ಉರಿವ ಬೆಂಕಿಗೆ ಬಿಜೆಪಿಯಿಂದ ತುಪ್ಪ: ಡಿಕೆಶಿ ಕಿಡಿ

By Suvarna NewsFirst Published Aug 13, 2020, 7:04 AM IST
Highlights

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಬಿಜೆಪಿಗೆ ಸಂಬಂಧವಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಲವು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಆ.13) : ‘ಬಿಜೆಪಿಯವರು ಗಲಭೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಿ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ. ಮುಖ್ಯಮಂತ್ರಿ ಒಬ್ಬರು ಬಿಟ್ಟರೆ ಉಳಿದ ಸಚಿವರು, ಮುಖಂಡರು ಉರಿಯುತ್ತಿರುವ ಬೆಂಕಿಗೆ ತುಪ್ಪ, ಸೀಮೆಎಣ್ಣೆ, ಪೆಟ್ರೋಲ್‌ ಸುರಿದ ಬೆಂಕಿ ಹಚ್ಚುತ್ತಿದ್ದಾರೆ. ಇಡೀ ಘಟನೆಯ ಹಿಂದೆ ಬಿಜೆಪಿಯವರ ರಾಜಕೀಯ ಪಿತೂರಿಯಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಈ ಗಲಭೆಗೂ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ಸಂಬಂಧವಿಲ್ಲ. ಕಾಂಗ್ರೆಸ್‌ ಪಕ್ಷ $ಅಖಂಡ ಶ್ರೀನಿವಾಸ ಮೂರ್ತಿ ಅವರ ಬೆಂಬಲಕ್ಕಿದೆ. ಅವರ ಮನೆ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

'ಮತಾಂಧ ಮುಸ್ಲಿಮರಿಗೆ ಡಿಕೆಶಿ ಬೆಂಬಲ ಇದೆ ಅನ್ಸುತ್ತೆ'...

ಬುಧವಾರ ಮಧ್ಯಾಹ್ನ ಗಲಭೆ ಪೀಡಿತ ಡಿ.ಜೆ.ಹಳ್ಳಿಗೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸ ಹಾಗೂ ದಾಳಿಗೆ ಒಳಗಾದ ಪೊಲೀಸ್‌ ಠಾಣೆಯನ್ನು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಇಂತಹ ಸಮಯದಲ್ಲಿ ಸೌಹಾರ್ದತೆ ಕಾಪಾಡುವುದು ಮುಖ್ಯ. ಮುಸ್ಲಿಂ ಬಾಂಧವರು ಮಾನವ ಸರಪಳಿ ನಿರ್ಮಿಸಿ ಹಿಂದೂ ದೇವಾಲಯವನ್ನು ರಕ್ಷಿಸಿದ್ದಾರೆ. ಹೀಗಾಗಿ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ ಎಂದರು.

ಬೆಂಗಳೂರು ,ಗಲಭೆ: ಅಖಂಡ ಶ್ರೀನಿವಾಸ ಮೂರ್ತಿ–ಡಿಕೆ ಶಿವಕುಮಾರ್ ಭೇಟಿ...

‘ನಾನು ಪ್ರತ್ಯೇಕವಾಗಿ ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ, ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಯಾವ ರೀತಿ ಪ್ರಚೋದಿಸುತ್ತಿದ್ದಾರೆ ಎಂಬುದನ್ನು ಜನರೇ ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜಕೀಯ ಮಾಡಲು ಇದು ಸಂದರ್ಭವಲ್ಲ’ ಎಂದರು.

click me!