* ಸಾವಿರಾರು ರೋಗಿಗಳು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ
* ರೋಗಿಗಳಲ್ಲಿ ಮತ್ತೆ ಅನಾರೋಗ್ಯ ಕಾಡಿದರೆ ಆಕ್ಸಿಜನ್ ಬೆಡ್ ನಮಗೆ ಸಿಗುವುದು ಅನುಮಾನ
* ಜಿಲ್ಲಾಡಳಿತಕ್ಕೆ ಕಿರಿಕಿರಿ
ಬಾಗಲಕೋಟೆ(ಮೇ.16): ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಒಂದೆಡೆಯಾದರೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಗುಣಮುಖರಾದರೂ ಮನೆಗೆ ತೆರಳದೆ ಮತ್ತೆ ಅನಾರೋಗ್ಯ ಕಾಡುವ ಭಯದಲ್ಲಿ ತಾವಿದ್ದ ಬೆಡ್‌ಗಳನ್ನು ಬಿಡಲು ನಿರಾಕರಿಸುತ್ತಿರುವುದು ಜಿಲ್ಲಾಡಳಿತಕ್ಕೆ ಹೊಸ ಸಮಸ್ಯೆಯಾಗಿದೆ.
undefined
ಜಿಲ್ಲೆಯಲ್ಲಿ 1,200ಕ್ಕೂ ಹೆಚ್ಚು ತೀವ್ರತರದ ಕೊರೋನಾ ಸೋಂಕಿತರು ಆಕ್ಸಿಜನ್ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಸಾವಿರಾರು ರೋಗಿಗಳು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಎರಡು ವಿಭಾಗಗಳಲ್ಲಿ ಗುಣಮುಖರಾದ ಕೊರೋನಾ ಸೋಂಕಿತರು ತಾವಿರುವ ಬೆಡ್‌ಗಳನ್ನು ಖಾಲಿ ಮಾಡಿ ಮನೆಗೆ ತೆರಳಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಹಜವಾಗಿ ಜಿಲ್ಲಾಡಳಿತಕ್ಕೆ ಕಿರಿಕಿರಿಯಾಗುತ್ತಿದೆ. ಗುಣಮುಖರಾದರೂ ಮನೆಗೆ ತೆರಳಲು ಹಿಂದೇಟು ಹಾಕಲು ರೋಗಿಗಳಲ್ಲಿ ಕಾಡುತ್ತಿರುವ ಸಮಸ್ಯೆ ಏನೆಂದು ಹುಡುಕಲು ಹೊರಟ ಜಿಲ್ಲಾಡಳಿತಕ್ಕೆ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಬಾಗಲಕೋಟೆಗೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್: ಇಬ್ಬರಲ್ಲಿ ಸೋಂಕು ಪತ್ತೆ
ರೋಗಿಗಳಲ್ಲಿ ಮತ್ತೆ ಅನಾರೋಗ್ಯ ಕಾಡಿದರೆ ಆಕ್ಸಿಜನ್ ಬೆಡ್ ನಮಗೆ ಸಿಗುವುದು ಅನುಮಾನ ಎಂದು ಭಾವಿಸಿ ತಾವಿರುವ ಬೆಡ್‌ಗಳನ್ನು ಬಿಡಲು ನಿರಾಕರಿಸುತ್ತಿದ್ದಾರೆ. ರೋಗಿಗಳ ಈ ಮನಸ್ಥಿತಿಯನ್ನು ಕಂಡು ಆರೋಗ್ಯ ಇಲಾಖೆ ರೋಗಿಗಳ ಜೊತೆಗೆ ಸಮನ್ವಯತೆ ಸಾಧಿಸಲು ಮಾನಸಿಕ ತಜ್ಞರನ್ನು ನೇಮಕ ಮಾಡಿ ಆರೋಗ್ಯವಾಗಿರುವವರಲ್ಲಿ ಆತ್ಮಸ್ಥೈರ್ಯ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಒಂದೊಮ್ಮೆ ಅನಾರೋಗ್ಯ ಸಮಸ್ಯೆ ಕಾಡಿದರೆ ಶೀಘ್ರವಾಗಿ ಇಲಾಖೆ ಸ್ಪಂದಿಸಲಿದೆ ಎಂದು ಭರವಸೆ ನೀಡಿ ಗುಣಮುಖರಾದವರನ್ನು ಡಿಸ್ಚಾರ್ಜ್ ಮಾಡುತ್ತಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona