ಬೆಡ್‌ಗಾಗಿ ಅಲೆದಾಡುತ್ತಿದ್ದ ಕೊರೋನಾ ಸೋಂಕಿತನ‌ ನೆರವಿಗೆ ಧಾವಿಸಿದ ಶ್ರೀರಾಮುಲು

By Suvarna NewsFirst Published May 15, 2021, 4:56 PM IST
Highlights

* ಕೊರೋನಾ ಸೋಂಕಿತನ‌ ನೆರವಿಗೆ ಧಾವಿಸಿದ ಸಚಿವ ಶ್ರೀರಾಮುಲು
* ಬೆಡ್ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದ ಶ್ರೀರಾಮುಲು
* ಜಿಲ್ಲಾಸ್ಪತ್ರೆ ಜೊತೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಅಲೆದಾಡಿದ್ರೂ ಸೋಂಕಿತನಿಗೆ ಬೆಡ್ ಸಿಕ್ಕಿರಲಿಲ್ಲ. 
 

ಚಿತ್ರದುರ್ಗ, (ಮೇ.15): ಆಸ್ಪತ್ರೆಯಲ್ಲಿ ಬೆಡ್‌ ಸಿಗದೇ ಪರದಾಡುತ್ತಿದ್ದ ಕೊರೋನಾ ಸೊಂಕಿತನ ನೆರವಿಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಬಂದಿದ್ದಾರೆ.

"

ಹೌದು...ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಸೋಂಕಿತ ನಾಗಭೂಷಣ್ ಎನ್ನುವರಿಗೆ ಕೊರೋನಾ ಸೋಂಕು ತಗುಲಿತ್ತು.  ಜಿಲ್ಲಾಸ್ಪತ್ರೆ ಜೊತೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಅಲೆದಾಡಿದ್ರೂ ಬೆಡ್ ಸಿಕ್ಕಿರಲಿಲ್ಲ. 

ಚಿತ್ರದುರ್ಗ : ಕೋವಿಡ್ ಸೆಂಟರ್‌ನಲ್ಲಿ ಹಾಡಿ ರಂಜಿಸಿದ ಸೋಂಕಿತರು

ಕೊನೆಗೆ ಸಚಿವ ಶ್ರೀರಾಮುಲು ಮೊರೆ ಹೋಗಿದ್ದಾರೆ. ಬಳಿಕ ಶ್ರೀರಾಮುಲು ಅವರು ಅವರಿಗೆ ಬೆಡ್ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಸೋಂಕಿತನ ಜೀವ ಕಾಪಾಡಿದ್ದಾರೆ.

ಇನ್ನು ಈ ಬಗ್ಗೆ ಸೋಂಕಿತನ ಸಹೋದರ ದಯಾಕರ್ ಪ್ರತಿಕ್ರಿಯಿಸಿ,ನಿನ್ನೆಯಿಂದ (ಶುಕ್ರವಾರ) ಜಿಲ್ಲಾಸ್ಪತ್ರೆ ಜೊತೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಅಲೆದ್ರು ಬೆಡ್ ಸಿಕ್ಕಿರಲಿಲ್ಲ. ಇಂದು (ಶನಿವಾರ) ಸಚಿವ ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿದ್ವಿ. ಕೂಡಲೇ ಅವರು ಸ್ಪಂದಿಸಿ ನಮ್ಮ‌ ಅಣ್ಣನಿಗೆ ಬೆಡ್ ವ್ಯವಸ್ಥೆ ಮಾಡಿದ್ರು. ಅವರಿಗೆ ನಮ್ಮ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದರು.

ನಮ್ಮ ಅಣ್ಣನವರ ಸ್ಥಿತಿ ತುಂಬಾ ಕ್ರಿಟಿಕಲ್ ಆಗಿತ್ತು. ಇಂತಹ ಸಂದರ್ಭದಲ್ಲಿ ಸಚಿವರನ್ನ ಸಂಪರ್ಕಿಸಿದಾಗ ಅವರೇ ಖುದ್ದು ಬೆಡ್ ವ್ಯವಸ್ಥೆ ಮಾಡಿದ್ರು. ನಿಜಕ್ಕೂ ಅವರ ಈ ಸಹಾಯಕ್ಕೆ ನಾವು ಅಭಾರಿ ಎಂದರು.
 

click me!