮ್ಮ ಪೌಂಡೇಶನ್ ವತಿಯಿಂದ 4 ಮುಕ್ತಿ ವಾಹನಗಳನ್ನ ಪಾಲಿಕೆಗೆ ದೇಣಿಗೆ ನೀಡಿದ್ದಾರೆ. ಆದರೆ ಅವು ಕಳೆದ ಮೂರು ತಿಂಗಳಿಂದ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ.
ಕನ್ನಡ ಶಾಲೆಯಿಂದ ಚಂದ್ರಯಾನದವರೆಗೆ: ಗದಗ ಮೂಲದ ವಿಜ್ಞಾನಿ ಸುಧೀಂದ್ರ ಬಿಂದಗಿ ರೋಚಕ ಜರ್ನಿ
ಧಾರವಾಡ ಮೂಲದ ರವಿ ಮತ್ತು ಜಯಾ ಬೋಪಳಾಪೂರ ಫೌಂಡೇಶನ್ ವತಿಯಿಂದ ಅವಳಿ ನಗರಕ್ಕೆ ನಾಲ್ಕು ಮುಕ್ತಿ ವಾಹನಗಳನ್ನ ಮಹಾಮಗರ ಪಾಲಿಕೆಗೆ ನೀಡಿದ್ದಾರೆ. ಆದರೆ ಮಹಾನಗರ ಪಾಲಿಕೆಯ ಅಧಿಕಾರಿಗಳ ಕಳೆದ ಮೂರು ತಿಂಗಳ ಹಿಂದೆ ತಮ್ಮ ಅಧಿನದಲ್ಲಿಟ್ಡುಕ್ಕೊಂಡು ಮುಕ್ತಿ ವಾಹನಗಳನ್ನ ಬಡವರಿಗೆ ಅನೂಕೂಲ ಮಾಡಿಕೊಡುತ್ತಿಲ್ಲ. ರವಿ ಮತ್ತು ಜಯಾ ಬೋಪಳಾಪೂರ ಫೌಂಡೇಶನ್ ಇವರು ಮೂಲತಹ ಧಾರವಾಡ ಮೂಲದವರು ಇವರು ನ್ಯೂಯಾರ್ಕ್‌ನಲ್ಲಿ ಬಿಸಿನೆಸ್ ಮಾಡಿಕ್ಕೊಂಡು ಯಶಸ್ಸನ್ನು ಕಂಡಿದ್ದಾರೆ. ಅದರಂತೆ ಅವಳಿ ನಗರಕ್ಕೆ ತಮ್ಮದೊಂದು ಕೊಡುಗೆ ಇರಲಿ ಎಂದು 70 ಲಕ್ಷ ಮೌಲ್ಯದ ನಾಲ್ಕು ಮುಕ್ತಿ ಸದ್ಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ.
ಆದರೆ ಇಷ್ಡೆಲ್ಲ ದಾನಿಗಳು ಪಾಲಿಕೆಗೆ ಕೊಟ್ಟರೆ ಪಾಲಿಕೆಯವರು ಅವುಗಳನ್ನು ನಡೆಸಿಕ್ಕೊಂಡ ರೀತಿ ನೋಡಿದ್ರೆ ಅಯ್ಯೋ ಅನ್ಸುತ್ತೆ ಕೊಟ್ಟ ದಾನಿಗಳಿಗೆ ಇದು ಗೊತ್ತಾದ್ರೆ ಅವರು ಎಷ್ಡು ಪೀಲ್ ಮಾಡಿಕ್ಕೊಳ್ಳುತ್ತಾರೆ ಗೊತ್ತಾ...? ಇನ್ನು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಾಲ್ಕು ವಾಹನಗಳನ್ನ ರವಿ ಮತ್ತು ಜಯಾ ಬೋಪಳಾಪೂರ ಪೌಂಡೇಶನ್ ವತಿಯಿಂದ ನೀಡಿದ್ದ ವಾಹನಗಳು ಉದ್ಘಾಟನೆ ಆದ ದಿನದಿಂದಲೂ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ಆದರೆ ಮಹಾನಗರ ಪಾಲಿಕೆಯ ಆಯುಕ್ತರು ಈ ಕಡೆ ಗಮನಹರಿಸಿ ಬೇಕಿದೆ.
ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್
ಇನ್ನು ಸ್ಥಳಿಯರು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಅಳಲು ತೋಡಿಕ್ಕೊಂಡು ಪಾಲಿಕೆಯವರು ನಿರ್ವಹಣೆ ಮಾಡಲಿಕ್ಕೆ ಆಗದಿದ್ದರೆ ಖಾಸಗಿ ವ್ಯಕ್ತಿಗಳಿಗೆ ಆಗಲಿ, ಜಿಲ್ಲಾ ಸ್ಪತ್ರೆಗೆ ಆಗಲಿ, ಡಿಎಚ್ಓ ಕಚೇಗೆಯಾಗಲಿ ಕೊಡಲಿ ಅಲ್ಲಿಯಾದ್ರೂ ಅವುಗಳು ನಿರ್ವಹಣೆಯಾಗಲಿ ಅವರು ಒಂದು ದರ ಪೀಕ್ಸ್ ಮಾಡಿ ಬಡವರಿಗೆ ಮೃತ ದೇಹಗಳನ್ನ ಸಾಗಿಸಲು ಅನೂಕೂಲವಾಗುತ್ತೆ ಎಂದು ಸ್ಥಳಿಯರು ಮಹಾನಗರ ಪಾಲಿಕೆಯ ಆಯುಕ್ತರ ವಿರುದ್ದ ಕಿಡಿಕಾರಿದರು. ಇನ್ನು ಈ ವರದಿಯನ್ನ ನೋಡಿಯಾದರೂ ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್ ಮತ್ತು ಉಪ ಮೇಯರ್ ಈ ವಾಹನಗಳಿಗೆ ಮುಕ್ತಿ ಕೊಡಿಸದರೆ ಮಾತ್ರ ದೇಣಿಗೆ ಕೊಟ್ಟವರಿಗೂ ಒಂದು ಗೌರವ ಕೊಟ್ಟಂತಾಗುತ್ತದೆ.