* ಯೋಗಿನಾರಾಯಣ ಮಠಕ್ಕೆ ಭೇಟಿ
* ಶೃಂಗೇರಿಯ ಋುಷ್ಯಶೃಂಗೇಶ್ವರನಿಗೂ ಆನ್‌ಲೈನ್‌ನಲ್ಲೇ ವಿಶೇಷ ಪೂಜೆ
* ಆನ್‌ಲೈನ್‌ನಲ್ಲೇ ಕಿಗ್ಗ ದರ್ಶನ
ಚಿಕ್ಕಬಳ್ಳಾಪುರ(ಮೇ.16): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬದ ನಿಮಿತ್ತ ಪತ್ನಿ ಉಷಾ ಸಮೇತರಾಗಿ ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಯಾತ್ರ ಕ್ಷೇತ್ರ ಚಿಂತಾಮಣಿಯ ಕೈವಾರ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿ, ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೇ ವೇಳೆ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಉಪಸ್ಥಿತರಿದ್ದು, ಮಠದಿಂದ ಗೌರವ ಸೂಚಿಸಿ ಶುಭ ಕೋರಿದರು. ಮಠದಲ್ಲಿ ಪ್ರಸಾದ ಸೇವಿಸಿದ ಬಳಿಕ ಬೆಂಗಳೂರಿಗೆ ಹೊರಟರು.
'ಜನ್ಮದಿನ ಆಚರಣೆ ಮಾಡಿಕೊಳ್ಳಲ್ಲ, ಜಾಹೀರಾತು ಕೊಡಬೇಡಿ'
ಆನ್‌ಲೈನ್‌ನಲ್ಲೇ ಕಿಗ್ಗ ದರ್ಶನ:
ಶಿವಕುಮಾರ್ ಅವರು ಹುಟ್ಟುಹಬ್ಬ ಅಂಗವಾಗಿ ತಮ್ಮ ಇಷ್ಟದೈವವಾದ ಶೃಂಗೇರಿಯ ಋುಷ್ಯಶೃಂಗೇಶ್ವರನ ದರ್ಶನವನ್ನು ಆನ್‌ಲೈನ್ ಮೂಲಕ ಪಡೆದರು. ಋುಷ್ಯಶೃಂಗೇಶ್ವರನಿಗೆ 101 ಕಾಯಿ ಒಡೆದು, ಕೊರೋನಾ ಮಹಾಮಾರಿ ಆದಷ್ಟು ಬೇಗ ನಿಯಂತ್ರಣವಾಗಲಿ ಎಂದು ಪ್ರಾರ್ಥಿಸಲಾಯಿತು. ಋುಷ್ಯಶೃಂಗೇಶ್ವರ ದೇವಾಲಯದ ಎದುರು ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗಾ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು.