ಕಳೆದ 2021ರಲ್ಲಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ಪಿಐಎಲ್ ಸಲ್ಲಿಕೆಯಾದ ಮೇಲೆ ಕೋರ್ಟ್ ಈ ಬಗ್ಗೆ ಸರ್ಕಾರದ ಅಪರ ಕಾರ್ಯದರ್ಶಿಗಳಿಗೆ ಮಾಹಿತಿ ಕೇಳಿತ್ತು.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ.19): ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದ್ರೆ ಕೆಲ ಆಡಳಿತಾತ್ಮಕ ಕಚೇರಿಗಳು ಬೆಂಗಳೂರಿನಿಂದ ಸ್ಥಳಾಂತವಾಗಬೇಕು ಅನ್ನೋ ವಾದವಿತ್ತು, ಹೋರಾಟಗಳು ನಡೆದಿದ್ದವು. ಇದೆಲ್ಲದರ ಪರಿಣಾಮ ಕಳೆದ 2019ರಲ್ಲಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಸಮಗ್ರ ಸರ್ವತೋಮುಖ ಅಭಿವೃದ್ಧಿ ತೀವ್ರಗೊಳಿಸಲು, ಈ ಭಾಗದ ಜನರಿಗೆ ರಾಜ್ಯದ ಆಡಳಿತ ಹತ್ತಿರವಾಗಲು ಪ್ರಮುಖ 9 ರಾಜ್ಯ ಸರ್ಕಾರದ ಕಚೇರಿಗಳನ್ನ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲಾಗಿತ್ತು. ಇದರಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿಯು ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಸ್ಥಳಾಂತರಗೊಂಡಿತ್ತು. ವಿಪರ್ಯಾಸದ ಸಂಗತಿ ಎಂದರೆ 2019 ರಿಂದ ಇಲ್ಲಿಯವರೆಗೆ ಕೆಬಿಜೆಎನ್‌ಎಲ್ ಕಚೇರಿ ಸ್ಥಳಾಂತರವಾಗಿಯೇ ಇಲ್ಲ.
undefined
ಕೋರ್ಟ್‌ನಲ್ಲಿ KBJNL ಮುಖ್ಯ ಕಚೇರಿ ಸ್ಥಳಾಂತರ ವಿಚಾರ: 2019ರಲ್ಲಿ ಆದೇಶವಾದ್ರು ಜಲಸಂಪನ್ಮೂಲ ಇಲಾಖೆಗೆ ಸೇರಿದ ಕೃಷ್ಣಾ ಭಾಗ್ಯ ಜಲ ನಿಗಮ, ಬೆಂಗಳೂರು ಕಚೇರಿ ಆಲಮಟ್ಟಿಗೆ ಸ್ಥಳಾಂತರವಾಗಿಯೇ ಇಲ್ಲ. ಈ ವಿಚಾರ ಅರಿತುಕೊಂಡ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ (ಅರ್ಜಿ ಸಂಖ್ಯೆ 5563/2021) ಅರ್ಜಿ ಸಲ್ಲಿಕೆ ಮಾಡಿತ್ತು. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾದ ಮೇಲು ಕೃಷ್ಣಾ ಭಾಗ್ಯ ಜಲ ನಿಗಮ, ಬೆಂಗಳೂರು ಕಚೇರಿ ಮಾತ್ರ ಸ್ಥಳಾಂತರವಾಗಿಯೇ ಇಲ್ಲ.
Vijayapura: ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ನರಳಾಟ!
ಹೈಕೋರ್ಟ್‌ಗೂ ತಪ್ಪು ಮಾಹಿತಿ: ಕಳೆದ 2021ರಲ್ಲಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ಪಿಐಎಲ್ ಸಲ್ಲಿಕೆಯಾದ ಮೇಲೆ ಕೋರ್ಟ್ ಈ ಬಗ್ಗೆ ಸರ್ಕಾರದ ಅಪರ ಕಾರ್ಯದರ್ಶಿಗಳಿಗೆ ಮಾಹಿತಿ ಕೇಳಿತ್ತು. ಆದ್ರೆ ಈ ವೇಳೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕೋರ್ಟ್‌ಗೆ 2019 ರಲ್ಲೆ KBJNL ಕಚೇರಿ ಆಲಮಟ್ಟಿಗೆ ಸ್ಥಳಾಂತರವಾಗಿದೆ ಎಂದು ಸರ್ಕಾರದ ಆದೇಶವನ್ನೆ ಪುನರ್ ಉತ್ತರಿಸಿ ಹೇಳಿದ್ದರು. ಕೋರ್ಟ್ ಕೂಡ ಇದೆ ಮಾಹಿತಿಯನ್ನ ದಿನಾಂಕ 27.07.2021 ರಂದು ಅರ್ಜಿದಾರರಿಗೆ ನೀಡಿತ್ತು. ಆದ್ರೆ ಅಸಲಿಗೆ ಕೆಬಿಜೆಎನ್‌ಎಲ್ ಕಚೇರಿ ಸ್ಥಳಾಂತರವಾಗಿರಲೇ ಇಲ್ಲ. ಆದ್ರೆ ಇದಾದ ಬಳಿಕವಷ್ಟೇ ನೋಡಿ ಇಡೀ ಪ್ರಕರಣ ಕಾವು ಪಡೆದುಕೊಂಡಿದ್ದು.
ದಾಖಲಾತಿ ನೀಡಿ ಸಿಕ್ಕಿಹಾಕಿಕೊಂಡ ಕೆಬಿಜೆಎನ್‌ಎಲ್ ಅಧಿಕಾರಿಗಳು: ಅದ್ಯಾವಾಗ ಅಧಿಕಾರಿಗಳೇ ಕೋರ್ಟ್ ಮಾಹಿತಿ ಕೇಳಿದಾಗ ಅದಾಗಲೇ ಆಲಮಟ್ಟಿಗೆ ಕೆಬಿಜೆಎನ್‌ಎಲ್ ಕಚೇರಿ ಸ್ಥಳಾಂತರಗೊಂಡಿದೆ ಎಂದು ಮಾಹಿತಿ ನೀಡಿತ್ತೋ, ಆಗಲೇ ನೋಡಿ ಪಿಐಎಲ್ ಸಲ್ಲಿಕೆ ಮಾಡಿದ್ದ ಅರ್ಜಿದಾರರು ಅಲರ್ಟ್ ಆಗಿದ್ದು. ಅಧಿಕಾರಿಗಳನ್ನ ಡಾಕ್ಯೂಮೆಂಟ್‌ನಲ್ಲೆ ಹಿಡಿದು ಹಾಕಬೇಕು ಎಂದು 31.07.2021 ರಂದು ಕೆಬಿಜೆಎನ್ಎಲ್‌ನ ಕೆಲ ದಾಖಲಾತಿ ಬಗ್ಗೆ ಮುಖ್ಯ ಇಂಜಿನೀಯರ್‌ಗೆ ಮಾಹಿತಿ ಕೇಳಿದ್ರು. ಇದಕ್ಕೆ 31.08.2021 ರಂದು ಉತ್ತರಿಸಿದ್ದ ಆಲಮಟ್ಟಿ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ಈ ಮಾಹಿತಿಯನ್ನ ಕೆಬಿಜೆಎನ್‌ಎಲ್ ಎಂ.ಡಿ ಕಚೇರಿ ಬೆಂಗಳೂರಿನಲ್ಲಿ ಪಡೆದುಕೊಳ್ಳಬೇಕು ಎಂದು ಪತ್ರ ಬರೆದಿದ್ದಾರೆ. ಇದೆ ಪತ್ರವನ್ನ ಪಡೆದ ಪಿಐಎಲ್ ಅರ್ಜಿದಾರರು ಎಂಡಿ ಕಚೇರಿ ಸ್ಥಳಾಂತರವಾಗಿಯೇ ಇಲ್ಲ ಎಂದು ಹೈಕೋರ್ಟ್ ಗಮನ ಸೆಳೆದಿದ್ದಾರೆ.. ಈ ಮೂಲಕ ಅಧಿಕಾರಿಗಳೆ ದಾಖಲಾತಿ ನೀಡಿ ಸಿಕ್ಕಿಬಿದ್ದಿದ್ದಾರೆ.
ಅಫಿಡವಿಟ್ ಸಲ್ಲಿಸಲು ಛಾಟಿ ಬೀಸಿದ ಕೋರ್ಟ್: ಪಿಐಎಲ್ ಹಾಕಿದ ಅರ್ಜಿದಾರರು ಅಸಲಿಯಲ್ಲಿ KBJNL ಕಚೇರಿ ಸ್ಥಳಾಂತರವೇ ಆಗಿಲ್ಲ ಎಂಬುದನ್ನ ಕೋರ್ಟ್ ಗಮನಕ್ಕೆ ತಂದರೋ ಆಗ ಕೋರ್ಟ್ ಸರ್ಕಾರಕ್ಕೆ ಛಾಟಿ ಬೀಸಿದೆ. ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ. ಇದರಿಂದ ಎಚ್ಚರಗೊಂಡಿರುವ ಸರ್ಕಾರದ ಅಧೀನ ಕಾರ್ಯದರ್ಶಿಗಳು KBJNL ಎಂಡಿಗೆ ತುರ್ತು ಪತ್ರವೊಂದನ್ನ ಬರೆದಿದ್ದಾರೆ.
ಕೆಬಿಜೆಎನ್‌ಎಲ್‌ಎಂಡಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ತುರ್ತು ಪತ್ರ: ದಿನಾಂಕ 12.05.2022 ರಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ ಹೆಚ್ ಕೆಬಿಜೆಎನ್‌ಎಲ್ ಎಂ.ಡಿಗೆ ತುರ್ತು ಪತ್ರ ಬರೆದಿದ್ದಾರೆ. ವಾರದೊಳಗೆ ಬೆಂಗಳೂರಿನ ಕೆಬಿಜೆಎನ್‌ಎಲ್‌ನ ಎಲ್ಲ ಕಚೇರಿಗಳನ್ನ ಸಿಬ್ಬಂದಿ ಸಹಿತವಾಗಿ ಆಲಮಟ್ಟಿಗೆ ಸ್ಥಳಾಂತರಿಸಬೇಕು. ಈ ಸಂಬಂಧ ಪಿಐಎಲ್ ಅರ್ಜಿ ಸಂಬಂಧವಾಗಿ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಬೇಕಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ವಿಜಯಪುರದಲ್ಲೊಂದು ವಿಶಿಷ್ಟ ಆಚರಣೆ: ಮಂಗಳಮುಖಿಯರಿಗೆ ಉಡಿ ತುಂಬಿದ ಹುಲಜಂತಿ ಭಕ್ತರು..!
ಇನ್ನಾದ್ರು ಸ್ಥಳಾಂತರವಾಗುತ್ತಾ KBJNL BENGALURU ಕಚೇರಿ: ಇಷ್ಟೆಲ್ಲ ಪ್ರಹಸನಗಳ ನಂತರವಾದ್ರು ಆಲಮಟ್ಟಿಗೆ ಎಂ.ಡಿ ಕಚೇರಿ ಸ್ಥಳಾಂತರವಾಗುತ್ತಾ ಅನ್ನೋ ಯಕ್ಷ ಪ್ರಶ್ನೆ ಕಾಡ್ತಿದೆ. ಇಡೀ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಮೇಲಾದ್ರು ಕಚೇರಿ ಸ್ಥಳಾಂತರವಾಗ್ತಾವಾ ಅನ್ನೋದನ್ನ ಉತ್ತರ ಕರ್ನಾಟಕ ಭಾಗದ ರೈತರು ಕಾಯ್ತಿದ್ದಾರೆ. ಇನ್ನು ಪಿಐಎಲ್ ಸಲ್ಲಿಕೆ ಮಾಡಿರುವ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್ ಜವಳಿ ಸಹ ಆಲಮಟ್ಟಿಗೆ ಇಂದು ಭೇಟಿ ನೀಡಿ ಕಚೇರಿ ಸ್ಥಳಾಂತವಾಗ್ತಿದ್ದಾವಾ ಅನ್ನೋದನ್ನ ಪರಿಶೀಲಿಸಿದ್ದಾರೆ. ಆದ್ರೆ ಈವರೆಗೂ ಯಾವುದೇ ಬೆಳವಣಿಗೆ ಇಲ್ಲ ಎನ್ನುವ ಮಾಹಿತಿಯನ್ನ ಮಾಧ್ಯಮಗಳಿಗೆ ಯಾಸೀನ್ ನೀಡಿದ್ದಾರೆ.