ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಯಚೂರು (ಆ.24): ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಭಾರತದ ತಂತ್ರಜ್ಞಾನದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ದಿನವಾಗಿದೆ. ನಮ್ಮ ಪ್ರಾಚೀನ ಭಾರತದ ಇತಿಹಾಸದಲ್ಲಿ, ವೇದ ಪುರಾಣಗಳಲ್ಲಿ, ಪ್ರಾಚೀನ ಋುಷಿ ಮುನಿಗಳು ತಂತ್ರಜ್ಞಾನದ ಕುರಿತು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ.
ಆ ಎಲ್ಲದರ ಶ್ರೀಮಂತಿಕೆ ನಮ್ಮ ದೇಶದ್ದಾಗಿದೆ. ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಚಂದ್ರಯಾನ-3 ನೌಕೆ ತುಂಬಾ ಯಶಸ್ವಿಯಾಗಿ ನಿಗದಿತ ಸ್ಥಳವನ್ನು ತಲುಪಿರುವುದು ಅಭಿನಂದನಾರ್ಹ ವಿಷಯವಾಗಿದೆ. ಆ ಭಗವಂತನ ಅನುಗ್ರಹ, ಹರಿ-ಗುರುಗಳ ವಿಶೇಷ ಕೃಪೆ, ವಿಜ್ಞಾನಿಗಳ ಪರಿಶ್ರಮ, ಭಾರತ ಸರ್ಕಾರದ ಪ್ರೋತ್ಸಾಹ ಜೊತೆಗೆ ಎಲ್ಲ ಜನರ ವಿಶೇಷ ಶುಭ ಹಾರೈಕೆಯ ಫಲವಾಗಿ ಚಂದ್ರಯಾನ-3 ಯಶಸ್ಸು ಕಂಡಿದೆ. ಇನ್ನು ಇಂತಹ ಹತ್ತು ಹಲವು ಸಂಶೋಧನೆಗಳು ದೇಶದ ವಿಜ್ಞಾನಿಗಳಿಂದ ಮೂಡಿ ಬರಲಿ. ದೇಶಕ್ಕೆ ವಿಶ್ವ ವ್ಯಾಪ್ತಿಯ ಕೀರ್ತಿ ಪ್ರತಿಷ್ಠೆಗಳು ಪ್ರಾಪ್ತಿಗೊಳ್ಳಲಿ ಎಂದು ಭಗವಂತ ಹಾಗೂ ಶ್ರೀಗುರುರಾಯರಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ಸಂತಸವನ್ನು ಹಂಚಿಕೊಂಡಿದ್ದಾರೆ.
ಸಚಿವ ಸಂಪುಟದಿಂದ ಈಶ್ವರ ಖಂಡ್ರೆ ಕೈಬಿಡಲು ಭಗವಂತ ಖೂಬಾ ಆಗ್ರಹ
ಮುದಗಲ್ನಲ್ಲಿ ಸಂಭ್ರಮಾಚರಣೆ: ಇಸ್ರೋ ವಿಜ್ಞಾನಿಗಳ ಚಂದ್ರಯಾನ -3 ಉಡಾವಣೆ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಯಶಸ್ವಿಯಾಗಿರುವುದಕ್ಕೆ ಮುದಗಲ್ ಪಟ್ಟಣದ ಯುವಕರು ರಾಯಚೂರು - ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿದರು. ಮುದಗಲ್ ಪಟ್ಟಣ ಪೋಲೀಸ ಠಾಣೆ ಮುಂದಿರುವ ರಾಜ್ಯ ಹೆದ್ದಾರಿಯಲ್ಲಿ ಯುವಕರ ಪಡೆ ಭಾರತಾಂಬೆಯ ಭಾವಚಿತ್ರವನ್ನು ಹಿಡಿದುಕೊಂಡು ರಾಷ್ಟ್ರ ಧ್ವಜವನ್ನು ಎತ್ತಿ ಹಿಡಿದು, ಪಟಾಕಿ ಸಿಡಿಸಿ ಇಸ್ರೋ ವಿಜ್ಞಾನಿಗಳಿಗೆ ಜೈ ಕಾರ ಹಾಕಿದರು. ಈ ಸಮಯದಲ್ಲಿ ಅಮರೇಶ ಸುಂಕದ, ಶಿವಕುಮಾರ ಕುಂಬಾರ, ಶಂಕರ, ವಿಜಯ, ಶಿವು ಯಾದವ,ಆನಂದ ಮಡಿವಾಳ, ಶರಣಬಸವ, ಸೇರಿದಂತೆ ಮುಂತಾದವರಿದ್ದರು.
‘ಗೃಹ ಆರೋಗ್ಯ’ ಯೋಜನೆಗೆ ಸರ್ಕಾರದ ಚಿಂತನೆ: ಸಚಿವ ದಿನೇಶ ಗುಂಡೂರಾವ್
ರಾಯಚೂರಿನಲ್ಲಿ ಮಕ್ಕಳಿಂದ ಶಿವಲಿಂಗಕ್ಕೆ ಪೂಜೆ: ಚಂದ್ರಯಾನ-3 ಯಶಸ್ವಿಯಾಗಲೆಂದು ರಾಯಚೂರಿನಲ್ಲಿ ಪುಟಾಣಿ ಮಕ್ಕಳು ಶಿವಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ನಗರದ ಎನ್ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಸನ್ನಿಧಿ ಹಿರೇಮಠ ನೇತೃತ್ವದಲ್ಲಿ ಪುಟಾಣಿ ಮಕ್ಕಳೇ ಪೂಜೆ ನೆರವೇರಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಶ್ಲೋಕಗಳನ್ನ ಹೇಳುತ್ತಾ ಇಸ್ರೋದ ಪ್ರಯತ್ನಕ್ಕೆ ಜಯಸಿಗಲಿ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.