* ಕಾಂಗ್ರೆಸ್ ನಡಿಗೆಗೆ ಶುಭ ಹಾರೈಸಿದ ಪಂಚಮಸಾಲಿ ಶ್ರೀ
* ಹರ ಜಾತ್ರೆ ಮುಂದೂಡುವಂತೆ ವಚನಾನಂದ ಶ್ರೀಗಳಿಗೆ ಉಪರಾಷ್ಟ್ರಪತಿ ಸಲಹೆ
* ಸಂಸತ್ ಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ ವೆಂಕಯ್ಯ ನಾಯ್ಡು
ದಾವಣಗೆರೆ(ಜ.09): ಒಮಿಕ್ರೋನ್(Omicron) ಹಿನ್ನೆಲೆಯಲ್ಲಿ ಹರ ಜಾತ್ರೆ ಮುಂದೂಡುವಂತೆ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ(Vachananand Swamiji) ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಭಾರತದ ಆಜಾದಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ(Parliament House) ಆಗಮಿಸುವಂತೆ ಆಹ್ವಾನಿಸಿದ್ದಾರೆ.
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಯೋಗ ಸಾಧನೆ, ಪಂಚಮಸಾಲಿ ಜಗದ್ಗುರು ಪೀಠದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಅವರಿಂದ ಮಾಹಿತಿ ಸಂಗ್ರಹಿಸಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆಜಾದಿ ಅಮೃತ ಮಹೋತ್ಸವ(Azadi Amrut Mahotaswa) ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ ಆಗಮಿಸುವಂತೆ ಆತ್ಮೀಯವಾಗಿ ಮಾತನಾಡಿಸಿ ಆಹ್ವಾನ ನೀಡಿದ್ದಾರೆ.
Panchamasali Reservation: ಕಾನೂನಾತ್ಮಕವಾಗಿ 2ಎ ಮೀಸಲಾತಿಗೆ ಪ್ರಯತ್ನ: ವಚನಾನಂದ ಶ್ರೀ
ಸದ್ಯ ದೇಶಾದ್ಯಂತ(India) ಕೊರೋನಾ 3ನೇ ಅಲೆ(Corona 3rd Wave), ಒಮಿಕ್ರೋನ್ ಭೀತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜ.14ರಿಂದ 2 ದಿನಗಳ ಕಾಲ ಹರಿಹರ ಪಂಚಮಸಾಲಿ ಪೀಠದಲ್ಲಿ(Harihara Panchamasali Peetha) ಹಮ್ಮಿಕೊಂಡÜ ಹರ ಜಾತ್ರೆಯನ್ನು(Hara Fair) ಒಮಿಕ್ರೋನ್ ಭೀತಿ ಕಡಿಮೆಯಾಗುವವರೆಗೂ ಹರಜಾತ್ರೆ ಮುಂದೂಡುವಂತೆ ಸಲಹೆ ನೀಡಿದ್ದಾರೆ.
ಪಂಜಾಬ್ ಘಟನೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ವಚನಾನಂದ ಶ್ರೀ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಪಂಜಾಬ್‌ಗೆ(Punjab) ಭೇಟಿ ನೀಡಿದ ವೇಳೆ ನಡೆದ ಘಟನೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದಾಗಿದೆ. ಈ ಬೆಳವಣಿಗೆ ನಿಜಕ್ಕೂ ಅಪಾಯಕಾರಿ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಒಕ್ಕೂಟ ವ್ಯವಸ್ಥೆ. ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ಕೇಂದ್ರದ ಸುಗಮ ಆಡಳಿತಕ್ಕೆ ರಾಜ್ಯ ಸರ್ಕಾರಗಳು(State Governments) ಸಹಕಾರ ನೀಡಬೇಕು. ಇಂತಹ ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರು ಈ ದೇಶದ ಪ್ರಧಾನಿಗಳಾಗಿರುತ್ತಾರೆ. ಹೀಗಿರುವಾಗ ಮೊನ್ನೆ ಪಂಜಾಬ್‌ನಲ್ಲಿ ನಡೆದ ಘಟನೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಗ್ಯವಾಗಿರಲಿ, ದೇಶಕ್ಕೆ ಇನ್ನಷ್ಟು ಉತ್ತಮ ಆಡಳಿತ ನೀಡಲಿ ಎಂದು ಶ್ರೀಗಳು ಹಾರೈಸಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಬನ್ನಿ: ವಚನಾನಂದ ಶ್ರೀಗೆ ಡಿಕೆಶಿ ಆಹ್ವಾನ
ಬೆಂಗಳೂರು: ನಗರದ ಶ್ವಾಸಯೋಗ ಪೀಠಕ್ಕೆ ಭೇಟಿ ನೀಡಿ ಶ್ವಾಸಗುರು ಹಾಗೂ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ ಅವರಿಗೆ ಮೇಕೆದಾಟು ಪಾದಯಾತ್ರೆಯಲ್ಲಿ(Mekedatu Padayatra) ಭಾಗವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆಹ್ವಾನ ನೀಡಿದ್ದರು.
Hara Fair: ಅಯ್ಯಪ್ಪ, ದತ್ತಮಾಲೆ ರೀತಿ ಈ ಬಾರಿ ಹರ ಜಾತ್ರೆ
ಇಂದಿನಿಂದ ಜ.19ರವರೆಗೆ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭವಾಗಿದೆ. ‘ನಮ್ಮ ನೀರು-ನಮ್ಮ ಹಕ್ಕು’ ಘೋಷಣೆಯಡಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ವಚನಾನಂದ ಸ್ವಾಮೀಜಿಗೆ ಆಹ್ವಾನ ನೀಡಿ ಯೋಜನೆಯ ಅನಿವಾರ್ಯತೆಯನ್ನು ವಿವರಿಸಿದ್ದರು.
ಕಾವೇರಿ ನದಿ(Kaveri River) ಪಾತ್ರದಲ್ಲಿ ಹರಿಯುವ ನೀರು ಅನುಪಯುಕ್ತವಾಗಿ ಸಮುದ್ರ ಸೇರುತ್ತಿದೆ. ಸುಮಾರು 66 ಟಿಎಂಸಿ ನೀರಿನ ಸದ್ಬಳಕೆಯಿಂದ 400 ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಜತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಬಹುದಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು. ಈ ವೇಳೆ ವಚನಾನಂದ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್(Congress) ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಶುಭ ಹಾರೈಸಿದ್ದರು.