ಯಾದಗಿರಿ: ಎಸಿಬಿ ಬಲೆಗೆ ಬಿದ್ದ ಆರೋಗ್ಯಾಧಿಕಾರಿಗಳು

By Kannadaprabha NewsFirst Published Aug 12, 2020, 3:19 PM IST
Highlights

ನರ್ಸ್‌ ನೇಮಕಾತಿಗಾಗಿ ಲಂಚ ಕೇಳಿದ ಆರೋಪ|  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ| ಲಂಚದ ಹಣ ಪಡೆದ ಆರೋಪದಡಿ ವೈದ್ಯಾಧಿಕಾರಿಗಳಿಬ್ಬರನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು| 

ಯಾದಗಿರಿ(ಆ.12):ಶುಶ್ರೂಶಕಿ (ನರ್ಸ್‌) ನೇಮಕಾತಿಗಾಗಿ ಲಂಚ ಕೇಳಿದ್ದಾರೆ ಎಂಬ ಆರೋಪ ಮಾಡಿ, ಭ್ರಷ್ಟಾಚಾರ ನಿಗ್ರಹ ದಳದ ಮೊರೆ ಹೋದ ನೊಂದ ಅಭ್ಯರ್ಥಿಯೊಬ್ಬರ ದೂರಿನ ಮೇರೆಗೆ ಮಂಗಳವಾರ ಇಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಲಂಚದ ಹಣ ಪಡೆದ ಆರೋಪದಡಿ ವೈದ್ಯಾಧಿಕಾರಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಡಿವೈಎಸ್ಪಿ ಪಿ. ಗುರುನಾಥ್‌ ಮತ್ತೂರ್‌ ಹಾಗೂ ಇನ್ಸಪೆಕ್ಟರ್‌ ಗುರುಪಾದ ಬಿರಾದರ್‌ ಅವರ ನೇತೃತ್ವದ ತಂಡ, ಕಚೇರಿ ಮೇಲೆ ದಾಳಿ ನಡೆಸಿದೆ.

ಯಾದಗಿರಿಯಿಂದ ಗುಳೆ ಬಂದು ಬೆಂಗ್ಳೂರಿನಲ್ಲಿ ಮಿಂಚಿದ ವಿದ್ಯಾರ್ಥಿ ಮನೆಗೆ ಸಚಿವ ಸುರೇಶ್ ಕುಮಾರ್

ನೇಮಕಾತಿಗಾಗಿ 25 ಸಾವಿರ ರು.ಗಳ ಹಣ ಕೇಳಿದ್ದರು ಎಂದು ಆರೋಪದಿಂದಾಗಿ ಬಲೆ ಬೀಸಿದ ಎಸಿಬಿ ಅಧಿಕಾರಿಗಳು, ಡಿಎಚ್‌ಓ ಡಾ.ಎಂ.ಎಸ್‌.ಪಾಟೀಲ್‌ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಿದ್ಧನಗೌಡ ಪಾಟೀಲರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರು. ಮಂಗಳವಾರ ರಾತ್ರಿವರೆಗೂ ವೈದ್ಯಾಧಿಕಾರಿಗಳ ಮನೆಗಳಿಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
 

click me!