ವೀಕೆಂಡ್ ಕರ್ಫ್ಯೂ ನಡುವೆ ವೈದ್ಯರ ತಂಡದಿಂದಲೇ ಭಾರೀ ಮೋಜು ಮಸ್ತಿ
ಶಿರಸಿಯ ಪಾಂಡವರ ಹೊಳೆಯಲ್ಲಿ ಹೂಂ ಅಂತೀಯಾ ಮಾವ, ಉಹೂಂ ಅಂತೀಯಾ ಮಾವ ಸಾಂಗ್‌ಗೆ ಭರ್ಜರಿ ಸ್ಟೆಪ್
ವೈದ್ಯರ ಮೋಜಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಶಿರಸಿ, (ಜ.09): ಕೊರೋನಾ ಸೋಂಕು(Coronavirus) ಹೆಚ್ಚಳವಾಗುತ್ತಿರುವುದರಿಂದ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (Weekedn Curfew) ಜಾರಿ ಮಾಡಿದೆ. ಆದ್ರೆ, ವೈದ್ಯರ ತಂಡವೇ ಕೋವಿಡ್ ನಿಯಮ ಮೀರಿ ಮೋಜು ಮಸ್ತಿಯಲ್ಲಿ ತೊಡಗಿದೆ.
ಹೌದು...ಶಿರಸಿಯ(Sirsi) ಪಾಂಡವರ ಹೊಳೆಯಲ್ಲಿ(River) ಈಜಾಡಿ, ಹೂಂ ಅಂತೀಯಾ ಮಾವ, ಉಹೂಂ ಅಂತೀಯಾ ಮಾವ ಸಾಂಗ್‌ಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
BJP MLA ಕೊರೋನಾ ರೂಲ್ಸ್ ಲೆಕ್ಕಿಸದೇ ಡಾನ್ಸ್ ಮಾಡಿದ ಬಿಜೆಪಿ ಶಾಸಕ, ವಿಡಿಯೋ ವೈರಲ್
ಜನರಿಗೆ ತಿಳುವಳಿಕೆ ಹೇಳಬೇಕಾಗಿದ್ದ ವೈದ್ಯ ದಂಡು ಕಟ್ಟಿಕೊಂಡು ಹೊಳೆಯಲ್ಲಿ ಈಜಾಡಿ ಡಾನ್ಸ್ ಮಾಡಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ವೈದ್ಯ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋವನ್ನು ಶಿರಸಿಯ ವೈದ್ಯ ಡಾ.ದಿನೇಶ್ ಹೆಗಡೆ ಎನ್ನುವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಡಾ. ದಿನೇಶ ಹೆಗಡೆ ಸೇರಿದಂತೆ ಸುಮಾರು 10 ಮಂದಿ ವೈದ್ಯರ ತಂಡ ಪಾಂಡವರ ಹೊಳೆಯಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ವಿಡಿಯೋರಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗ್ತಿದ್ದಂತೇ ತನ್ನ ಫೇಸ್‌ಬುಕ್ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಇಂದು(ಆನುವಾರ) ವೀಕೆಂಡ್ ಕರ್ಫ್ಯೂ ಇದ್ದರೂ ಮೋಜು ಮಾಡಿದ್ದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವೈದ್ಯರ ಮೋಜು ಮಸ್ತಿ ಅದಾಗಲೇ ಟ್ರೋಲ್ ಪೇಜ್ ಗಳ ಮೂಲಕವೂ ವೈರಲ್ ಆಗಿದೆ. ಪಾಂಡವರ ಹೊಳೆಯಲ್ಲಿ ಈಜಬಾರದು ಎಂದು ಶಿರಸಿ ಗ್ರಾಮೀಣ ಠಾಣೆಯವರು ಬೋರ್ಡ್ ಸಹ ಹಾಕಿದ್ದಾರೆ. ಅದ್ಯಾವುದನ್ನು ಲೆಕ್ಕಿಸದೇ ವೈದ್ಯರ ತಂಡ ಹೊಳೆಗೆ ಇಳಿದು ಮಜಾ ಮಾಡಿದ್ದಾರೆ.
ನಾಗರಿಕ ವಲಯದಿಂದ ಉತ್ತಮ ಸ್ಪಂದನೆ
ಕೊರೋನಾ 3ನೇ ಅಲೆ ತಡೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ (Weekend Curfew) ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನಾಗರಿಕ ವಲಯದಿಂದ ಉತ್ತಮ ಸ್ಪಂದನೆ ದೊರಕಿದೆ. ಜೊತೆಗೆ ಪೊಲೀಸರು ಸಹ ಬಿಗಿ ಬಂದೋಬಸ್ತ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ರಾಜ್ಯ ಸರ್ಕಾರದ ಉದ್ದೇಶಕ್ಕೆ ಆರಂಭಿಕ ಯಶಸ್ಸು ದೊರೆತಿದೆ.
ರಾಜಧಾನಿ ಬೆಂಗಳೂರು, ರಾಯಚೂರು, ಬೀದರ್, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ, ಮೈಸೂರು, ಹಾಸನ, ಕೋಲಾರ, ದಾವಣಗೆರೆ, ತುಮಕೂರು, ಮಂಡ್ಯಗಳಲ್ಲಿ ಕರ್ಫ್ಯೂಗೆ ಜನರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದರು. ಆದರೆ ಕೊಪ್ಪಳ, ಚಾಮರಾಜನಗರ, ಬೆಳಗಾವಿಗಳಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ದೊರೆತಿದ್ದು, ಪೊಲೀಸರ (Police) ಶ್ರಮದ ಬಳಿಕವೂ ಜನಜೀವನ ಎಂದಿನಂತೆಯೇ ಇತ್ತು. ಇನ್ನು ಚಿತ್ರದುರ್ಗ, ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಬೆಳಗ್ಗೆ ಮಾಮೂಲಿನಂತಿದ್ದ ಜನಸಂಚಾರ ಮಧ್ಯಾಹ್ನದ ಮೇಲೆ ವಿರಳಗೊಳ್ಳುವ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಹೆಚ್ಚಿನ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ನಾಗರಿಕರೇ ಸ್ವಯಂಪ್ರೇರಿತರಾಗಿ ಮನೆಯಿಂದ ಹೊರಗಡೆ ಬಾರದ್ದರಿಂದ ಪ್ರಮುಖ ರಸ್ತೆಗಳು ಬಿಕೋ (Main Roads) ಎನ್ನುತ್ತಿದ್ದವು. ಬಸ್ ನಿಲ್ದಾಣದಲ್ಲಿ (Bus Station) ಬಸ್‌ಗಳಿದ್ದರೂ ಪ್ರಯಾಣಿಕರಿರಲಿಲ್ಲ. ಖಾಸಗಿ ಬಸ್‌ಗಳು ಪ್ರಯಾಣಿಕರಿಲ್ಲದೆ ಓಡಾಟ ನಿಲ್ಲಿಸಿದರೆ, ಸರ್ಕಾರಿ ಬಸ್‌ಗಳು ಬೆರಳೆಣಿಕೆಯ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಇನ್ನು ಅಗತ್ಯ ವಸ್ತುಗಳ ಖರೀದಿಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದ್ದರೂ ಜನ ಇಲ್ಲದೆ ಇದ್ದುದಕ್ಕೆ ಹಣ್ಣು, ತರಕಾರಿ, ದಿನಸಿ ಅಂಗಡಿಗಳಿಗೆ ನಷ್ಟವುಂಟಾಯಿತು.
ಕಲಬುರಗಿ, ರಾಯಚೂರು, ದಾವಣಗೆರೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದಲೇ ನಗರದಲ್ಲಿ ಸಂಚರಿಸುತ್ತಿದ್ದ ವಾಹನಗಳ ಪ್ರಮಾಣ ಇಳಿಮುಖವಾಗಿತ್ತು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದರಿಂದ ಸಾರ್ವಜನಿಕರು ಬಂದು ಖರೀದಿ ಮಾಡಿ ಹಿಂದಿರುಗುತ್ತಿದ್ದರು. ಮಂಗಳೂರಿನಲ್ಲಿ ನಿಯಮ ಮೀರಿ ಗ್ರಾಹಕರಿಗೆ ಕುಳಿತು ಆಹಾರ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ದಂಡ ವಿಧಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ತುರ್ತು ಮತ್ತು ಅಗತ್ಯ ಸೇವೆಗಳನ್ನು (Essential Services) ಹೊರತುಪಡಿಸಿ ಬಂದ್ ಮಾಡಿಸಿದರು.